ತೆಲುಗಿನ ವಿಕ್ಟರಿ ವೆಂಕಟೇಶ್ ಕನ್ನಡಿಗರಿಗೂ ಚಿರಪರಿಚಿತ. ಇವರಿಗೆ ಮದುವೆ ವಯಸ್ಸಿನ ಮಗಳಿದ್ದಾಳೆ ಎಂದರೆ ನಂಬಲು ಕಷ್ಟವಾದರೂ ಅದು ನಿಜ. ಏಕೆಂದರೆ ಇಂದಿಗೂ ವೆಂಕಟೇಶ್ ಯುವತಿಯರ ಮೋಸ್ಟ್ ಫೇವರೆಟ್ ನಟ. ವಿಕ್ಟರಿ ವೆಂಕಟೇಶ್ ಮಗಳು ಇಂದು ಸಪ್ತಪದಿ ತುಳಿದಿದ್ದಾರೆ.
ಧೀರ್ಘಕಾಲದ ಗೆಳೆಯನನ್ನು ವರಿಸಿದ ವಿಕ್ಟರಿ ವೆಂಕಟೇಶ್ ಪುತ್ರಿ - ವಿಕ್ಟರಿ ವೆಂಕಟೇಶ್
ಟಾಲಿವುಡ್ ಎವರ್ಗ್ರೀನ್ ಹೀರೋ ವಿಕ್ಟರಿ ವೆಂಕಟೇಶ್ ಪುತ್ರಿಗೆ ಕಂಕಣ ಬಲ ಕೂಡಿ ಬಂದಿದೆ. ಇಂದು ರಾಜಸ್ಥಾನದ ಜೈಪುರದಲ್ಲಿ ತಮ್ಮ ಧೀರ್ಘಕಾಲದ ಗೆಳೆಯನನ್ನು ವೆಂಕಟೇಶ್ ಪುತ್ರಿ ವರಿಸಿದ್ದಾರೆ.
ಕಳೆದ ತಿಂಗಳು ವೆಂಕಟೇಶ್ ಪುತ್ರಿ ಅಶ್ರಿತಾಗೆ ನಿಶ್ಚಿತಾರ್ಥ ನೆರವೇರಿತ್ತು. ಇಂದು ರಾಜಸ್ಥಾನದ ಜೈಪುರದಲ್ಲಿ ಧೀರ್ಘಕಾಲದ ಗೆಳೆಯ ವಿನಾಯಕ್ ರೆಡ್ಡಿ ಅವರನ್ನು ಅಶ್ರಿತಾ ವರಿಸಿದ್ದಾರೆ. ವಧು ವರರಿಬ್ಬರು ಬೇರೆ ಜಾಗದಲ್ಲಿ ಮದುವೆಯಾಗಲು ಮೊದಲೇ ನಿರ್ಧರಿಸಿದ್ದರಿಂದ ಜೈಪುರದಲ್ಲಿ ವಿವಾಹ ಕಾರ್ಯಗಳು ನೆರವೇರಿವೆ. ವೆಂಕಟೇಶ್ ಅಳಿಯ ವಿನಾಯಕ್ ಹೈದರಾಬಾದ್ ರೇಸ್ಕ್ಲಬ್ ಸುರೇಂದ್ರ ರೆಡ್ಡಿ ಅವರ ಪುತ್ರ. ರಾಮ್ ಚರಣ್ತೇಜ, ಪತ್ನಿ ಉಪಾಸನಾ, ರಾಣಾ ದಗ್ಗುಬಾಟಿ, ಸಲ್ಮಾನ್ ಖಾನ್, ನಾಗ ಚೈತನ್ಯ, ಸಮಂತಾ ಅಕ್ಕಿನೇನಿ ಹಾಗೂ ಇನ್ನಿತರ ಸೆಲಬ್ರಿಟಿಗಳು ಮದುವೆಗೆ ಹಾಜರಾಗಿ ವಧುವರರಿಗೆ ಶುಭ ಕೋರಿದ್ದಾರೆ.
ಶೀಘ್ರದಲ್ಲೇ ಹೈದರಾಬಾದ್ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಏರ್ಪಡಿಸುವುದಾಗಿ ವೆಂಕಟೇಶ್ ಕುಟುಂಬದ ಮೂಲಗಳು ತಿಳಿಸಿವೆ.