ಕರ್ನಾಟಕ

karnataka

ETV Bharat / sitara

ಸಿಲಿಕಾನ್ ಸಿಟಿಯಲ್ಲಿ ಧೂಳೆಬ್ಬಿಸುತ್ತಿರುವ ಲಿಲ್ಲಿ-ಬಾಬ್ಬಿ! - undefined

'ಡಿಯರ್ ಕಾಮ್ರೇಡ್' ಚಿತ್ರದ ಪ್ರಮೋಶನ್​​ಗಾಗಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಬೆಂಗಳೂರಿಗೆ ಬಂದಿದ್ದಾರೆ. ಈ ಸಿನಿಮಾ ಕನ್ನಡದಲ್ಲಿ ಕೂಡಾ ಡಬ್ ಆಗುತ್ತಿದ್ದು ಇದೇ ತಿಂಗಳ 26 ರಂದು ತೆರೆ ಕಾಣುತ್ತಿದೆ.

ರಶ್ಮಿಕಾ, ವಿಜಯ್

By

Published : Jul 12, 2019, 10:21 PM IST

'ಗೀತ ಗೋವಿಂದಂ' ಸಿನಿಮಾ ನಂತರ ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಡಿಯರ್​ ಕಾಮ್ರೇಡ್'. ಈಗಾಗಲೇ ಟ್ರೇಲರ್​​​ನಿಂದ ಸೆನ್ಸೇಷನ್ ಹುಟ್ಟುಹಾಕಿರುವ 'ಡಿಯರ್ ಕಾಮ್ರೇಡ್' ಕನ್ನಡದಲ್ಲಿ ಕೂಡಾ ಡಬ್ ಆಗಿ ಬಿಡುಗಡೆಯಾಗುತ್ತಿದೆ.

ಬೆಂಗಳೂರಿನಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ

ಬಾಬ್ಬಿ ಪಾತ್ರದಲ್ಲಿ ನಟಿಸಿರುವ ವಿಜಯ್ ದೇವರಕೊಂಡ ಹಾಗೂ ಲಿಲ್ಲಿ ಪಾತ್ರದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಸಿಲಿಕಾನ್ ಸಿಟಿಯಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಈ ಚಿತ್ರದ ಪ್ರಮೋಶನ್​​​​ಗಾಗಿ ವಿಜಯ್ ದೇವರಕೊಂಡ ಹಾಗು ರಶ್ಮಿಕಾ ಮಂದಣ್ಣ ಬೆಂಗಳೂರಿಗೆ ಬಂದಿದ್ದಾರೆ. ಸಿನಿಮಾ ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಬ್ ಆಗಿ ದೇಶಾದ್ಯಂತ ಇದೇ 26ಕ್ಕೆ ರಿಲೀಸ್ ಆಗುತ್ತಿದೆ.

ಕಾಲೇಜ್ ಕ್ಯಾಂಪಸ್​ನಲ್ಲಿ ನಡೆಯುವ ಪ್ರೀತಿ-ಪ್ರೇಮದ ಕಥೆಯನ್ನೊಂದಿದೆ ಈ ಸಿನಿಮಾ. ಇದರ ಜೊತೆಗೆ ಸಿನಿಮಾದ ಮ್ಯೂಸಿಕ್ ನೈಟ್ ಕೂಡಾ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಮ್ಯೂಸಿಕ್ ನೈಟ್​​​​ಗೆ ರಾಕಿಂಗ್ ಸ್ಟಾರ್ ಯಶ್ ವಿಶೇಷ ಅತಿಥಿಯಾಗಿ ಹೋಗುತ್ತಿದ್ದಾರೆ. ರಶ್ಮಿಕಾ ಮಂದಣ್ಣ ತಮ್ಮ ಪಾತ್ರಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ಅವರೇ ಡಬ್ಬಿಂಗ್ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details