ನಟ ಹುಚ್ಚ ವೆಂಕಟ್ ಮೇಲೆ ಸಾರ್ವಜನಿಕರು ಇತ್ತೀಚೆಗೆ ಹಲ್ಲೆ ಮಾಡುತ್ತಿರುವ ಘಟನೆ ಹೆಚ್ಚುತ್ತಿದೆ. ಇತ್ತೀಚೆಗಷ್ಟೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕೂಡಾ ಹುಚ್ಚ ವೆಂಕಟ್ ಮೇಲೆ ಹಲ್ಲೆ ಮಾಡಿದ್ದು ಈ ವಿಡಿಯೋ ವೈರಲ್ ಆಗಿತ್ತು.
ಹುಚ್ಚ ವೆಂಕಟ್ ಮೇಲೆ ದಯವಿಟ್ಟು ಹಲ್ಲೆ ಮಾಡಬೇಡಿ..ದುನಿಯಾ ವಿಜಯ್ ಮನವಿ - Attack on Huccha venkat in Mandya
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಬಳಿ ಕೆಲವರು ಹುಚ್ಚ ವೆಂಕಟ್ ಮೇಲೆ ಹಲ್ಲೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ದುನಿಯಾ ವಿಜಯ್ ಪ್ರತಿಕ್ರಿಯಿಸಿದ್ದಾರೆ. ಹಲ್ಲೆಯನ್ನು ಖಂಡಿಸಿರುವ ವಿಜಯ್, ವೆಂಕಟ್ ಅವರಿಗೆ ಚಿಕಿತ್ಸೆ ಅಗತ್ಯವಿದೆ. ದಯವಿಟ್ಟು ಯಾರೂ ಅವರಿಗೆ ಹೊಡೆಯಬೇಡಿ ಎಂದು ಮನವಿ ಮಾಡಿದ್ದಾರೆ.
![ಹುಚ್ಚ ವೆಂಕಟ್ ಮೇಲೆ ದಯವಿಟ್ಟು ಹಲ್ಲೆ ಮಾಡಬೇಡಿ..ದುನಿಯಾ ವಿಜಯ್ ಮನವಿ Vijay requested to not attack on Huccha venkat](https://etvbharatimages.akamaized.net/etvbharat/prod-images/768-512-7585935-229-7585935-1591956943931.jpg)
ಹುಚ್ಚ ವೆಂಕಟ್ ಮೇಲಿನ ಈ ಹಲ್ಲೆಗೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ. ವೆಂಕಟ್ ಮಾನಸಿಕ ಅಸ್ವಸ್ಥ, ಅವರಿಗೆ ಯಾರೂ ಹೊಡೆಯಬೇಡಿ ಎಂದು ಮನವಿ ಮಾಡಿದ್ದಾರೆ. ವೆಂಕಟ್ ಅವರಿಗೆ ಬೀದಿಯಲ್ಲಿ ಹೊಡೆಯುವ ವಿಡಿಯೋಗಳು ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹುಚ್ಚ ಎಂದು ಸ್ವತಃ ಹೇಳಿಕೊಂಡು ಚಿತ್ರರಂಗಕ್ಕೆ ಪ್ರವೇಶಿಸಿದರೂ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ವೆಂಕಟ್ ಅವರನ್ನು ಸಿನಿಮಾಗಳಿಗಿಂತ ಹೆಚ್ಚಾಗಿ ಮಾಧ್ಯಮಗಳಲ್ಲಿನ ಚರ್ಚೆಗಳ ಮೂಲಕ ಜನರು ಗುರುತಿಸಿದ್ದಾರೆ. ವೈದರು ಹೇಳಿರುವ ಪ್ರಕಾರ ವೆಂಕಟ್ಗೆ ಚಿಕಿತ್ಸೆಯ ಅಗತ್ಯವಿದೆ. ಆದರೆ ಇದಕ್ಕೆ ಸ್ಪಂದಿಸಬೇಕೇ ಹೊರತು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಅತನ ಮೇಲೆ ಹಲ್ಲೆ ಮಾಡಬೇಡಿ. ಬದುಕು ಯಾರ ಕೈಯ್ಯಲ್ಲೂ ಇಲ್ಲ. ಇಂದು ಕೋಟ್ಯಂತರ ರೂಪಾಯಿ ಇರುವವರು ನಾಳೆ ಎಲ್ಲವನ್ನೂ ಕಳೆದುಕೊಳ್ಳಬಹುದು. ಇಂದು ಬಡವನಾಗಿರುವವನು ನಾಳೆ ರಾಜನಾಗಿ ಬದುಕಬಹುದು. ಆದ್ದರಿಂದ ಯಾರೂ ಆತನ ಮೇಲೆ ಹಲ್ಲೆ ಮಾಡಬೇಡಿ ಎಂದು ಮನವಿ ಮಾಡಿ ಫೇಸ್ಬುಕ್ನಲ್ಲಿ ಸುಧೀರ್ಘವಾಗಿ ಬರೆದುಕೊಂಡಿದ್ದಾರೆ.