ಕರ್ನಾಟಕ

karnataka

ETV Bharat / sitara

ಸುಮಲತಾ ಪರ ನಿಂತ ಮರಿ ಟೈಗರ್​... ಪ್ರಚಾರಕ್ಕೆ ರೆಡಿ ಅಂದ್ರು ವಿನೋದ್​ ಪ್ರಭಾಕರ್​ - undefined

ಮಂಡ್ಯ ಲೋಕಸಭೆ ಚುನಾವಣೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದ್ದು ತಾನು ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂದು ಸುಮಲತಾ 18 ರ ನಂತರ ಘೋಷಿಸುವುದಾಗಿ ತಿಳಿಸಿದ್ದಾರೆ. ಇನ್ನು ವಿನೋದ್ ಪ್ರಭಾಕರ್ ಕೂಡಾ ಸುಮಲತಾ ಕರೆದರೆ ನಾನು ಅವರ ಪರ ಪ್ರಚಾರಕ್ಕೆ ರೆಡಿ ಎಂದು ಹೇಳಿದ್ದಾರೆ.

ವಿನೋದ್ ಪ್ರಭಾಕರ್

By

Published : Mar 17, 2019, 5:36 PM IST

ಈಗಾಗಲೇ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಚುನಾವಣೆ ಕಾವು ಬೇಸಿಗೆ ಬಿಸಿಲಿಗಿಂತ ಏರಿದೆ. ಇತ್ತ ಮಂಡ್ಯ ಕ್ಷೇತ್ರ ಇತರ ಎಲ್ಲಾ ಕ್ಷೇತ್ರಗಳಿಗಿಂತಲೂ ಕುತೂಹಲಕಾರಿ ಘಟ್ಟವನ್ನು ತಲುಪಿದೆ.

ವಿನೋದ್ ಪ್ರಭಾಕರ್

ಜೆಡಿಎಸ್​​​​ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಖಚಿತವಾಗಿದೆ. ಇನ್ನು ಸುಮಲತಾ ಅಂಬರೀಶ್ ಸ್ಪರ್ಧೆ ಕೂಡಾ ಖಚಿತವಾಗಿದ್ದು ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ಈ ತಿಂಗಳ 18 ರಂದು ಘೋಷಿಸುವುದಾಗಿ ಸುಮಲತಾ ಹೇಳಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ಸುಮಲತಾಗೆ ಬೆಂಬಲ ಸೂಚಿಸಿದ್ದಾರೆ. ನಟ ದರ್ಶನ್ ಕೂಡಾ ಸುಮಲತಾ ಪರ ಪ್ರಚಾರಕ್ಕೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ. ಈಗ ಸ್ಯಾಂಡಲ್​​​​ವುಡ್​​​​ನಿಂದ ಮತ್ತೊಬ್ಬ ನಟ ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ರೆಡಿ ಎಂದಿದ್ದಾರೆ.

ವಿನೋದ್ ಪ್ರಭಾಕರ್

ವಿನೋದ್ ಪ್ರಭಾಕರ್ ಸುಮಲತಾ ಪರ ಪ್ರಚಾರಕ್ಕೆ ರೆಡಿಯಾಗಿದ್ದಾರೆ. ಇಂದು 'ರಗಡ್' ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿನೋದ್ ಪ್ರಭಾಕರ್ 'ಪ್ರಚಾರಕ್ಕೆ ಸಂಬಂಧಿಸಿದಂತೆ ನನಗೆ ಇನ್ನೂ ಸುಮಲತಾ ಅವರಿಂದ ಯಾವುದೇ ಆಹ್ವಾನ ಬಂದಿಲ್ಲ, ಒಂದು ವೇಳೆ ಅವರು ನನಗೆ ಕರೆದರೆ ಖಂಡಿತವಾಗಲೂ ನಾನು ಅವರ ಪರ ಪ್ರಚಾರಕ್ಕೆ ಹೋಗುತ್ತೇನೆ' ಎಂದು ಮರಿ ಟೈಗರ್ ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details