ಕರ್ನಾಟಕ

karnataka

ETV Bharat / sitara

'ಫೈಟರ್​​'ನಿಂದ ಬಾಲಿವುಡ್​​​ಗೆ ವಿಜಯ್​​​ ದೇವರಕೊಂಡ! - ವಿಜಯ್​​​ ದೇವರಕೊಂಡ ಮುಂದಿನ​​ ಸಿನಿಮಾ ಫೈಟರ್​​​

ವಿಜಯ್​ ದೇವರಕೊಂಡ, ಪುರಿ ಜಗನ್ನಾಥ್​​ ನಿರ್ದೇಶನದ 'ಫೈಟರ್'​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ವಿಜಯ್​​ ದೇವರಕೊಂಡ ಬಾಲಿವುಡ್​ಗೂ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಚಿತ್ರದ ಶೂಟಿಂಗ್​ ಜನವರಿಯಿಂದ ಪ್ರಾರಂಭವಾಗುವ ಸಾಧ್ಯತೆಗಳಿವೆ.

vijay devarakonda next movie fighter
ವಿಜಯ್​​​ ದೇವರಕೊಂಡ

By

Published : Dec 10, 2019, 8:20 AM IST

ಅರ್ಜುನ್​ ರೆಡ್ಡಿ, ಗೀತ ಗೋವಿಂದಂ, ಡಿಯರ್​ ಕಾಮ್ರೇಡ್​​​ ಸಿನಿಮಾಗಲ್ಲಿ ಮಿಂಚಿರುವ ವಿಜಯ್​ ದೇವರಕೊಂಡ ಹ್ಯಾಂಡ್​ಸಮ್​​ ಲುಕ್​​ ಹಾಗೂ ನಟನೆಗೆ ಕೇವಲ ತೆಲುಗು ಭಾಷಿಗರಲ್ಲದೆ ದಕ್ಷಿಣ ಭಾರತದ ಹಲವರು ಫಿದಾ ಆಗಿದ್ದಾರೆ.

ವಿಜಯ್​​​ ದೇವರಕೊಂಡ ಮುಂದಿನ​​ ಸಿನಿಮಾ ಬಾಲಿವುಡ್​ನಲ್ಲಿಯೂ ಬಿಡುಗಡೆ ಸಾಧ್ಯತೆ

ಇದೀಗ ವಿಜಯ್​ ದೇವರಕೊಂಡ, ಪುರಿ ಜಗನ್ನಾಥ್​​ ನಿರ್ದೇಶನದ 'ಫೈಟರ್'​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಹಳೆ ಸುದ್ದಿ. ಆದ್ರೆ ಫೈಟರ್​​ ಸಿನಿಮಾವನ್ನು ಪ್ಯಾನ್​​ ಇಂಡಿಯಾ ಚಿತ್ರವನ್ನಾಗಿಸಬೇಕು ಎಂಬ ಮಾತುಕತೆಗಳು ಚಿತ್ರತಂಡದಿಂದ ನಡೆಯುತ್ತಿವೆ. ಅಲ್ಲದೆ ಈ ಸಿನಿಮಾ ಮೂಲಕ ವಿಜಯ್​​ ದೇವರಕೊಂಡ ಬಾಲಿವುಡ್​ಗೂ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ಫೈಟರ್​​​ ನಿರ್ಮಾಪಕ ಚಾರ್ಮಿ ಮತ್ತು ಬಾಲಿವುಡ್​​ ಖ್ಯಾತ ನಿರ್ಮಾಪಕ ಕರಣ್​​​ ಜೋಹರ್​​ ನಡುವೆ ನಡೆದಿರುವ ಮಾತುಕತೆ. ಈ ಚಿತ್ರದ ಶೂಟಿಂಗ್​ ಜನವರಿಯಿಂದ ಪ್ರಾರಂಭವಾಗುವ ಸಾಧ್ಯತೆಗಳಿವೆ.

ವಿಜಯ್​​​ ದೇವರಕೊಂಡ

ಇನ್ನು ಫೈಟರ್​​ ಚಿತ್ರವನ್ನು ಪ್ಯಾನ್​ ಇಂಡಿಯಾ ಸಿನಿಮಾವನ್ನಾಗಿ ಮಾಡಲು ಹೊರಟಿರುವ ಚಿತ್ರತಂಡ ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲೂ ತೆರೆಗೆ ತರಬೇಕೆಂಬ ಪ್ಲಾನ್​ ನಡೆಸಿದೆ.

ವಿಜಯ್​​​ ದೇವರಕೊಂಡ

ಇನ್ನೊಂದು ಸುದ್ದಿ ಈಗಾಗಲೇ ಹರಿದಾಡುತ್ತಿದ್ದು, ಈ ಸಿನಿಮಾಕ್ಕೆ ನಾಯಕಿಯರ ಹುಟುಕಾಟವೂ ನಡೆಯುತ್ತಿದೆಯಂತೆ. ವಿಜಯ್​​ ಆ್ಯಕ್ಟಿಂಗ್​ ಮತ್ತು ಫೇಮಸ್​​​​ ಆಗಿರುವುದನ್ನು ಕಂಡು ಬಾಲಿವುಡ್​​​ ನಟಿಯರೂ ಕೂಡ ವಿಜಯ್​ ಜೊತೆ ನಟಿಸಲು ಮುಂದಾಗಿದ್ದಾರಂತೆ. ಈ ಹಿಂದೆ ದಿವಂಗತ ನಟಿ ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಮತ್ತು ಕಿಯಾರ ಅಡ್ವಾಣಿ ಜೊತೆ ಮಾತುಕತೆ ನಡೆಸಲಾಗಿತ್ತು ಎನ್ನಲಾಗಿದೆ.

ವಿಜಯ್​​​ ದೇವರಕೊಂಡ

ABOUT THE AUTHOR

...view details