ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ತೆಲುಗು ಪ್ರೇಕ್ಷಕರಿಗೆ ಮಾತ್ರವಲ್ಲ, ಕನ್ನಡಿಗರಿಗೂ ಇಷ್ಟವಾದ ನಟ. ಬೆಂಗಳೂರನ್ನು ಇಷ್ಟಪಡುವ ವಿಜಯ್ ಆಗಾಗ್ಗೆ ಸಿಲಿಕಾನ್ ಸಿಟಿಗೆ ಬಂದು ಹೋಗುತ್ತಿರುತ್ತಾರೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ಕನ್ನಡದಲ್ಲಿ ಮಾತನಾಡಿ ಕೂಡಾ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.
ಬೈಕ್ ರೇಸ್ ಆರಂಭಿಸಿದ್ರು 'ಹೀರೋ'ವಿಜಯ್ ದೇವರಕೊಂಡ - undefined
ವಿಜಯ್ ದೇವರಕೊಂಡ ನಟನೆಯ ಹೊಸ ಸಿನಿಮಾ 'ಹೀರೋ' ಗೆ ಇಂದು ಮುಹೂರ್ತ ನೆರವೇರಿತು. ಈ ಸಿನಿಮಾ ತಮಿಳು, ತೆಲುಗು ಎರಡೂ ಭಾಷೆಗಳಲ್ಲೂ ತಯಾರಾಗುತ್ತಿದ್ದು, ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ರಶ್ಮಿಕಾ ಜೊತೆ ಅಭಿನಯಿಸಿರುವ 'ಡಿಯರ್ ಕಾಮ್ರೇಡ್' ಬಿಡುಗಡೆಗೂ ಮುನ್ನವೇ ವಿಜಯ್ 'ಹೀರೋ' ಎಂಬ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಮುಹೂರ್ತ ಸಮಾರಂಭ ಇಂದು ನೆರವೇರಿತು. ಚಿತ್ರದ ಚಿತ್ರೀಕರಣ ಸೋಮವಾರ ಆರಂಭವಾಗಲಿದೆ. ಆನಂದ್ ಅಣ್ಣಾಮಲೈ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಸಿನಿಮಾವನ್ನು ನಿರ್ಮಿಸುತ್ತಿದೆ. ಚಿತ್ರದಲ್ಲಿ ವಿಜಯ್ ಬೈಕ್ ರೇಸರ್ ಆಗಿ ನಟಿಸುತ್ತಿದ್ದು, ಇದಕ್ಕಾಗಿ ದೆಹಲಿಯಲ್ಲಿ ವಿಶೇಷ ತರಬೇತಿ ಕೂಡಾ ಪಡೆದಿದ್ದಾರಂತೆ.
ಮುಹೂರ್ತ ಸಮಾರಂಭಕ್ಕೆ ಕೊರಟಾಲ ಶಿವ ಮುಖ್ಯ ಅತಿಥಿಯಾಗಿ ಆಗಮಿಸಿ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸಿನಿಮಾದಲ್ಲಿ ನಟಿ ಮಾಳವಿಕ ಮೋಹನ್ ವಿಜಯ್ಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಸಿನಿಮಾ ತೆಲುಗು, ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.