ಕರ್ನಾಟಕ

karnataka

ETV Bharat / sitara

ಒಟ್ಟಿಗೆ ನಟಿಸಲಿದ್ದಾರಾ ವಿಜಯ್​ ದೇವರಕೊಂಡ-ಅನುಷ್ಕ ಶೆಟ್ಟಿ ...? - Anushka pair with Vijay devarakonda

ಅನುಷ್ಕ ಶೆಟ್ಟಿ ಹಾಗೂ ವಿಜಯ್ ದೇವರಕೊಂಡ ಜೊತೆಯಲ್ಲಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈಗಾಗಲೇ ಇಬ್ಬರೂ ಚಿತ್ರದ ಕಥೆ ಕೇಳಿದ್ದು ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಲಿದ್ದಾರೆ ಎನ್ನಲಾಗುತ್ತಿದೆ.

Vijay devarakonda and Anushka
ಅನುಷ್ಕ ಶೆಟ್ಟಿ

By

Published : Oct 7, 2020, 5:22 PM IST

ತೆಲುಗು ಚಿತ್ರರಂಗದಲ್ಲಿ ವಿಜಯ್ ದೇವರಕೊಂಡ ಎಂದರೆ ಯುವಜನತೆಗೆ ಒಂದು ರೀತಿಯ ಕ್ರೇಜ್. ಅದೇ ರೀತಿ 'ಸೂಪರ್​​' ಚಿತ್ರದಿಂದ ಇಂದಿನ 'ನಿಶ್ಯಬ್ಧಂ' ಚಿತ್ರದವರೆಗೂ ಅದೇ ಬೇಡಿಕೆ ಉಳಿಸಿಕೊಂಡಿರುವ ನಟಿ ಅನುಷ್ಕ ಶೆಟ್ಟಿ ಎಂದರೆ ಕೂಡಾ ಸಿನಿಪ್ರಿಯರಿಗೆ ಬಹಳ ಇಷ್ಟ. ಈ ಇಬ್ಬರೂ ಸ್ಟಾರ್​ಗಳು ಒಟ್ಟಿಗೆ ನಟಿಸಿದರೆ ಆ ಚಿತ್ರ ಹೇಗಿರಬಹುದು...?

ಅನುಷ್ಕ ಶೆಟ್ಟಿ

ವಿಜಯ್ ದೇವರಕೊಂಡ ಹಾಗೂ ಅನುಷ್ಕ ಶೆಟ್ಟಿ ಜೊತೆಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಈಗ ಟಾಲಿವುಡ್​ನಲ್ಲಿ ಹರಿದಾಡುತ್ತಿದೆ. ತೆಲುಗು ಚಿತ್ರರಂಗದಲ್ಲಿ ನಿರ್ದೇಶಕನಾಗಿ ನೆಲೆಯೂರಲು ಟಾಲಿವುಡ್​​​​​​ನತ್ತ ಬಂದಿರುವ ಯುವ ನಿರ್ದೇಶಕರೊಬ್ಬರು ಈಗಾಗಲೇ ವಿಜಯ್ ಹಾಗೂ ಅನುಷ್ಕ ಇಬ್ಬರಿಗೂ ಕಥೆ ಹೇಳಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಈ ಸ್ಕ್ರಿಪ್ಟ್​ ಬಹಳ ವಿಭಿನ್ನವಾಗಿದ್ದು ಇಬ್ಬರೂ ಕೂಡಾ ಈ ಚಿತ್ರದಲ್ಲಿ ಕೆಲಸ ಮಾಡಲು ಆಸಕ್ತಿ ತೋರಿದ್ದು ಸದ್ಯಕ್ಕೆ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ ನಂತರ ಇಬ್ಬರೂ ಈ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ವಿಜಯ್ ದೇವರಕೊಂಡ

ಅನುಷ್ಕ, ಮಾಧವನ್, ಶಾಲಿನಿ ಪಾಂಡೆ ನಟಿಸಿರುವ 'ನಿಶ್ಯಬ್ಧಂ' ಚಿತ್ರ ಅಕ್ಟೋಬರ್ 2 ರಂದು ಒಟಿಟಿಯಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇತ್ತ ವಿಜಯ್ ದೇವರಕೊಂಡ 'ಫೈಟರ್' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಸ್ಟಾರ್​​ಗಳು ನಿಜಕ್ಕೂ ಒಟ್ಟಿಗೆ ನಟಿಸಲಿದ್ದಾರಾ ಎಂಬುದನ್ನು ತಿಳಿಯಲು ಇನ್ನೂ ಕೆಲವು ದಿನಗಳು ಕಾದು ನೋಡಬೇಕು.

ABOUT THE AUTHOR

...view details