ಇಂದು ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಹುಟ್ಟಿದ ದಿನ. ವಿಜಯ್ಗೆ ಆಂಧ್ರ, ತೆಲಂಗಾಣದಲ್ಲಿ ಮಾತ್ರವಲ್ಲ ಕರ್ನಾಟಕದಲ್ಲೂ ಸಾಕಷ್ಟು ಅಭಿಮಾನಿಗಳಿದ್ದು ಮೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
ದೇವರಕೊಂಡ ಬರ್ತಡೇಗೆ ಮಸ್ತ್ ಗಿಫ್ಟ್... ಡಿಯರ್ ಕಾಮ್ರೇಡ್ ರಿಲೀಸ್ ಡೇಟ್ ಫಿಕ್ಸ್ - undefined
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟನೆಯ ‘ಡಿಯರ್ ಕಾಮ್ರೇಡ್‘ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ವಿಜಯ್ ದೇವರಕೊಂಡ ಹುಟ್ಟುಹಬ್ಬ ಆಚರಣೆಯೊಂದಿಗೆ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
ಇನ್ನು ವಿಶೇಷ ಎಂದರೆ ಟಾಲಿವುಡ್ ಮಂದಿಯ ಮೋಸ್ಟ್ ಫೇವರೆಟ್ ಜೋಡಿ ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣ ನಟನೆಯ ‘ಡಿಯರ್ ಕಾಮ್ರೇಡ್‘ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ವಿಜಯ್ ದೇವರಕೊಂಡ ಹುಟ್ಟಿದ ದಿನವಾದ ಇಂದು ಡಿಯರ್ ಕಾಮ್ರೇಡ್ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು ಜುಲೈ 26 ರಂದು ಚಿತ್ರ ಬಿಡುಗಡೆಯಾಗಲಿದೆ. ತೆಲುಗು ಮಾತ್ರವಲ್ಲದೆ ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಈ ಸಿನಿಮಾ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.
‘ಫೈಟ್ ಫಾರ್ ವಾಟ್ ಯು ಲವ್‘ ಎಂಬ ಟ್ಯಾಗ್ಲೈನ್ ನೋಡಿದೊಡನೆ ಇದೂ ಕೂಡಾ ಲವ್ ಸ್ಟೋರಿ ಎಂದು ತಿಳಿಯುತ್ತದೆ. ‘ಗೀತಗೋವಿದಂ‘ ಸಿನಿಮಾದಲ್ಲಿ ಸಕ್ಸಸ್ ಕಂಡ ಈ ಜೋಡಿ ಕೆಮಿಸ್ಟ್ರಿ ‘ಡಿಯರ್ ಕಾಮ್ರೇಡ್‘ನಲ್ಲೂ ಮುಂದುವರೆದಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಸಿನಿಮಾವನ್ನು ಭರತ್ ಕಮ್ಮ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ವಿಜಯ್ ದೇವರಕೊಂಡ ಸ್ಟೂಡೆಂಟ್ ಲೀಡರ್ ಪಾತ್ರದಲ್ಲಿ ನಟಿಸಿದ್ದರೆ, ರಶ್ಮಿಕಾ ಲೇಡಿ ಕ್ರಿಕೆಟರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಒಂದು ನಿಮಿಷದ ಟೀಸರ್ಗೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದ್ದು ಇನ್ನು ಸಿನಿಮಾ ಖಂಡಿತ ಜನರಿಗೆ ಇಷ್ಟವಾಗಲಿದೆ ಎಂಬ ಭರವಸೆಯಲ್ಲಿದೆ ಚಿತ್ರತಂಡ.