ಕರ್ನಾಟಕ

karnataka

ETV Bharat / sitara

2019ರ ಅತ್ಯುತ್ತಮ ಗಾಯಕ ವಿಜಯ ಪ್ರಕಾಶ್ ಹಾಗೂ ಸಂಜಿತ್ ಹೆಗ್ಡೆ.. - ವಿಜಯ್​​​ಪ್ರಕಾಶ್​​​​​​​​ 2019 ರ ಅತ್ಯುತ್ತಮ ಗಾಯಕ

2019 ಮುಗಿಯುತ್ತಾ ಬಂದಿದೆ. ಹೊಸ ವರ್ಷವನ್ನು ಸ್ವಾಗತಿಸಲು ಪ್ರಪಂಚವೇ ಸಿದ್ಧವಾಗಿದೆ. ವರ್ಷದ ಕೊನೆಯಲ್ಲಿ ಕನ್ನಡ ಚಿತ್ರರಂಗದ ಕೆಲ ಪ್ರಮುಖ ವಿಷಯಗಳನ್ನು ನೆನಪು ಮಾಡಿಕೊಳ್ಳುವ ಸಮಯ ಬಂದಿದೆ.

2019 best singers
2019 ಅತ್ಯುತ್ತಮ ಗಾಯಕರು

By

Published : Dec 21, 2019, 9:29 PM IST

ಈ ವರ್ಷದ ಕನ್ನಡ ಸಿನಿಮಾಗಳ ಪೈಕಿ ಅತಿ ಹೆಚ್ಚು ಜನಪ್ರಿಯವಾದ ಹಾಡುಗಳ ಪಟ್ಟಿಯನ್ನು ಮಾಡಲಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಕೇಳುಗರನ್ನು ಹಾಗೂ ನೋಡುಗರನ್ನು ಸಂಪಾದಿಸಿಕೊಂಡಿದ್ದು ಡಿಸೆಂಬರ್​​​​​​​​​​​​​ 27 ರಂದು ಬಿಡುಗಡೆ ಆಗಬೇಕಿರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ‘ಹ್ಯಾಂಡ್ಸ್ ಅಪ್' ಹಾಡು. ಇದಕ್ಕೆ ನಾಗರ್ಜುನ ಶರ್ಮ ಗೀತ ರಚನೆ, ಅಜನೀಷ್ ಲೋಕನಾಥ್ ಸಂಗೀತವಿದ್ದು, ವಿಜಯಪ್ರಕಾಶ್ ಹಾಡಿದ್ದಾರೆ.

2019 ರಲ್ಲಿ ವಿಜಯಪ್ರಕಾಶ್ ಅತ್ಯುತ್ತಮ ಗಾಯಕ ಎನಿಸಲು ಈ ಹಾಡುಗಳೇ ಕಾರಣ ಎನ್ನಬಹುದು

ವಿಜಯ್ ಪ್ರಕಾಶ್
  1. ಸಿಂಗ ಚಿತ್ರದ ಶಾನೆ ಟಾಪಾಗವ್ಳೇ... ಧರ್ಮ ವಿಶ್ ಸಂಗೀತ, ಚೇತನ್ ಕುಮಾರ್ ಗೀತರಚನೆ
  2. ಕುರುಕ್ಷೇತ್ರ ಚಿತ್ರದ ಸಾಹೊರೆ ಸಾಹೋ....ವಿ. ಹರಿಕೃಷ್ಣ ಸಂಗೀತ, ಡಾ. ವಿ.ನಾಗೇಂದ್ರ ಪ್ರಸಾದ್ ಗೀತ ರಚನೆ
  3. ಬೆಲ್​​ ಬಾಟಮ್ ಚಿತ್ರದ ಏತಕೆ ಬೊಗಸೆ ತುಂಬಾ...ಅಜನೀಷ್ ಲೋಕನಾಥ್ ಸಂಗೀತ, ಯೋಗರಾಜ್ ಭಟ್ ಸಾಹಿತ್ಯ
  4. ನಟಸಾರ್ವಭೌಮ ಚಿತ್ರದ ಓಪೆನ್ ದಿ ಬಾಟಲ್....ಡಿ. ಇಮಾನ್ ಸಂಗೀತ, ಯೋಗರಾಜ್ ಭಟ್ ಸಾಹಿತ್ಯ
  5. ಯಜಮಾನ ಚಿತ್ರದ ಬಸಣ್ಣಿ ಬಾ.....ವಿ. ಹರಿಕೃಷ್ಣ ಸಂಗೀತ, ಸಂತೋಷ್ ಆನಂದ್ ರಾಮ್ ಸಾಹಿತ್ಯ
  6. ಪಂಚತಂತ್ರ ಸಿನಿಮಾದ ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ....ವಿ. ಹರಿಕೃಷ್ಣ ಸಂಗೀತ, ಯೋಗರಾಜ್ ಭಟ್ ಸಾಹಿತ್ಯ
  7. ಪೈಲ್ವಾನ್ ಚಿತ್ರದ ದೊರೆಸಾನಿ...ಅರ್ಜುನ್ ಜನ್ಯ ಸಂಗೀತ, ಡಾ ವಿ. ನಾಗೇಂದ್ರ ಪ್ರಸಾದ್ ಗೀತೆ ರಚನೆ
  8. ಅವನೇ ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸ್​ ಅಪ್​​​​​...ಅಜನಿಷ್ ಲೋಕನಾಥ್ ಸಂಗೀತ, ನಾಗರ್ಜುನ ಶರ್ಮ ಗೀತರಚನೆ


ವಿಜಯಪ್ರಕಾಶ್ ನಂತರ ಯುವ ಗಾಯಕ ಸಂಜಿತ್ ಹೆಗ್ಡೆ ಕೂಡಾ 2019 ರಲ್ಲಿ ಕೆಲವು ಅತ್ಯುತ್ತಮ ಹಾಡುಗಳನ್ನು ಹಾಡಿದ್ದಾರೆ.

ಸಂಜಿತ್ ಹೆಗ್ಡೆ
  1. ಅಮರ್ ಚಿತ್ರದ ಮರೆತು ಹೋಯಿತು ನನ್ನಯ ಹಾಜರಿ....ಅರ್ಜುನ್ ಜನ್ಯ ಸಂಗೀತ, ಕವಿರಾಜ್ ಗೀತ ರಚನೆ
  2. ಕವಲುದಾರಿ ಚಿತ್ರದ ನಿಗೂಢ ನಿಗೂಢ ಪ್ರಯಾಣ....ಚರಣ್ ರಾಜ್ ಸಂಗೀತ, ನಾಗರ್ಜುನ ಶರ್ಮ ರಚನೆ
  3. ಪೈಲ್ವಾನ್​​​​​ ಸಿನಿಮಾದ ಕಣ್ಮಣಿಯೇ.....ಅರ್ಜುನ್ ಜನ್ಯ ಸಂಗೀತ, ಡಾ ವಿ. ನಾಗೇಂದ್ರ ಪ್ರಸಾದ್ ಗೀತ ರಚನೆ
  4. ಲುಂಗಿ ಚಿತ್ರದ ವೇಸ್ಟ್ ಬಾಡಿ....ಪ್ರಸಾದ್ ಶೆಟ್ಟಿ ಸಂಗೀತ ನಿರ್ದೇಶನ, ಅರ್ಜುನ್ ಲೂಯಿಸ್ ಗೀತೆ

ಈ ಹಾಡುಗಳನ್ನು ಹೊರತುಪಡಿಸಿ ಸೋನು ನಿಗಮ್, ಶ್ರೇಯಾ ಘೋಷಾಲ್ ಹಾಗೂ ಅರ್ಮಾನ್ ಮಲಿಕ್ ಕೂಡಾ ಕೆಲವೊಂದು ಹಾಡುಗಳನ್ನು ಹಾಡಿದ್ದಾರೆ. ಮುಂದಿನ ವರ್ಷ ಯಾವ ಹಾಡುಗಳು ಹಾಗೂ ಯಾವ ಗಾಯಕ, ಗಾಯಕಿ ಜನರ ಮನಸ್ಸಿನಲ್ಲಿ ಉಳಿಯುವುದೋ ಕಾದುನೋಡಬೇಕು.

ಸೋನು ನಿಗಮ್
ಶ್ರೇಯಾ ಘೋಷಾಲ್
ಅರ್ಮಾನ್ ಮಲಿಕ್

For All Latest Updates

ABOUT THE AUTHOR

...view details