ಕರ್ನಾಟಕ

karnataka

ETV Bharat / sitara

ಕಿರುತೆರೆಯಲ್ಲಿ ಪ್ರಸಾರವಾಗಲಿದೆ ‘ಅಧ್ಯಕ್ಷ ಇನ್ ಅಮೆರಿಕ’ - Adhyaksha in America movie will telecast in Small screen

ಸದ್ಯಕ್ಕೆ ಮನೆಯಲ್ಲೇ ಬೀಡುಬಿಟ್ಟಿರುವ ಜನರಿಗೆ ಮನರಂಜನೆ ಒದಗಿಸುವ ಉದ್ದೇಶದಿಂದ ಡಿಜಿಟಲ್ ಪ್ಲಾಟ್​​​​ಫಾರ್ಮ್​ಗಳು ಹೊಸ ಸಿನಿಮಾಗಳನ್ನು ಪ್ರಸಾರ ಮಾಡುತ್ತಿದೆ. ಇದೀಗ ಉದಯ ಟಿವಿ ಕೂಡಾ ಕಳೆದ ವರ್ಷ ಬಿಡುಗಡೆಯಾದ ‘ಅಧ್ಯಕ್ಷ ಇನ್ ಅಮೆರಿಕ’ ಚಿತ್ರವನ್ನು ಪ್ರಸಾರ ಮಾಡುತ್ತಿದೆ.

Adhyaksha in America
ಅಧ್ಯಕ್ಷ ಇನ್ ಅಮೆರಿಕ

By

Published : Apr 8, 2020, 5:44 PM IST

ಮನೆಯಲ್ಲಿರುವ ಪ್ರೇಕ್ಷಕರು ಈಗ ಡಿಜಿಟಲ್​ ಪ್ಲಾಟ್​​​​ಫಾರ್ಮ್​ನಲ್ಲಿ ಪ್ರಸಾರವಾಗುತ್ತಿರುವ ಸಿನಿಮಾಗಳನ್ನು ಎಂಜಾಯ್ ಮಾಡುತ್ತಿದ್ಧಾರೆ. ಅದರೊಂದಿಗೆ ವಾಹಿನಿಗಳು ಕೂಡಾ ಪೈಪೋಟಿಗೆ ಇಳಿದಿವೆ. ದಿನಕ್ಕೊಂದು ಹೊಸ ಸಿನಿಮಾ ಅಂತ ಇತ್ತೀಚೆಗೆ ಬಿಡುಗಡೆಯಾದ ಸಿನಿಮಾಗಳನ್ನು ವಾಹಿನಿಯಲ್ಲಿ ಪ್ರಸಾರ ಮಾಡುತ್ತಿದೆ.

ಈಗ ಉದಯ ಟಿವಿಯ ಸರದಿ. ಅತಿ ಹೆಚ್ಚು ಕನ್ನಡ ಸಿನಿಮಾಗಳ ಹಕ್ಕನ್ನು ಖರೀದಿಸಿರುವ ವಾಹಿನಿ ಕಳೆದ ವರ್ಷ ಬಿಡುಗಡೆ ಆದ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾವನ್ನು ಏಪ್ರಿಲ್ 10 ಸಂಜೆ 6.30 ಕ್ಕೆ ಪ್ರಸಾರ ಮಾಡುತ್ತಿದೆ. ನಾಯಕ ಶರಣ್ ಹಾಗೂ ರಾಗಿಣಿ ದ್ವಿವೇದಿ ಅವರು ಅಭಿನಯಿಸಿದ ಈ ಚಿತ್ರವನ್ನು ಯೋಗಾನಂದ್ ಮುದ್ದನ್ ನಿರ್ದೇಶಿಸಿದ್ದಾರೆ. ಭಾರತ ಹಾಗೂ ವಿದೇಶದಲ್ಲಿ ಬಿಡುಗಡೆ ಆದ ಸಿನಿಮಾ ಇದು. ಮಲಯಾಳಂ ಭಾಷೆಯಲ್ಲಿ ‘ಟೂ ಕಂಟ್ರೀಸ್’ ಎಂಬ ಸಿನಿಮಾವನ್ನು ಕನ್ನಡದಲ್ಲಿ ‘ಅಧ್ಯಕ್ಷ ಇನ್ ಅಮೆರಿಕ’ ಹೆಸರಿನಲ್ಲಿ ಮಾಡಲಾಗಿದೆ.

ವಿ. ಹರಿಕೃಷ್ಣ ಸಂಗೀತ ನಿರ್ದೇಶಿಸಿರುವ ಈ ಚಿತ್ರದಲ್ಲಿ ದಿಶಾ ಪಾಂಡೆ, ಪ್ರಕಾಶ್​​​ ಬೆಳವಾಡಿ, ಅವಿನಾಶ್, ರಂಗಾಯಣ ರಘು, ಸಾಧು ಕೋಕಿಲ, ಮಕರಂದ್ ದೇಶ್​​​ಪಾಂಡೆ, ಚಿತ್ರಾ ಶೆಣೈ, ಪದ್ಮಜಾ ರಾವ್, ತಾರಕ್ ಪೊನ್ನಪ್ಪ, ರಾಕ್ ಲೈನ್ ಸುಧಾಕರ್, ಆಂಟೋನಿ ಕಮಲ್, ಸುಂದರ್ ವೀಣಾ ಹಾಗೂ ಇತರರು ನಟಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details