ಕರ್ನಾಟಕ

karnataka

ETV Bharat / sitara

ಕಾಲಿಗೆ ಪೆಟ್ಟಾಗಿದ್ರೂ ಜಿಮ್​​​ ಮಾಡುವುದು ಮಾತ್ರ ನಿಲ್ಲಿಸಲ್ಲ ಮರಿ ಟೈಗರ್​​ - undefined

'ವರದ' ಸಿನಿಮಾ ಚಿತ್ರೀಕರಣದ ಫೈಟಿಂಗ್ ಸೀನ್ ವೇಳೆ ಕಾಲಿಗೆ ಪೆಟ್ಟಾಗಿದ್ದರೂ ವಿನೋದ್ ಪ್ರಭಾಕರ್ ಜಿಮ್​​ನಲ್ಲಿ ವರ್ಕೌಟ್ ಮಾಡುವುದನ್ನು ಮಾತ್ರ ಮರೆತಿಲ್ಲ. ಅವರು ಜಿಮ್​​ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

ಜಿಮ್​​ನಲ್ಲಿ ಮರಿಟೈಗರ್ ವರ್ಕೌಟ್​​​

By

Published : Apr 9, 2019, 7:10 PM IST

ಮರಿ ಟೈಗರ್​​, ಸ್ಯಾಂಡಲ್​​​ವುಡ್ 8 ಪ್ಯಾಕ್ ಹೀರೋ ಎಂದೇ ಕರೆಸಿಕೊಳ್ಳುವ ವಿನೋದ್ ಪ್ರಭಾಕರ್ 'ರಗಡ್'​ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ. 'ರಗಡ್' ಚಿತ್ರಕ್ಕಾಗಿ ಅವರು ಜಿಮ್​​ನಲ್ಲಿ ಸಾಕಷ್ಟು ವರ್ಕೌಟ್ ಮಾಡಿ 8 ಪ್ಯಾಕ್ ಕೂಡಾ ಗಳಿಸಿದ್ದರು.

ಜಿಮ್​​ನಲ್ಲಿ ಮರಿಟೈಗರ್ ವರ್ಕೌಟ್​​​

ಆದ್ರೆ ಕಾಲಿಗೆ ಪೆಟ್ಟಾಗಿ ನೋವಿನಲ್ಲಿದ್ದರೂ ವಿನೋದ್ ಜಿಮ್​​ನಲ್ಲಿ ವರ್ಕೌಟ್ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ಇತ್ತೀಚೆಗೆ 'ವರದ' ಸಿನಿಮಾ ಶೂಟಿಂಗ್ ಫೈಟಿಂಗ್ ಸೀನ್ ವೇಳೆ ವಿನೋದ್ ಕಾಲಿಗೆ ಪೆಟ್ಟಾಗಿತ್ತು. ತಕ್ಷಣವೇ ಹತ್ತಿರದಲ್ಲೇ ಇದ್ದ ಆರ್ಥೋಕೇರ್ ಸೆಂಟರ್​​​ನಲ್ಲಿ ಚಿಕಿತ್ಸೆ ಪಡೆದ ವಿನೋದ್ ನಂತರ ಶೂಟಿಂಗ್​​​ಗೆ ಹಾಜರಾಗಿದ್ದರು. ಕೆಲವು ದಿನಗಳವರೆಗೆ ರೆಸ್ಟ್ ಮಾಡಲು ಡಾಕ್ಟರ್ ಹೇಳಿದ್ದರೂ ವಿನೋದ್ ಮಾತ್ರ ಜಿಮ್​​​ನಲ್ಲಿ ವರ್ಕೌಟ್ ಮಾಡುವುದನ್ನು ನಿಲ್ಲಿಸಿಲ್ಲ.

ಆದರೆ ಕಾಲಿನಲ್ಲಿ ಮಾಡಬಹುದಾದ ವ್ಯಾಯಾಮಗಳನ್ನು ವಿನೋದ್​​​​​​​​ ನಿಲ್ಲಿಸಿದ್ದಾರೆ. ಕಾಲಿಗೆ ಬ್ಯಾಂಡೇಜ್ ಇದ್ದರೂ ಜಿಮ್​​​​​ಗೆ ಹೋಗಿ ವರ್ಕೌಟ್ ಮಾಡುತ್ತಿರುವ ಈ ವಿಡಿಯೋ ಸದ್ಯಕ್ಕೆ ವೈರಲ್ ಆಗಿದ್ದು, ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details