ಸ್ಯಾಂಡಲ್ ವುಡ್ ಮರಿಟೈಗರ್, ಲೀಡಿಂಗ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಬಿರುದು ಪಡೆದ ವಿನೋದ್ ಪ್ರಭಾಕರ್ ಅಭಿನಯದ 'ರಗಡ್' ಚಿತ್ರ ಕಳೆದವಾರ ರಾಜ್ಯಾದ್ಯಂತ ಸುಮಾರು ೧೮೦ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.ಸಿನಿಮಾದಲ್ಲಿ ವಿನೋದ್ 8 ಪ್ಯಾಕ್ನಲ್ಲಿ ಘರ್ಜಿಸಿದ್ದು ಸಿನಿಮಾ ನೋಡಿದ ಪ್ರೇಕ್ಷಕ ಇದು ಪಕ್ಕಾ ಪೈಸಾ ವಸೂಲ್ ಸಿನಿಮಾ ಎಂದು ಪುಲ್ಮಾರ್ಕ್ಸ್ ನೀಡಿದ್ದಾರೆ.
ಮರಿಟೈಗರ್ಗೆ ಬ್ರೇಕ್ ನೀಡ್ತು 'ರಗಡ್': ಫುಲ್ಮಾರ್ಕ್ಸ್ ನೀಡಿದ್ರು ಅಭಿಮಾನಿಗಳು - undefined
ವಿನೋದ್ ಪ್ರಭಾಕರ್ ಅಭಿನಯದ 'ರಗಡ್' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು ಸುಮಾರು ೧೮೦ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಸಕ್ಸಸ್ ಮೀಟ್ನಲ್ಲಿ ವಿನೋದ್ ಪ್ರಭಾಕರ್ ಅವರು ಸಿನಿಮಾ ಮೆಚ್ಚಿ ಪ್ರೋತ್ಸಾಹಿಸುತ್ತಿರುವ ಜನತೆಗೆ ಧನ್ಯವಾದಗಳನ್ನು ತಿಳಿಸಿದರು.
![ಮರಿಟೈಗರ್ಗೆ ಬ್ರೇಕ್ ನೀಡ್ತು 'ರಗಡ್': ಫುಲ್ಮಾರ್ಕ್ಸ್ ನೀಡಿದ್ರು ಅಭಿಮಾನಿಗಳು](https://etvbharatimages.akamaized.net/etvbharat/images/768-512-2886577-525-cfcf5c53-c41a-4038-9eaf-8f92e7f60a23.jpg)
'ರಗಡ್' ಆ್ಯಕ್ಷನ್ ಚಿತ್ರವಾಗಿದ್ದು ಮಲ್ಟಿಪ್ಲೆಕ್ಸ್ಗಳಲ್ಲಿ ಕಲೆಕ್ಷನ್ ಸಾಮಾನ್ಯವಾಗಿದ್ದರೂ ಬಿ.ಸಿ. ಸೆಂಟರ್ಗಳಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ ಎಂದು ಚಿತ್ರತಂಡ ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡರು. ಅಲ್ಲದೆ ಮಲ್ಟಿಪ್ಲೆಕ್ಸ್ಗಳಲ್ಲಿ 'ರಗಡ್' ಚಿತ್ರಕ್ಕೆ ಪ್ರೈಮ್ ಟೈಂನಲ್ಲಿ ಶೋ ನೀಡದ ಕಾರಣ ಚಿತ್ರದ ಕಲೆಕ್ಷನ್ ಸ್ವಲ್ಪ ಕಡಿಮೆಯಾಗಿದೆ. ಹಾಗಾಗಿ ಪ್ರೈಂಟೈಮ್ನಲ್ಲಿ ಶೋ ಕೊಡುವಂತೆ ಈಗಾಗಲೇ ಚಿತ್ರದ ನಿರ್ಮಾಪಕ ವಿತರಕ ಜಯಣ್ಣ ಅವರ ಜೊತೆ ಮಾತನಾಡಿದ್ದು ಮುಂದಿನ ವಾರ ,ಮತ್ತಷ್ಟು ಚಿತ್ರಮಂದಿರಗಳಲ್ಲಿ 'ರಗಡ್' ಬಿಡುಗಡೆ ಆಗಲಿದೆ ಎಂದು ನಿರ್ಮಾಪಕ ತಿಳಿಸಿದರು.
ಸಿನಿಮಾ ಮೆಚ್ಚಿ ಪ್ರೋತ್ಸಾಹಿಸುತ್ತಿರುವ ಜನತೆಗೆ ವಿನೋದ್ ಪ್ರಭಾಕರ್ ಧನ್ಯವಾದಗಳನ್ನು ತಿಳಿಸಿದರು. ಚಿತ್ರದಲ್ಲಿ 8 ಪ್ಯಾಕ್ ನೋಡಿದ ಇತರ ನಿರ್ದೇಶಕರು ಕೂಡಾ ಮುಂದಿನ ಸಿನಿಮಾದಲ್ಲೂ ಬಾಡಿ ಮೆಂಟೇನ್ ಮಾಡಲು ಕೇಳುತ್ತಿದ್ದಾರೆ. ಆದರೆ ಇನ್ನೆರಡು ಚಿತ್ರಗಳ ನಂತರ ಮತ್ತೆ 8 ಪ್ಯಾಕ್ ಮಾಡುವುದಾಗಿ ತಿಳಿಸಿದರು. ಒಟ್ಟಿನಲ್ಲಿ 'ರಗಡ್' ಮರಿಟೈಗರ್ಗೆ ಒಂದೊಳ್ಳೆ ಬ್ರೇಕ್ ಕೊಟ್ಟಿರುವುದಲ್ಲದೆ ನಿರ್ಮಾಪಕರು ಜೇಬು ಕೂಡಾ ತುಂಬಿಸಿದೆ ಎನ್ನಬಹುದು.