ಕರ್ನಾಟಕ

karnataka

ETV Bharat / sitara

ವಿನೋದ್ ಪ್ರಭಾಕರ್ ಅಭಿನಯದ 'ರಗಡ್' ಚಿತ್ರದ ಆಡಿಯೋ ಬಿಡುಗಡೆ - undefined

ಸ್ಯಾಂಡಲ್​​​ವುಡ್​​ನಲ್ಲಿ ಮರಿಟೈಗರ್ ಎಂದೇ ಹೆಸರಾದ ವಿನೋದ್ ಪ್ರಭಾಕರ್ ಅಭಿನಯದ 'ರಗಡ್'​​​​​​​​​​​​​​​​​​​​ ಸಿನಿಮಾ ಆಡಿಯೋ ನಿನ್ನೆ ಬಿಡುಗಡೆಯಾಗಿದೆ. ಸಿನಿಮಾ ಇದೇ ತಿಂಗಳ 29 ರಂದು ಬಿಡುಗಡೆಯಾಗಲಿದೆ.

'ರಗಡ್' ಆಡಿಯೋ ಬಿಡುಗಡೆ

By

Published : Mar 18, 2019, 9:11 AM IST

ವಿನೋದ್ ಪ್ರಭಾಕರ್ ಅಭಿನಯದ 'ರಗಡ್' ಚಿತ್ರದ ಆಡಿಯೋ ನಿನ್ನೆ ಬಿಡುಗಡೆಯಾಗಿದೆ. ಕಲಾವಿದರ ಸಂಘದಲ್ಲಿ ನಡೆದ ಕಾರ್ಯಕ್ರಮಕ್ಕೆ ಮರಿ ಟೈಗರ್ ಸ್ನೇಹಿತ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್, ಲಹರಿ ವೇಲು ಭಾಗವಹಿಸಿ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

'ರಗಡ್' ಆಡಿಯೋ ಬಿಡುಗಡೆ

ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಅಭಿಮಾನ್ ರಾಯ್ ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶಕ ಮಹೇಶ್ ಗೌಡ ಸಾಹಿತ್ಯ ಬರೆದಿದ್ದಾರೆ. ಸಿನಿಮಾಕ್ಕಾಗಿ ವಿನೋದ್ ಪ್ರಭಾಕರ್ ದೇಹವನ್ನು ಸಾಕಷ್ಟು ಹುರಿಗೊಳಿಸಿದ್ದರು. ಅದರ ಫೋಟೋಶೂಟ್ ವರ್ಷದ ಹಿಂದೆಯೇ ವೈರಲ್ ಆಗಿತ್ತು. ವಿನೋದ್ ಈ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್​​​​​ಟೈನ್ಮೆಂಟ್ ಹಾಗೂ ಆ್ಯಕ್ಷನ್ ಚಿತ್ರ ಎಂದು ವಿನೋದ್ ಹೇಳಿದರು.

'ರಗಡ್' ಆಡಿಯೋ ಬಿಡುಗಡೆ

ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದರು. ಸಿನಿಮಾದಲ್ಲಿ ಚೈತ್ರರೆಡ್ಡಿ ವಿನೋದ್​​​ಗೆ ನಾಯಕಿಯಾಗಿ ನಟಿಸಿದ್ದಾರೆ. ಆಡಿಯೋ ಬಿಡುಗಡೆಗೂ ಕೆಲವು ದಿನಗಳ ಮುನ್ನ ಚಿತ್ರತಂಡ 'ನಿನ್ನನ್ನೇ ಪ್ರೀತಿಸುವೆ ಹಾಡಿನ‌ ಲಿರಿಕಲ್ ವಿಡಿಯೋ' ರಿಲೀಸ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಟ್ರೇಲರ್ ನೋಡಿದ ಮೇಲೆ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ಕ್ಯೂರಿಯಾಸಿಟಿ ಮತ್ತಷ್ಟು ಹೆಚ್ಚಾಗಿದೆ.

'ರಗಡ್' ಆಡಿಯೋ ಬಿಡುಗಡೆ

ಮಹೇಶ್​​​​​​ಗೌಡ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಅಮ್ಮ ಸಿನಿ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ‌ಎ‌.ಅರುಣ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಿಗ್ ಬಜೆಟ್​​ನಲ್ಲಿ ಸಾಕಷ್ಟು ರಿಚ್ ಆಗಿ ಮೂಡಿ ‌ಬಂದಿರುವ 'ರಗಡ್' ಸಿನಿಮಾ ಇದೇ ತಿಂಗಳ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

For All Latest Updates

TAGGED:

ABOUT THE AUTHOR

...view details