2020ರಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಾಡಿದ್ದ ಟ್ವೀಟ್ ಪೋಸ್ಟ್ವೊಂದು ಅತೀ ಹೆಚ್ಚು ಲೈಕ್ಸ್ ಪಡೆದಿದೆ ಎಂಬ ಸುದ್ದಿಯನ್ನ ಟ್ವಿಟರ್ ಆಫ್ ಇಂಡಿಯಾ ಬಹಿರಂಗ ಪಡಿಸಿದೆ. ಅನುಷ್ಕಾ ಶರ್ಮಾ ಗರ್ಭಿಣಿಯಾಗುತ್ತಿದ್ದಾರೆ.
ನಾವಿನ್ನು ಮೂರು ಜನ ಅಂತಾ ಕೊಹ್ಲಿ ಟ್ವಿಟರ್ ಪೋಸ್ಟ್ ಮಾಡಿದ್ರು. ಈ ಪೋಸ್ಟ್ 2020ರಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಲೈಕ್ಸ್ ಪಡೆದಿದೆ ಎಂದು ಟ್ವಿಟರ್ ಆಫ್ ಇಂಡಿಯಾ ತಿಳಿಸಿದೆ.
ನಿನ್ನೆ ಅಂದ್ರೆ ಡಿಸೆಂಬರ್ 7ರಂದು ಟ್ವಿಟರ್ ಇಂಡಿಯಾ ಒಂದು ಸುದ್ದಿ ಹೇಳಿತ್ತು. 2020ನೇ ಇಸವಿಯಲ್ಲಿ ಟ್ವಿಟರ್ನಲ್ಲಿ ಯಾವ ಪೋಸ್ಟ್ ಹೆಚ್ಚು ಲೈಕ್ಸ್ ಪಡೆದಿದೆ, ಯಾವ ಪೋಸ್ಟ್ ಹೆಚ್ಚು ರಿಟ್ವೀಟ್ ಪಡೆದಿದೆ ಎಂದು ತಿಳಿಸುವುದಾಗಿ ಹೇಳಿತ್ತು. ಇಂದು ಆ ಸುದ್ದಿ ಪ್ರಕಟಿಸಿದೆ.
2020ರಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಪೋಸ್ಟ್ ಎಂದರೆ ಅನುಷ್ಕಾ ಗರ್ಭಿಣಿ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ ಪೋಸ್ಟ್. ಗರ್ಭಿಣಿ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಫೋಟೋ ಇರುವ ಆ ಪೋಸ್ಟ್ ಬರೋಬ್ಬರಿ 644K ಲೈಕ್ಸ್ ಪಡೆದಿದೆ.
ಇನ್ನು 2021 ಜನವರಿಯಲ್ಲಿ ಅನುಷ್ಕಾ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ. ಈ ದಂಪತಿ 2017ರಲ್ಲಿ ಹಸೆಮಣೆ ಏರಿದ್ದರು.