'ಪಂಚತಂತ್ರ' ಚಿತ್ರದ ಮೂಲಕ ಖ್ಯಾತಿ ಗಳಿಸಿದ ವಿಹಾನ್ ಗೌಡ ಇದೀಗ ತಮ್ಮ ಹೊಸ ಚಿತ್ರಕ್ಕೆ ಸಿದ್ಧವಾಗುತ್ತಿದ್ದಾರೆ. ಸಿನಿಮಾ ಮೈ ಡಾರ್ಲಿಂಗ್, ಕಾಲ್ ಕೆಜಿ ಪ್ರೀತಿ ಚಿತ್ರದ ನಂತರ ವಿಹಾನ್ ಯೋಗರಾಜ್ ಭಟ್ ಅವರ 'ಪಂಚತಂತ್ರ' ದಲ್ಲಿ ಅಭಿನಯಿಸಿದ್ದರು. ಇದೀಗ 'ಲೆಗಸಿ' ಎಂಬ ಸಿನಿಮಾದಲ್ಲಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಲವರ್ ಬಾಯ್ ಇಮೇಜ್ನಿಂದ ಹೊರಬರಲು ಪ್ರಯತ್ನ...ಮುಂದಿನ ಚಿತ್ರದಲ್ಲಿ ವಿಹಾನ್ ಹೊಸ ಲುಕ್ - ಮುಂದಿನ ಚಿತ್ರದಲ್ಲಿ ವಿಹಾನ್ ಹೊಸ ಲುಕ್
‘ಲೆಗಸಿ’ ಚಿತ್ರದಲ್ಲಿ ವಿಹಾನ್ ಲವರ್ ಬಾಯ್ ಇಮೇಜಿನಿಂದ ಹೊರಬಂದು ವಿಭಿನ್ನ ಪಾತ್ರ ಮಾಡುತ್ತಿದ್ದಾರೆ. ಸಿನಿಮಾದ ಫಸ್ಟ್ಲುಕ್ ನೋಡಿದರೆ ಇದೊಂದು ಆ್ಯಕ್ಷನ್, ಥ್ರಿಲ್ಲರ್ ಕಥಾವಸ್ತುವನ್ನೊಂದಿದೆ ಎಂಬುದು ತಿಳಿಯುತ್ತದೆ.
![ಲವರ್ ಬಾಯ್ ಇಮೇಜ್ನಿಂದ ಹೊರಬರಲು ಪ್ರಯತ್ನ...ಮುಂದಿನ ಚಿತ್ರದಲ್ಲಿ ವಿಹಾನ್ ಹೊಸ ಲುಕ್ Vihan gowda](https://etvbharatimages.akamaized.net/etvbharat/prod-images/768-512-6192955-thumbnail-3x2-legesi.jpg)
ಸುಭಾಷ್ ಎಂಬುವವರ ಮೊದಲ ನಿರ್ದೇಶನದ ಸಿನಿಮಾ ಇದಾಗಿದ್ದು ನಿನ್ನೆಯಷ್ಟೇ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಗ್ರೇಟ್ ಬ್ರೋಸ್ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಈ ಚಿತ್ರ ತಯಾರಾಗುತ್ತಿದೆ. ಈ ಚಿತ್ರದಲ್ಲಿ ವಿಹಾನ್ ಲವರ್ ಬಾಯ್ ಇಮೇಜಿನಿಂದ ಹೊರಬಂದು ವಿಭಿನ್ನ ಪಾತ್ರ ಮಾಡುತ್ತಿದ್ದಾರೆ. ಸಿನಿಮಾದ ಫಸ್ಟ್ಲುಕ್ ನೋಡಿದರೆ ಇದೊಂದು ಆ್ಯಕ್ಷನ್, ಥ್ರಿಲ್ಲರ್ ಕಥಾವಸ್ತುವನ್ನೊಂದಿದೆ ಎಂಬುದು ತಿಳಿಯುತ್ತದೆ. ಜೊತೆಗೆ ಈ ಸಿನಿಮಾದಲ್ಲಿ ತಂದೆ-ಮಗನ ಸೆಂಟಿಮೆಂಟ್ ಕೂಡಾ ಇದೆ ಎನ್ನಲಾಗಿದೆ. ನಿಖಿಲ್ ಕುಮಾರಸ್ವಾಮಿ ಜೊತೆ ‘ಜಾಗ್ವಾರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ದೀಪ್ತಿ ಸತಿ 'ಲೆಗಸಿ' ಚಿತ್ರದ ನಾಯಕಿ. ಈ ಚಿತ್ರದ ಜೊತೆಗೆ ದೀಪ್ತಿ 'ರಾಜ ಮಾತಾಂಡ' ಚಿತ್ರದಲ್ಲಿ ಕೂಡಾ ನಟಿಸುತ್ತಿದ್ದಾರೆ.
ಬೆಂಗಳೂರು, ಮದ್ದೂರು, ದೊಡ್ಡಬಳ್ಳಾಪುರ, ಮಡಿಕೇರಿ ಹಾಗೂ ರಾಮನಗರ ಸುತ್ತ ಚಿತ್ರೀಕರಣ ನಡೆಸಲಾಗುತ್ತಿದೆ. ನಿರ್ದೇಶಕ ಸುಭಾಷ್ ಚಂದ್ರ 'ಕುರುಕ್ಷೇತ್ರ’ ಚಿತ್ರಕ್ಕೆ ಸಹಾಯಕ ನಿರ್ದೇಶಕ ಆಗಿ ಕೂಡಾ ಕೆಲಸ ಮಾಡಿದ್ದರು.‘ಲೆಗಸಿ’ ಚಿತ್ರಕ್ಕೆ ಸುರೇಶ್ ರಾಜ್ ಸಂಗೀತ, ಸುಂದರ್. ಪಿ ಛಾಯಾಗ್ರಹಣ, ಶಿವ-ಪ್ರೇಮ್ ಸಾಹಸ, ಸುನಿಲ್ ಸಂಕಲನ, ಜಯಂತ್ ಕಾಯ್ಕಿಣಿ ಮತ್ತು ಡಾ ವಿ. ನಾಗೇಂದ್ರ ಪ್ರಸಾದ್ ಗೀತರಚನೆ ಇದೆ.