ನಟ ರಾಘವೇಂದ್ರ ರಾಜ್ಕುಮಾರ್ ಪುತ್ರ ವಿನಯ್ ರಾಜ್ಕುಮಾರ್ ಇದೀಗ ಬಾಕ್ಸಿಂಗ್ ಮಾಡಲು ಹೊರಟಿದ್ದಾರೆ. ಅಂದರೆ ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ಅವರು ಬಾಕ್ಸರ್ ಪಾತ್ರ ಮಾಡುತ್ತಿದ್ದಾರೆ.
ಶಿವಣ್ಣ, ಅಪ್ಪು ನಂತ್ರ ಬಾಕ್ಸರ್ ಆಗಲು ಹೊರಟ ಅಣ್ಣಾವ್ರ ವಂಶದ ಕುಡಿ - undefined
ಬಾಲನಟನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ನಟ ವಿನಯ್ ರಾಜ್ಕುಮಾರ್ 'ಸಿದ್ದಾರ್ಥ್' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದ್ದರು. ಇದೀಗ ಅವರು ಹೆಸರಿಡದ ಹೊಸ ಚಿತ್ರವೊಂದರಲ್ಲಿ ಬಾಕ್ಸರ್ ಪಾತ್ರ ಮಾಡುತ್ತಿದ್ದಾರೆ.
ವಿನಯ್ ತಾತ ವರನಟ ಡಾ. ರಾಜಕುಮಾರ್ ‘ತಾಯಿಗೆ ತಕ್ಕ ಮಗ’ ಸಿನಿಮಾದಲ್ಲಿ ಬಾಕ್ಸರ್ ಪಾತ್ರ ಮಾಡಿದ್ದರು. ದೊಡ್ಡಪ್ಪ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ‘ಯುವರಾಜ’ ಚಿತ್ರದಲ್ಲಿ ಬಾಕ್ಸರ್, ಚಿಕ್ಕಪ್ಪ ಪುನೀತ್ ರಾಜಕುಮಾರ್ ‘ಮೌರ್ಯ’ ಸಿನಿಮಾದಲ್ಲಿ ಬಾಕ್ಸರ್. ಇದೀಗ ವಿನಯ್ ರಾಜ್ಕುಮಾರ್ ಕೂಡಾ ಬಾಕ್ಸರ್ ಪಾತ್ರವನ್ನು ನಿಭಾಯಿಸಲು ಸಜ್ಜಾಗುತ್ತಿದ್ದಾರೆ. ‘ಗ್ರಾಮಾಯಣ’ ಸಿನಿಮಾ ಮುಗಿದ ಕೂಡಲೇ ಸಿನಿಮಾ ಸೆಟ್ಟೇರುತ್ತಿದ್ದು ಕರಮ್ ಚಾವ್ಲಾ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಹಂಬಲ್ ಪೊಲಿಟಿಷಿಯನ್ ನೊಗ್ರಾಜ್, ಅವನೇ ಶ್ರೀಮನ್ ನಾರಾಯಣ ಚಿತ್ರಗಳಲ್ಲಿ ಕರಮ್ ಚಾವ್ಲಾ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಇದೀಗ ತಾವೇ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸೂಕ್ತ ಟೈಟಲ್ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದು ಕ್ರೀಡಾ ಹಿನ್ನೆಲೆ ಇರುವ ಸಿನಿಮಾವಾಗಿದ್ದು ವಿನಯ್ ರಾಜ್ಕುಮಾರ್ ಈ ಸಿನಿಮಾದಲ್ಲಿ ಎರಡು ಶೇಡ್ನಲ್ಲಿ ನಟಿಸುತ್ತಿದ್ದಾರೆ. ಮೇ 7 ವಿನಯ್ ರಾಜ್ಕುಮಾರ್ ಹುಟ್ಟಿದಿನದ ವಿಶೇಷವಾಗಿ ಚಿತ್ರದ ಪೋಸ್ಟರ್ ಬಿಡುಗಡೆಯಾಗುತ್ತಿದೆ.