ಕರ್ನಾಟಕ

karnataka

ETV Bharat / sitara

ವೆಂಕಟೇಶ್-ನಯನತಾರಾ ಅಭಿನಯದ ತೆಲುಗು ಸಿನಿಮಾ ಕನ್ನಡಕ್ಕೆ ಡಬ್: ಉದಯ ವಾಹಿನಿಯಲ್ಲಿ ಪ್ರಸಾರ - ಬಾಬು ಬಂಗಾರ ತೆಲುಗು ಸಿನಿಮಾ ಕನ್ನಡಕ್ಕೆ ಡಬ್

ವಿಕ್ಟರಿ ವೆಂಕಟೇಶ್, ನಯನತಾರಾ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದ " ಬಾಬು ಬಂಗಾರ " ತೆಲುಗು ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದು, ಇದೇ ಭಾನುವಾರ ಸಂಜೆ 6.30ಕ್ಕೆ ಉದಯ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.

Victory Venkatesh, Nayanthara Acting Telugu Cinema Dubbed for Kannada
ವಿಕ್ಟರಿ ವೆಂಕಟೇಶ್- ನಯನತಾರಾ ಅಭಿನಯದ ತೆಲುಗು ಸಿನಿಮಾ ಕನ್ನಡಕ್ಕೆ ಡಬ್

By

Published : Oct 15, 2020, 11:03 AM IST

ತೆಲುಗು ಚಿತ್ರರಂಗದ ಖ್ಯಾತ ನಟ ವೆಂಕಟೇಶ್ ಹಾಗೂ ಮೋಹಕ ತಾರೆ ನಯನತಾರಾ ಅಭಿನಯದ ‘ಬಾಬು ಬಂಗಾರ’ ಈಗ ಕನ್ನಡಕ್ಕೆ ಡಬ್ ಆಗಿದೆ. ಭಾನುವಾರ ಸಂಜೆ 6.30ಕ್ಕೆ ಉದಯ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.

"ಬಾಬು ಬಂಗಾರ" 2016ರ ಆ್ಯಕ್ಷನ್ ಮತ್ತು ಹಾಸ್ಯ ಚಿತ್ರವಾಗಿದ್ದು, ಎಸ್.ನಾಗ ವಂಶಿ, ಪಿ.ಡಿ.ವಿ.ಪ್ರಸಾದ್ ಅವರು ಸೀತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ನಿರ್ಮಿಸಿದ್ದಾರೆ. ಮಾರುತಿ ನಿರ್ದೇಶಿಸಿದ್ದು, ವಿಕ್ಟರಿ ವೆಂಕಟೇಶ್, ನಯನತಾರಾ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಗಿಬ್ರಾನ್ ಸಂಗೀತ ಸಂಯೋಜಿಸಿದ್ದಾರೆ.

ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಚಲನಚಿತ್ರ “ಬಾಬು ಬಂಗಾರ” ಭಾನುವಾರ (18.10.2020) ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

For All Latest Updates

ABOUT THE AUTHOR

...view details