ಕರ್ನಾಟಕ

karnataka

ETV Bharat / sitara

ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಯ 'ಫಿದಾ' ಆಲ್ಬಂ ಬಿಡುಗಡೆ - undefined

ಡಾ. ವಿಷ್ಣುವರ್ಧನ್ ಅವರ ಅಭಿಮಾನಿ ಪೃಥ್ವಿರಾಜ್ ನಿರ್ಮಾಣ ಮಾಡಿ ಹಾಡಿರುವ 'ಫಿದಾ' ಆಲ್ಬಂ ಹಾಡನ್ನು ವಿಷ್ಣು ಅಳಿಯ ಅನಿರುಧ್ ಜತ್ಕರ್ ಬಿಡುಗಡೆ ಮಾಡಿ ಹೊಸಬರ ಪ್ರಯತ್ನಕ್ಕೆ ಶುಭ ಕೋರಿದ್ದಾರೆ.

ಪೃಥ್ವಿರಾಜ್

By

Published : Jun 19, 2019, 2:39 PM IST

ಸದ್ಯಕ್ಕೆ ಸ್ಯಾಂಡಲ್​ವುಡ್​​​​​ನಲ್ಲಿ ಹೊಸಬರ ಆಗಮನ ಒಂದು ಕಡೆಯಾದರೆ ಮತ್ತೊಂದು ಕಡೆ ಕಲಾತ್ಮಕ ಚಲನಚಿತ್ರಗಳ ಪ್ರಯೋಗ ನಡೆಯುತ್ತಿದೆ. ಇದರ ಜೊತೆಗೆ ಹೊಸ ಹೊಸ ಆಲ್ಬಮ್ ಸಾಂಗ್​​​​​​​​​​​​ಗಳು ಅಬ್ಬರವೂ ಸಹ ಜೋರಾಗಿದೆ.

'ಫಿದಾ' ಆಲ್ಬಂ ಬಿಡುಗಡೆ ಸಮಾರಂಭ

ರ್‍ಯಾಪರ್ ಚಂದನ್​ ಶೆಟ್ಟಿ ರ್‍ಯಾಪ್​​​​​​​​​​​​ ಸಾಂಗ್​​​​​​​ಗಳ ಮೂಲಕ ಯಾವಾಗ ಸ್ಯಾಂಡಲ್​​​​​​​​ವುಡ್​​​​​ನಲ್ಲಿ ಸೌಂಡ್​​ ಮಾಡಿದರೋ ಅಂದಿನಿಂದ ಕನ್ನಡ ಚಿತ್ರರಂಗದಲ್ಲಿ ಆಲ್ಬಮ್ ಸಾಂಗ್​​​​​​​​​​​​​​ಗಳು ಪರ್ವ ಹೊಸ ತಿರುವು ಪಡೆದುಕೊಂಡಿತು.ಅದೇ ರೀತಿ ಈಗ ಪೃಥ್ವಿರಾಜ್ ಎಂಬ ಸಾಹಸಸಿಂಹನ ಅಭಿಮಾನಿಯೊಬ್ಬರು 'ಫಿದಾ' ಎಂಬ ಆಲ್ಬಮ್ ವಿಡಿಯೋ ಸಾಂಗ್ ರೆಡಿ ಮಾಡಿದ್ದು ವಿಷ್ಣು ಅವರ ಅಳಿಯ ಅನಿರುಧ್ ಜತ್ಕರ್ ಈ ಆಲ್ಪಮ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಪೃಥ್ವಿರಾಜ್ ತಮ್ಮ ಸ್ನೇಹಿತರ ಜೊತೆಗೂಡಿ ಈ ಆಲ್ಬಂ ಸಾಂಗ್ ರೆಡಿ ಮಾಡಿದ್ದಾರೆ. ಸಾಹಿತಿ ಜಯಂತ್ ಕಾಯ್ಕಿಣಿ ಈ ಆಲ್ಬಂಗೆ ಸಾಹಿತ್ಯ ಬರೆದಿದ್ದಾರೆ. ಸ್ವತ: ಪೃಥ್ವಿರಾಜ್ ಅವರೇ ಈ ಹಾಡನ್ನು ಹಾಡಿದ್ದಾರೆ. ನಿರ್ಮಾಣ ಕೂಡಾ ಪೃಥ್ವಿರಾಜ್ ಅವರದ್ದೇ. ನಾಯಕಿಯಾಗಿ ಸಾತ್ವಿಕ ಅಯ್ಯಪ್ಪ ನಟಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಸುಮಾರು 5 ದಿನಗಳ ಕಾಲ ಶೂಟಿಂಗ್​ ಮಾಡಲಾಗಿದೆ.

For All Latest Updates

TAGGED:

ABOUT THE AUTHOR

...view details