ಕರ್ನಾಟಕ

karnataka

ETV Bharat / sitara

'ಮಾಲ್ಗುಡಿ ಡೇಸ್' ಸಿನಿಮಾಗಾಗಿ ಜಿಮ್​​ನಲ್ಲಿ ವಿಜಯ ರಾಘವೇಂದ್ರ ಭಾರೀ ವರ್ಕೌಟ್ - undefined

ಆರ್ ಕೆ ನಾರಾಯಣ್ ಬರೆದ ಸಣ್ಣಕಥೆಗಳ ಪುಸ್ತಕ 'ಮಾಲ್ಗುಡಿ ಡೇಸ್' ಆಧರಿಸಿ 1987ರಲ್ಲಿ ಟೆಲಿವಿಷನ್ ಸಿರೀಸ್ ಪ್ರಸಾರವಾಗಿತ್ತು. ಇದೀಗ ಕನ್ನಡದಲ್ಲಿ 'ಮಾಲ್ಗುಡಿ ಡೇಸ್' ಎಂಬ ಸಿನಿಮಾ ತಯಾರಾಗುತ್ತಿದೆ.

ವಿಜಯ ರಾಘವೇಂದ್ರ

By

Published : Jun 5, 2019, 9:29 PM IST

'ಮಾಲ್ಗುಡಿ ಡೇಸ್'..ಈ ಹೆಸರು ಕೇಳಿದಾಕ್ಷಣ ಕರಾಟೆ ಕಿಂಗ್ ಶಂಕರ್​​​​​​​​​​​​ನಾಗ್ ನೆನಪಾಗುತ್ತಾರೆ. ಆರ್ ಕೆ ನಾರಾಯಣ್ ಬರೆದ 'ಮಾಲ್ಗುಡಿ ಡೇಸ್' ಪುಸ್ತಕವನ್ನು ಆಧರಿಸಿ ತಯಾರಾದ ಈ ಟೆಲಿವಿಷನ್ ಸಿರೀಸ್ ಇಂದಿಗೂ ಬಹಳ ಫೇಮಸ್​.

ವಿಜಯ ರಾಘವೇಂದ್ರ

ಇದೀಗ 'ಮಾಲ್ಗುಡಿ ಡೇಸ್​​' ಹೆಸರಿನಲ್ಲಿ ಸ್ಯಾಂಡಲ್​​ವುಡ್​​​ನಲ್ಲಿ ಸಿನಿಮಾ ತಯಾರಾಗುತ್ತಿದೆ. ಈ ಸಿನಿಮಾಗಾಗಿ ವಿಜಯ್ ರಾಘವೇಂದ್ರ ಭಾರೀ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಈ ಚಿನ್ನಾರಿ ಮುತ್ತ ವಿಶೇಷ ಹಾಗೂ ಪ್ರಮುಖ ಪಾತ್ರ ಮಾಡುತ್ತಿದ್ದು, ಅದಕ್ಕಾಗಿ 22 ಕೆಜಿ ತೂಕ ಕಡಿಮೆ ಮಾಡಿಕೊಳ್ಳಲು ಜಿಮ್​ನಲ್ಲಿ ಭಾರೀ ವರ್ಕೌಟ್ ಮಾಡುತ್ತಿದ್ದಾರೆ. ಬೆಳಗ್ಗೆ ಒಂದು ತಾಸು ಸಂಜೆ ಒಂದು ತಾಸು ಸೇರಿದಂತೆ ದಿನಕ್ಕೆ ಎರಡು ಗಂಟೆಗಳ ಕಾಲ ಜಿಮ್​​ನಲ್ಲಿ ಬೆವರು ಹರಿಸುತ್ತಿದ್ದಾರೆ. ವಿಜಯ್ ಈ ಸಿನಿಮಾದಲ್ಲಿ ಹಿಂದೆಂದೂ ಕಾಣದ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಜಿಮ್​​​​ನಲ್ಲಿ ಚಿನ್ನಾರಿ ಮುತ್ತ ವರ್ಕೌಟ್​

ಸಿನಿಮಾವನ್ನು ಕಿಶೋರ್‌ ಮೂಡಬಿದ್ರೆ ನಿರ್ದೇಶಿಸಿದ್ದಾರೆ. ಈಗಾಗಲೇ ತೀರ್ಥಹಳ್ಳಿ, ಆಗುಂಬೆ, ಕಳಸ, ಪಾಂಡಿಚೆರಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. 'ಮಾಲ್ಗುಡಿ ಡೇಸ್‌' ಚಿತ್ರವನ್ನು ಕೆ.ರತ್ನಾಕರ್‌ ನಿರ್ಮಿಸುತ್ತಿದ್ದಾರೆ.

'ಮಾಲ್ಗುಡಿ ಡೇಸ್' ಸಿನಿಮಾಗಾಗಿ ವಿಜಯ್ ವರ್ಕೌಟ್

For All Latest Updates

TAGGED:

ABOUT THE AUTHOR

...view details