ಬೆಳಗಾವಿ:ವಿಜಯ್ ರಾಘವೇಂದ್ರ ಅಭಿನಯದ 'ಮಾಲ್ಗುಡಿ ಡೇಸ್' ಸಿನಿಮಾ ಫೆಬ್ರವರಿ 7 ರಂದು ಬಿಡುಗಡೆಯಾಗುತ್ತಿದೆ. ಇನ್ನು ಚಿತ್ರತಂಡ ರಾಜ್ಯದ ಪ್ರಮುಖ ನಗರಗಳಲ್ಲಿ ಸಂಚರಿಸಿ ಚಿತ್ರದ ಪ್ರಮೋಷನ್ ಮಾಡುವಲ್ಲಿ ನಿರತವಾಗಿದೆ. ನಿನ್ನೆ ಹುಬ್ಬಳ್ಳಿಗೆ ತೆರಳಿದ್ದ ಚಿತ್ರತಂಡ, ಇಂದು ಬೆಳಗಾವಿಗೆ ಭೇಟಿ ನೀಡಿತ್ತು.
ಆ ಸಿನಿಮಾ ಪಾತ್ರಕ್ಕಾಗಿ 55 ದಿನಗಳಲ್ಲಿ 19 ಕಿಲೋ ತೂಕ ಇಳಿಸಿದ್ರಂತೆ ಚಿನ್ನಾರಿ ಮುತ್ತ...! - 55 ದಿನಗಳಲ್ಲಿ 19 ಕಿಲೋ ಇಳಿಸಿಕೊಂಡ ಚಿನ್ನಾರಿ ಮುತ್ತ
ನಗರದ ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯ್ ರಾಘವೇಂದ್ರ ಈ ಚಿತ್ರದಲ್ಲಿ ನಾನು ಎರಡು ಶೇಡ್ಗಳಲ್ಲಿ ನಟಿಸಿದ್ದು ೧೬ ವರ್ಷದ ಬಾಲಕನ ಪಾತ್ರವನ್ನೂ ಮಾಡಿದ್ದೇನೆ. ಈ ಕಾರಣಕ್ಕೆ 55 ದಿನಗಳಲ್ಲಿ ನಾನು 22 ಕಿಲೋ ತೂಕ ಇಳಿಸಬೇಕಿತ್ತು. ಆದರೆ ನಾನು ೧೯ ಕಿಲೋ ತೂಕ ಇಳಿಸಿದ್ದೇನೆ ಎಂದು ತಿಳಿಸಿದರು.
ನಗರದ ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯ್ ರಾಘವೇಂದ್ರ 'ಮಾಲ್ಗುಡಿ ಡೇಸ್' ಚಿತ್ರದಲ್ಲಿ ನಾನು 75 ವರ್ಷದ ವೃದ್ಧನ ಪಾತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ನಾನು ಎರಡು ಶೇಡ್ಗಳಲ್ಲಿ ನಟಿಸಿದ್ದು ೧೬ ವರ್ಷದ ಬಾಲಕನ ಪಾತ್ರವನ್ನೂ ಮಾಡಿದ್ದೇನೆ. ಈ ಕಾರಣಕ್ಕೆ 55 ದಿನಗಳಲ್ಲಿ ನಾನು 22 ಕಿಲೋ ತೂಕ ಇಳಿಸಬೇಕಿತ್ತು. ಆದರೆ ನಾನು ೧೯ ಕಿಲೋ ತೂಕ ಇಳಿಸಿದ್ದೇನೆ ಎಂದು ತಿಳಿಸಿದರು. ಶಂಕರ್ನಾಗ್ ಅವರ 'ಮಾಲ್ಗುಡಿ ಡೇಸ್' ಕಥೆ ಹಾಗೂ ನಮ್ಮ 'ಮಾಲ್ಗುಡಿ ಡೇಸ್' ಕಥೆ ಬೇರೆ ಬೇರೆ. ಅದಕ್ಕೂ ನಮ್ಮ ಕಥೆಗೆ ಯಾವುದೇ ಸಂಬಂಧ ಇಲ್ಲ. ನಮ್ಮ 'ಮಾಲ್ಗುಡಿ ಡೇಸ್' ಚಿತ್ರ ಪಕ್ಕಾ ಕಮರ್ಷಿಯಲ್ ಆಗಿದೆ. ಮಾನವೀಯ ಸಂಬಂಧ, ನೆನಪುಗಳು, ಬಾಲ್ಯ, ತುಂಟತನ, ರೋಮ್ಯಾನ್ಸ್ ಹೀಗೆ ಎಲ್ಲವನ್ನೂ ನಮ್ಮ ಚಿತ್ರ ಒಳಗೊಂಡಿದೆ.
ಯುವಜನರಿಗೆ ಈ ಕಥೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ. ಈಗಾಗಲೇ ಹಲವು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಬಹುತೇಕ ಜಿಲ್ಲೆಗಳಲ್ಲಿ ಕಾಲೇಜಿಗೆ ಹೋಗಿ ಚಿತ್ರದ ಪ್ರಮೋಷನ್ ಮಾಡುತ್ತಿದ್ದೇನೆ. ಈ ಚಿತ್ರದ ಮೂಲಕ ದೊಡ್ಡಪ್ರಮಾಣದ ಕಮ್ ಬ್ಯಾಕ್ ನಿರೀಕ್ಷೆಯಲ್ಲಿದ್ದೇನೆ. ನನ್ನ ಆಸೆ, ಕನಸು ಈಡೇರಬೇಕಾದರೆ ಎಲ್ಲಾ ಯುವಕ-ಯುವತಿಯರು, ಕುಟುಂಬ ಸದಸ್ಯರು ಥಿಯೇಟರ್ಗೆ ತೆರಳಿ ಚಿತ್ರ ನೋಡಬೇಕು. ಹಾಗಾದ್ರೆ ಮಾತ್ರ ನನಗೆ ಬ್ರೇಕ್ ಸಿಗಲು ಸಾಧ್ಯ ಎಂದು. ಇದಕ್ಕೂ ಮೊದಲು ಬೈಲಹೊಂಗಲದ ಗಣಾಚಾರಿ ಪದವಿ ಕಾಲೇಜು, ನಗರದ ಆರ್.ಪಿ. ಡಿ, ಗೋಮಟೇಶ ಹಾಗೂ ಜೈನ ಕಾಲೇಜಿಗೆ ಭೇಟಿ ನೀಡಿ ಚಿತ್ರದ ಪ್ರಮೋಷನ್ ಮಾಡಿದರು. ವಿಜಯ್ ರಾಘವೇಂದ್ರ ಅವರೊಂದಿಗೆ ವಿದ್ಯಾರ್ಥಿಗಳು ಸೆಲ್ಫಿ ತೆಗೆಸಿಕೊಂಡು ಖುಷಿ ಪಟ್ಟರು.