ತಮಿಳಿನ ‘ಮಾಸ್ಟರ್’ ಚಿತ್ರ ನಾಳೆ ತೆರೆಗೆ ಬರಲು ಸಜ್ಜಾಗಿದೆ. ಆದರೆ, ತಮಿಳುನಾಡಿನ ಖ್ಯಾತ ನಟರಾದ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ಮಾಸ್ಟರ್ ಸಿನಿಮಾ ಆನ್‌ಲೈನ್‌ನಲ್ಲಿ ಬಿಡುಗಡೆಗೆ ಮುನ್ನವೇ ಸೋರಿಕೆಯಾಗಿದೆ. ಇದು ಚಿತ್ರ ತಂಡಕ್ಕೆ ದೊಡ್ಡ ಆಘಾತ ತಂದಿದೆ.
ತಲಪತಿ ವಿಜಯ್ ಅವರ ಮುಂಬರುವ ಚಿತ್ರ ಮಾಸ್ಟರ್ ದೊಡ್ಡ ಪರದೆಯ ಮೇಲೆ ಬಿಡುಗಡೆಯಾಗಲು ಕೆಲವೇ ಗಂಟೆಗಳ ಬಾಕಿ ಇರುವಾಗ ಚಿತ್ರದ ಹಲವು ದೃಶ್ಯಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ. ಸೋರಿಕೆಯಾದ ದೃಶ್ಯಗಳಲ್ಲಿ ವಿಜಯ್ ಅವರ ಪರಿಚಯದ ದೃಶ್ಯ ಮತ್ತು ಚಲನಚಿತ್ರದ ಇತರ ಅನೇಕ ತುಣುಕುಗಳು ಸೇರಿವೆ.
ಈ ಹಿನ್ನೆಲೆ ಸೋಮವಾರ ಟ್ವೀಟ್ ಮಾಡಿರುವ ಮಾಸ್ಟರ್ ನಿರ್ದೇಶಕ ಲೋಕೇಶ್ ಕನಗರಾಜ್, ‘ಚಿತ್ರದ ದೃಶ್ಯಗಳು ಸಿಕ್ಕರೆ ದಯವಿಟ್ಟು ಯಾರಿಗೂ ಶೇರ್ ಮಾಡಬೇಡಿ. ನಿಮಗಾಗಿ ಮಾಸ್ಟರ್ ಚಿತ್ರವನ್ನು ನಿರ್ಮಿಸಲು ಒಂದೂವರೆ ವರ್ಷ ಕಷ್ಟಪಟ್ಟಿದ್ದೇವೆ. ಚಿತ್ರವನ್ನು ನೀವು ಥಿಯೇಟರ್‌ಗಳಲ್ಲಿಯೇ ನೋಡಿ ಸಂಭ್ರಮಿಸುತ್ತೀರಿ ಎಂಬ ನಿರೀಕ್ಷೆ ಹೊಂದಿದ್ದೇವೆ. ಸಿನಿಮಾದ ಸೋರಿಕೆಯಾದ ದೃಶ್ಯಗಳು ನಿಮಗೇನಾದರೂ ಸಿಕ್ಕರೆ ದಯವಿಟ್ಟು ಅದನ್ನು ಯಾರಿಗೂ ಹಂಚಬೇಡಿ ಎಂದು ಮನವಿ ಮಾಡಿದ್ದಾರೆ.
ಮಾಸ್ಟರ್ ಸಿನಿಮಾ ನಿರ್ಮಾಣ ಮಾಡಿರುವ ‘ಎಕ್ಸ್‌ಬಿ ಫಿಲ್ಮ್’, ಸೋರಿಕೆಯಾದ ಯಾವುದೇ ಕಂಟೆಂಟ್ ಅನ್ನು ಹಂಚಿಕೊಳ್ಳಬಾರದು. ಮಾಸ್ಟರ್ ತಂಡ ನಿಮ್ಮೆಲ್ಲರ ವಿನಂತಿಸುತ್ತದೆ. ಅಂತಹ ಯಾವುದೇ ದೃಶ್ಯಗಳು ನಿಮಗೆ ದೊರೆತರೆ ದಯವಿಟ್ಟು ಅದನ್ನು ನಮ್ಮೊಂದಿಗೆ report@blockxpiracy.com ನಲ್ಲಿ ಹಂಚಿಕೊಳ್ಳಿ ಎಂದು ಹೇಳಿದೆ.