ಕರ್ನಾಟಕ

karnataka

ETV Bharat / sitara

ರೆಮ್ಡಿಸಿವಿರ್ ಎನ್ನುವ ಬದಲು ರೆಮೊ ಡಿಸೋಜಾ ಎನ್ನೋದೆ.. ನಕ್ಕು ವಿಡಿಯೋ ಶೇರ್​ ಮಾಡಿದ ಸ್ಟಾರ್​ ಕೋರಿಯಾಗ್ರಾಫರ್! - ರೆಮ್ಡಿಸಿವಿರ್

ರೆಮ್ಡಿಸಿವಿರ್ ಇಂಜೆಕ್ಷನ್ ಬೆಲೆ ಹಾಗೂ ಸರ್ಕಾರದ ವಿರುದ್ಧ ಯುವಕನೊಬ್ಬ ಖಾಸಗಿ ವಾಹಿನಿಯೊಂದರ ಜೊತೆಗೆ ಮಾತನಾಡುವಾಗ ಆಕ್ರೋಶ ವ್ಯಕ್ತಪಡಿಸಿದ್ದಾನೆ..

shares hilarious video
ನಕ್ಕು ವಿಡಿಯೋ ಶೇರ್​ ಮಾಡಿದ ಸ್ಟಾರ್​ ಕೋರಿಯಾಗ್ರಾಫರ್!

By

Published : May 14, 2021, 3:52 PM IST

ಹೈದರಾಬಾದ್ :ಸಿಟ್ಟಿನಲ್ಲಿ, ಮಾತಿನ ಭರದಲ್ಲಿ ರೆಮ್ಡಿಸಿವಿರ್ ಎನ್ನುವ ಬದಲು 'ರೆಮೊ ಡಿಸೋಜಾ' ಎಂದು ಹೇಳಿರುವ ಯುವಕನ ವಿಡಿಯೋ ಹಲವರಿಗೆ ನಗು ತರಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.

ಈ ವಿಡಿಯೋ ನೋಡಿ ಬಾಲಿವುಡ್‌ನ ನೃತ್ಯ ಸಂಯೋಜಕ ಹಾಗೂ ನಿರ್ದೇಶಕ ರೆಮೊ ಡಿಸೋಜಾ ಬಿದ್ದು ಬಿದ್ದು ನಕ್ಕಿದ್ದಾರೆ. ಖುದ್ದು ರೆಮೊ ಡಿಸೋಜಾ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದ ಅಂತ್ಯದ ದೃಶ್ಯವನ್ನು ಮಿಸ್ ಮಾಡಬೇಡಿ, ಎಲ್ಲರು ನಗುವುದಕ್ಕಾಗಿ ಅಷ್ಟೇ ಎಂದು ಬರೆದುಕೊಂಡಿದ್ದಾರೆ.

ರೆಮ್ಡಿಸಿವಿರ್ ಇಂಜೆಕ್ಷನ್ ಬೆಲೆ ಹಾಗೂ ಸರ್ಕಾರದ ವಿರುದ್ಧ ಯುವಕನೊಬ್ಬ ಖಾಸಗಿ ವಾಹಿನಿಯೊಂದರ ಜೊತೆಗೆ ಮಾತನಾಡುವಾಗ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ವೇಳೆ ರೆಮ್ಡಿಸಿವಿರ್ ಎನ್ನುವ ಬದಲು ರೆಮೊ ಡಿಸೋಜಾ ಎಂದು ಹೇಳಿದ್ದಾನೆ.

ಏತನ್ಮಧ್ಯೆ, ಜೇ ಭನುಶಾಲಿ, ಭಾರತಿ ಸಿಂಗ್, ಗೌರವ್ ಗೆರಾ, ಸುಗಂಧ ಮಿಶ್ರಾ ಭೋಸಲೆ ಮತ್ತು ಇತರರ ಸೆಲೆಬ್ರಿಟಿಗಳ ಕಾಮೆಂಟ್​ಗಳು ಸೇರಿದಂತೆ ರೆಮೋ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋ 2 ಮಿಲಿಯನ್ ವೀಕ್ಷಣೆ ಗಳಿಸಿದೆ.

ABOUT THE AUTHOR

...view details