ಅನಾರೋಗ್ಯದಿಂದ ಬಳಲುತ್ತಿರುವ ಕನ್ನಡದ ನಟಿ ವಿಜಯಲಕ್ಷ್ಮಿ ಸಹಾಯ ಕೋರಿ ಸೂಪರ್ ಸ್ಟಾರ್ ರಜನಿಕಾಂತ್ ಮೊರೆ ಹೋಗಿದ್ದಾರೆ.
ಸಹಾಯಕ್ಕಾಗಿ ರಜನಿ ಮೊರೆ ಹೋದ ನಟಿ ವಿಜಯಲಕ್ಷ್ಮಿ - vijayalakshmi
ನಾಗಮಂಡಲ ಚಿತ್ರದ ನಟಿ ವಿಜಯಲಕ್ಷ್ಮಿ ಅವರಿಗೆ ನಟ ಸುದೀಪ್ ಸೇರಿದಂತೆ ಕನ್ನಡ ಚಿತ್ರರಂಗದ ಕೆಲವರು ಸಹಾಯ ಮಾಡಿದ್ದರು. ಈಗ ಸಹಾಯ ಮಾಡುವಂತೆ ರಜನಿಕಾಂತ್ ಅವರನ್ನು ಕೋರಿದ್ದಾರೆ.
ಕೆಲವು ತಿಂಗಳುಗಳಿಂದ ಅನಾರೋಗ್ಯಕ್ಕೆ ತುತ್ತಾಗಿರುವ ವಿಜಯಲಕ್ಷ್ಮಿ ಸಹಾಯಕ್ಕೆ ಕನ್ನಡ ಚಿತ್ರರಂಗದ ಕೆಲವರು ಬಂದಿದ್ದರು. ಆದರೆ ಅದೂ ಸಹ ವಿವಾದಕ್ಕೀಡಾಗಿತ್ತು. ತಮಿಳು ಭಾಷೆಯಲ್ಲಿ ಸಹ ನಟಿಸಿರುವ ಈ ನಟಿ ಸದ್ಯ ತನ್ನನ್ನು ರಕ್ಷಿಸುವಂತೆ ರಜನಿಕಾಂತ್ ಅವರನ್ನು ಕೇಳಿಕೊಂಡಿದ್ದಾರೆ. ತಮಿಳು ಭಾಷೆಯಲ್ಲಿ ಮಾತನಾಡಿ, ತಲೈವಾ ರಜನಿಕಾಂತ್ ಅವರೊಬ್ಬರೆ ನನಗೆ ಹೊಪ್ ಎಂದು ಹೇಳಿಕೊಂಡು, ದಯವಿಟ್ಟು ನನ್ನನ್ನು ರಕ್ಷಿಸಿ. ನನಗೆ ತಾಯಿ ಹಾಗೂ ಅಕ್ಕ ಇದ್ದಾರೆ. ಅವರಿಬ್ಬರು ನನ್ನ ಮೇಲೆ ಅವಲಂಬಿತರು ಎಂದ ಹೇಳಿಕೊಂಡಿದ್ದಾರೆ. ಆ ವೀಡಿಯೋ ಈಗ ಫೇಸ್ಬುಕ್ಲ್ಲಿ ಹರಿದಾಡುತ್ತಿದೆ.
ಈ ವಿಡಿಯೋ ಕ್ಲಿಪ್ ಈಗಾಗಲೇ ರಜನಿಕಾಂತ್ ಅವರನ್ನು ರೀಚ್ ಆಗಿದ್ದು, ಅವರು ಬೆಂಗಳೂರಿನಲ್ಲಿರುವ ತಮ್ಮ ಸ್ನೇಹಿತರನ್ನು ಈ ಬಗ್ಗೆ ವಿಚಾರಿಸಿ ಸಹಾಯ ಮಾಡಲು ಕೋರಿದ್ದಾರೆ ಎಂದು ತಿಳಿದು ಬಂದಿದೆ.