ಕರ್ನಾಟಕ

karnataka

ETV Bharat / sitara

ಒಬೇರಾಯ್​ಗೆ ಬೆದರಿಕೆ ಕರೆ:  ಕೊಲ್ಲುವುದಾಗಿ ಎಚ್ಚರಿಕೆ ಕೊಟ್ಟರಾ ನಕ್ಸಲರು.? - news kannada

ಬಾಲಿವುಡ್ ನಟ ವಿವೇಕ್ ಒಬೇರಾಯ್​ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಲಾಗಿದೆಯಂತೆ. ಈ ರೀತಿ ಅನಾಮಿಕ ಕರೆ ಬಂದಿದ್ದರಿಂದ ಅವರ ಮನೆಗೆ ಭದ್ರತೆ ಒದಗಿಸಿಲಾಗಿದೆ.

ಸಂಗ್ರಹ ಚಿತ್ರ

By

Published : May 24, 2019, 12:44 PM IST

Updated : May 24, 2019, 3:20 PM IST

ಇತ್ತೀಚೆಗೆ ಬಾಲಿವುಡ್ ನಟಿ ಐಶ್ವರ್ಯ ರೈ ಬಗ್ಗೆ ಟ್ರೋಲ್ ಮಾಡಲಾಗಿದ್ದ ಮೀಮ್ ಶೇರ್ ಮಾಡಿ ಟೀಕೆಗೆ ಗುರಿಯಾಗಿದ್ದ ನಟ ವಿವೇಕ್ ಒಬೇರಾಯ್​ಗೆ ಇದೀಗ ಮತ್ತೊಂದು ಕಂಟಕ ಕಾಡಲಾರಂಭಿಸಿದೆಯಂತೆ.

ಹೌದು, ಅವರ ಮೊಬೈಲ್​ಗೆ ಅನಾಮಿಕ ಕರೆಯೊಂದು ಬಂದಿದ್ದು, ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರಂತೆ. ಈ ಕರೆ ನಕ್ಸಲ್​ರಿಂದ ಬಂದಿದೆ ಎನ್ನಲಾಗುತ್ತಿದೆ. ಕರೆ ಮಾಡಿದ ನಕ್ಸಲ್​ಗಳು, ಈ ಸಾರಿ ನಿನ್ನನ್ನು ಮುಗಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರಂತೆ. ಈ ಬೆದರಿಕೆಯಿಂದ ಆತಂಕಕ್ಕೀಡಾದ ಒಬೇರಾಯ್​ ಭದ್ರತೆಗಾಗಿ ಮುಂಬೈ ಪೊಲೀಸರ ಮೊರೆ ಹೋಗಿದ್ದಾರಂತೆ.

ನಟ ವಿವೇಕ್ ಒಬೇರಾಯ್, ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್​ ಸಿನಿಮಾದಿಂದ ಸ್ವಲ್ಪ ಸುದ್ದಿಗೆ ಆಹಾರವಾಗಿದ್ದರು. ಇನ್ನು ಲೋಕ ಕದನದ ಎಕ್ಸಿಟ್​ ಪೋಲ್​ ಬಂದ ದಿನ ನಟಿ ಐಶ್ವರ್ಯ ರೈ ಬಗ್ಗೆ ಟ್ರೋಲ್ ಮಾಡಿ ಟೀಕೆಗೆ ಗುರಿಯಾಗಿದ್ದರು. ಹೀಗೆ. ಒಂದಿಲ್ಲೊಂದು ಸಂಕಷ್ಟದ ಸುಳಿಗೆ ಸಿಕ್ಕಿಹಾಕಿಕೊಳ್ಳುತ್ತಿರುವ ಒಬೇರಾಯ್​ ಇದೀಗ ಜೀವ ಬೆದರಿಕೆಯಲ್ಲಿ ಓಡಾಡುತ್ತಿದ್ದಾರೆ.

Last Updated : May 24, 2019, 3:20 PM IST

ABOUT THE AUTHOR

...view details