ಕರ್ನಾಟಕ

karnataka

ETV Bharat / sitara

ಅಗ್ನಿ ಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ ಮತ್ತೆ ಬೆಳ್ಳಿತೆರೆಗೆ: ಟೆಕ್ಕಿ ಪತ್ರದಲ್ಲಿ ಗುಳಿಕೆನ್ನೆ ನಟ - software engineer movie

ವಿಜಯ್ ಸೂರ್ಯ ಮತ್ತೆ ಬೆಳ್ಳಿತೆರೆಗೆ ಪ್ರವೇಶಿಸಲಿದ್ದಾರೆ. ಕರಾವಳಿ ಮೂಲದ ಚೇತನ್ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

vijay
vijay

By

Published : Mar 28, 2020, 10:54 AM IST

ಅಗ್ನಿ ಸಾಕ್ಷಿಧಾರವಾಹಿ ಮೂಲಕ ಖ್ಯಾತಿ ಪಡೆದಿರುವ ವಿಜಯ್ ಸೂರ್ಯ ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡಿದ್ದರು. ಈಗ ಸ್ವಲ್ಪ ಸಮಯದ ಗ್ಯಾಪ್​ ಬಳಿಕ ಮತ್ತೆ ಆಗಮಿಸುತ್ತಿದ್ದಾರೆ.

ಕಿರುತೆರೆಯಲ್ಲಿ 'ಉತ್ತರಾಯಣ', 'ತಕ ಧಿಮಿ ಥಾ', 'ಕಾಮಿಡಿ ಟಾಕೀಸ್', ಪ್ರೇಮ ಲೋಕ ಮೊದಲಾದ ಸೀರಿಯಲ್ ಹಾಗೂ ರಿಯಾಲಿಟಿ ಶೋಗಳಲ್ಲಿ ವಿಜಯ್ ಸೂರ್ಯ ನಟಿಸಿದ್ದಾರೆ.

ಬಳಿಕ ಕನ್ನಡದಲ್ಲಿ 'ಕ್ರೇಜಿ ಲೋಕ', 'ಇಷ್ಟ ಕಾಮ್ಯ', 'ಕದ್ದು ಮುಚ್ಚಿ' ಸಿನಿಮಾಗಳಲ್ಲಿ ಅಭಿನಯಿಸಿ ಮತ್ತೆ ಕಿರು ತೆರೆಗೆ ವಿಜಯ್ ಸೂರ್ಯ ವಾಪಾಸಾಗಿದ್ದರು.

ಅಗ್ನಿ ಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ

ಪ್ರೇಮಿಗಳ ದಿನದಂದು ಚೈತ್ರಳನ್ನು ಮದುವೆ ಆದರು. ಈಗ ಅವರಿಗೆ ಸಾಫ್ಟ್​ವೇರ್ ಟೆಕ್ಕಿ ಪಾತ್ರ ನಿರ್ವಹಿಸಲು ಅವಕಾಶ ಒದಗಿ ಬಂದಿದೆ.

ಗುಳಿ ಕೆನ್ನೆಯ ಈ ನಟ ಈಗ ನಾಯಕನಾಗಿ ಇನ್ನೂ ಹೆಸರಿಡದ ಕನ್ನಡ ಚಿತ್ರ ಕರಾವಳಿ ಮೂಲದ ಚೇತನ್ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಾಫ್ಟ್​ವೇರ್ ಉದ್ಯೋಗದಲ್ಲಿ ಇರುವ ವ್ಯಕ್ತಿಗಳ ಬದುಕನ್ನು ಅಧ್ಯಯನ ಮಾಡಿ ಕಥೆ ರೆಡಿ ಮಾಡಿರುವ ಚೇತನ್ ಶೆಟ್ಟಿ ಅದನ್ನು ತೆರೆ ಮೇಲೆ ತರುತ್ತಿದ್ದಾರೆ.

ರಂಗಭೂಮಿ ಪ್ರತಿಭೆ ಹಾಗೂ ಇಂಜಿನಿಯರ್ ಆಗಿರುವ ಶ್ವೇತ ಚಿತ್ರಕ್ಕೆ ನಾಯಕಿ. 50 ಪರ್ಸೆಂಟ್ ಕಲಾವಿದರು ಸಾಫ್ಟ್​ವೇರ್ ಉದ್ಯೋಗದವರೇ ಆಗಿರುತ್ತಾರೆ. ಇದು ಸಾಮಾನ್ಯ ಮಸಾಲ ಚಿತ್ರ ಆಗಿರುವುದಿಲ್ಲ. ಹಾಡು, ಫೈಟ್ಸ್, ಡಾನ್ಸ್ ಇಲ್ಲಿ ಕಾಣಲು ಸಿಗುವುದಿಲ್ಲ.

ಚಿತ್ರೀಕರಣ ಈಗಾಗಲೇ ಬೆಳ್ಳಂದೂರಿನ ಐಟಿ ಕಂಪನಿಯಲ್ಲಿ ಬಹುತೇಕ ನಡೆಸಲಾಗಿದೆ. ಈ ಚಿತ್ರಕ್ಕೆ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನಿರ್ದೇಶಕ ಚೇತನ್ ಶೆಟ್ಟಿ ಅವರ ಸ್ನೇಹಿತರೇ ಹಣ ಹೂಡುತ್ತಿದ್ದಾರೆ.

ABOUT THE AUTHOR

...view details