ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ನಟಿ ವಿಜಯಲಕ್ಷ್ಮಿ ಈಗ ಆರೋಗ್ಯವಾಗಿದ್ದು ಆಸ್ಪತ್ರೆಯಲ್ಲಿದ್ದುಕೊಂಡೇ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ಇದು ನನ್ನ ಕೊನೆಯ ವಿಡಿಯೋ ಎಂದು ವಿಡಿಯೋ ಮಾಡಿ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದರು.
'ನಾನು ಈಗ ಆರೊಗ್ಯವಾಗಿದ್ದೇನೆ, ಅಭಿಮಾನಿಗಳ ಪ್ರೀತಿಯೇ ನನ್ನನ್ನು ಉಳಿಸಿದೆ. ಬಹುಶ: ನನ್ನ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದ ಸೀಮನ್ ಹಾಗೂ ಅವರ ಕುಟುಂಬಕ್ಕೆ ಈಗ ಸಂತೋಷವಾಗಿರಬಹುದು. ನಾನು ಆತ್ಮಹತ್ಯೆ ಮಾಡಿಕೊಳ್ಳಲು ಅವರೇ ಕಾರಣ. ಆದರೆ ಕೆಲವರು ಈಗ ನನ್ನನ್ನು ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವವಳು ಎಂದು ಹೇಳುತ್ತಿದ್ದಾರೆ. ದಯವಿಟ್ಟು ಮಾನವೀಯತೆಯಿಂದ ವರ್ತಿಸಿ, ಹೀಗೆಲ್ಲಾ ಮಾತನಾಡುವುದನ್ನು ನಿಲ್ಲಿಸಿ' ಎಂದು ಮನವಿ ಮಾಡಿದ್ದಾರೆ.