ಬಾಲಿವುಡ್ ಸ್ಟಾರ್ ಜೋಡಿಯಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ತಮ್ಮ ನಡೆ - ನುಡಿಗಳಿಂದ ಎಲ್ಲರ ಮನ ಗೆಲ್ಲುತ್ತಿದ್ದಾರೆ. ಇದೀಗ ನಟ ವಿಕ್ಕಿ ಕೌಶಲ್ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುವಂತಹ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಮತ್ತೆ ಅಭಿಮಾನಿಗಳ ಮನ ಗೆದ್ದಿದ್ದಾರೆ.
Watch video: ನಟನಾ ಶಾಲೆಯ ಹಳೆ ದಿನಗಳನ್ನು ಮೆಲುಕು ಹಾಕಿದ ವಿಕ್ಕಿ ಕೌಶಲ್ - ನಟನಾ ಶಾಲೆಯ ಹಳೆ ದಿನಗಳನ್ನು ಮೆಲುಕು ಹಾಕಿದ ವಿಕ್ಕಿ ಕೌಶಲ್
ವಿಕ್ಕಿ ಕೌಶಲ್ ನಟನಾ ಶಾಲೆಯಲ್ಲಿದ್ದಾಗ ಕಳೆದ ಹಳೆಯ ದಿನಗಳನ್ನು ಮೆಲುಕು ಹಾಕುವಂತಹ ವಿಡಿಯೋವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮರು ಪೋಸ್ಟ್ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಝಲಕ್ ಇಲ್ಲಿದೆ ನೋಡಿ.
![Watch video: ನಟನಾ ಶಾಲೆಯ ಹಳೆ ದಿನಗಳನ್ನು ಮೆಲುಕು ಹಾಕಿದ ವಿಕ್ಕಿ ಕೌಶಲ್ ವಿಕ್ಕಿ ಕೌಶಲ್](https://etvbharatimages.akamaized.net/etvbharat/prod-images/768-512-14223442-thumbnail-3x2-lek.jpg)
ಹೌದು, ವಿಕ್ಕಿ ಕೌಶಲ್ ನಟನಾ ಶಾಲೆಯಲ್ಲಿದ್ದಾಗ ಕಳೆದ ಹಳೆಯ ದಿನಗಳನ್ನು ಮೆಲುಕು ಹಾಕುವಂತಹ ವಿಡಿಯೋವೊಂದನ್ನು ಮರು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ನಟಿ ಶಿರೀನ್ ಮಿರ್ಜಾ ತಮ್ಮ 'ಆ್ಯಸ್ಕ್ ಮಿ ಎನಿಥಿಂಗ್' ಸೆಷನ್‌ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ನಟ ವಿಕ್ಕಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮರು ಪೋಸ್ಟ್ ಮಾಡಿದ್ದಾರೆ.
2009 ರಲ್ಲಿ ಮಾಡಿದ ವಿಡಿಯೋ ಇದಾಗಿದ್ದು, 'ಯೇ ಹೈ ಮೊಹಬ್ಬತೇ’ ಎಂಬ ನಾಟಕದಲ್ಲಿ ವಿಕ್ಕಿ ನಟಿಸುತ್ತಿರುವುದನ್ನು ನಾವು ನೋಡಬಹುದು. ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮರು ಪೋಸ್ಟ್ ಮಾಡಿದ ವಿಕ್ಕಿ, ಅದಕ್ಕೆ "ಉತ್ತಮ ಹಳೆಯ ನಟನಾ ಶಾಲಾ ದಿನಗಳು (2009)'' ಎಂದು ಶೀರ್ಷಿಕೆ ಸಹ ಬರೆದಿದ್ದಾರೆ. ಈ ಕುರಿತಾದ ವಿಡಿಯೋ ಝಲಕ್ ಇಲ್ಲಿದೆ ನೋಡಿ.