ಕರ್ನಾಟಕ

karnataka

ETV Bharat / sitara

ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ ವಿಜಯ್ ದೇವರಕೊಂಡ - ಗೀತಗೋವಿಂದಂ

ಡಿಯರ್ ಕಾಮ್ರೇಡ್ ನಂತರ ನಟ ವಿಜಯ್ ದೇವರಕೊಂಡ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಬದಲಾಗಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

Vijay Deverakonda

By

Published : Aug 29, 2019, 1:48 PM IST

ಟಾಲಿವುಡ್ ನಟ ವಿಜಯ ದೇವರಕೊಂಡ ಅಭಿನಯದ ಜತೆಗೆ ಚಿತ್ರ ನಿರ್ಮಾಣಕ್ಕೂ ಕಾಲಿಟ್ಟಿದ್ದಾರೆ.

ಅರ್ಜುನ್ ರೆಡ್ಡಿ ಹಾಗೂ ಗೀತಗೋವಿಂದಂ ಸಿನಿಮಾಗಳ ಸ್ಟಾರ್ ನಟ ವಿಜಯ್​ ಈಗ ವೃತ್ತಿ ಜೀವನದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಸಿನಿಮಾ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ. ತಮ್ಮದೆಯಾದ ಪ್ರೊಡಕ್ಷನ್ ಹೌಸ್ 'ಕಿಂಗ್ ಆಫ್​ ಹಿಲ್ಸ್' ತೆರೆದಿರುವ ವಿಜಯ್​, ಮೊದಲ ಸಿನಿಮಾದ ಹೆಸರನ್ನು ರಿವೀಲ್ ಮಾಡಿದ್ದಾರೆ. 'ಮೀಕು ಮಾತ್ರಮೇ ಚೆಪ್ತಾ 'ಇದು ವಿಜಯ್ ದೇವರಕೊಂಡ ನಿರ್ಮಿಸುತ್ತಿರುವ ಸಿನಿಮಾ.

ಇನ್ನು ತಾವು ನಿರ್ಮಾಪಕರಾಗುತ್ತಿರುವ ವಿಚಾರವನ್ನು ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ ವಿಜಯ್. ಅವರ ಈ ಹೊಸ ಪ್ರಯತ್ನಕ್ಕೆ ಅಭಿಮಾನಿಗಳಿಂದ ಭಾರಿ ಪ್ರೋತ್ಸಾಹ ಸಹ ಸಿಕ್ಕಿದೆ.

ABOUT THE AUTHOR

...view details