ಕರ್ನಾಟಕ

karnataka

ETV Bharat / sitara

ಲಾಕ್​​ ಡೌನ್​ ಸಮಯವನ್ನು ಜ್ಞಾನಾರ್ಜನೆಗಾಗಿ ಮೀಸಲಿಟ್ಟ ಹಿರಿಯ ನಟ ಶ್ರೀನಿವಾಸಮೂರ್ತಿ - VETERAN SRINIVASA MURTHY IN READING AND WRITING MOOD

400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ನಟಿಸಿರುವ ಶ್ರೀನಿವಾಸಮೂರ್ತಿ ಅವರು ಶ್ರೀ ಪುರುಷೋತ್ತಮ ಆನಂದ ಸ್ವಾಮೀಜಿ ಅವರು ಬರೆದಿರುವ ‘ಸ್ವಾಮಿ ವಿವೇಕಾನಂದ’ ಮೊದಲ ಸಂಪುಟದ 500 ಪುಟಗಳ ಪುಸ್ತಕವನ್ನು ಓದಿ ಮುಗಿಸಿದ್ದಾರೆ.

VETERAN SRINIVASA MURTHY IN READING AND WRITING MOOD
ಜ್ಞಾನಾರ್ಜನೆ ಮೂಡಿನಲ್ಲಿ ಕಳೆಯುತ್ತಿರುವ ಹಿರಿಯ ನಟ ಶ್ರೀನಿವಾಸಮೂರ್ತಿ

By

Published : Mar 31, 2020, 9:51 AM IST

ಕನ್ನಡ ಚಿತ್ರ ರಂಗದ ಪ್ರಭುದ್ದ ನಟ ಖಾಯಂ ‘ಭೋಜ ರಾಜ’ ಎಂದು ಹೆಸರು ಪಡೆದವರು ಹಿರಿಯ ನಟ ಶ್ರೀನಿವಾಸಮೂರ್ತಿ (ಅವರ ಕವಿರತ್ನ ಕಾಳಿದಾಸ – ಡಾ ರಾಜಕುಮಾರ್ ಹಾಗೂ ಜಯಪ್ರದಾ ಅಭಿನಯದ ಸಿನಿಮಾ ನಂತರ) ‘ಲಾಕ್ ಡೌನ್’ ಈ ಕೋರೋನಾ ವೈರಸ್ ಇಂದ ಸಮಯವನ್ನು ಅರ್ಥಗರ್ಭಿತವಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಆಗಿಂದ ದುಡಿದ ಕಾರಣ ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟವೇನು ಆಗಿಲ್ಲ. ಕಷ್ಟ ಅಂದರೆ ಮಕ್ಕಳಾದ ನಟ ನವೀನ್ ಕೃಷ್ಣ ಮತ್ತು ನಿಟಿಲ್ ಕೃಷ್ಣ ಇದ್ದಾರೆ. ಇವರ ಮಡದಿ ನಡೆಸುವ ಬ್ಯೂಟಿ ಪರ್ಲಾರ್ ಸಹ ಈಗ ಬೀಗ ಹಾಕಿರುವುದರಿಂದ ಈ ಭಗವದ್ ಭಕ್ತ ಶ್ರೀನಿವಾಸಮೂರ್ತಿ ಅವರು ಬರವಣಿಗೆ ಹಾಗೂ ಓದುವುದರಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ.

400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ನಟಿಸಿರುವ ಶ್ರೀನಿವಾಸಮೂರ್ತಿ ಅವರು ಶ್ರೀ ಪುರುಷೋತ್ತಮ ಆನಂದ ಸ್ವಾಮೀಜಿ ಅವರು ಬರೆದಿರುವ ‘ಸ್ವಾಮಿ ವಿವೇಕಾನಂದ’ ಮೊದಲ ಸಂಪುಟದ 500 ಪುಟಗಳ ಪುಸ್ತಕವನ್ನು ಓದಿ ಮುಗಿಸಿದ್ದಾರೆ. ಈ ಮೊದಲ ಸಂಪುಟದಲ್ಲಿ ವಿವೇಕಾನಂದರ ಬಾಲ್ಯ, ಪರಮಹಂಸರ ಭೇಟಿ ಹೀಗೆ ಅನೇಕ ವಿಚಾರಗಳು ಮೂಡಿಬಂದಿದೆ. ಇನ್ನೂ ಮೂರು ಸಂಪುಟಗಳನ್ನು ಓದುವ ತವಕ ಇದೆ ಎಂದು ಶ್ರೀನಿವಾಸಮೂರ್ತಿ ಹೇಳಿಕೊಳ್ಳುತ್ತಾರೆ.

ಜ್ಞಾನಾರ್ಜನೆ ಮೂಡಿನಲ್ಲಿ ಕಳೆಯುತ್ತಿರುವ ಹಿರಿಯ ನಟ ಶ್ರೀನಿವಾಸಮೂರ್ತಿ

ಇದರ ಜೊತೆಗೆ ಶ್ರೀನಿವಾಸಮೂರ್ತಿ ಅವರು ‘ರಾವಣ’ ಬಗ್ಗೆ ಅತೀವ ಆಸಕ್ತಿ ಇಂದ ಶ್ರೀ ರುದ್ರಮೂರ್ತಿ ಶಾಸ್ತ್ರೀ ಅವರ ಜೊತೆ ಚರ್ಚಿಸಿ ಅನೇಕ ವಿಚಾರಗಳನ್ನು ಸಿದ್ದ ಮಾಡಿದ್ದಾರೆ. ಅದು ಮುಂದಿನ ದಿನಗಳಲ್ಲಿ ಸಿನಿಮಾ ಆಗುವ ಸಾಧ್ಯತೆ ಹೆಚ್ಚಾಗಿದೆ. 18 ಬಾರಿ ‘ರಾವಣ’ ಸ್ಕ್ರಿಪ್ಟ್ ಅನ್ನು ತಿದ್ದಿ ಬರೆದಿದ್ದಾರೆ ಈ ಹಿರಿಯ ನಟ. ಇದೆ ಅಲ್ಲದೆ ‘ರಾಜ ವೀರ ಮದಕರಿ ನಾಯಕ’ ಸ್ಕ್ರಿಪ್ಟ್ ವರ್ಕ್ ಅಲ್ಲೂ ಸಹ ಶ್ರೀನಿವಾಸಮೂರ್ತಿ ಅವರು ಕಳೆದ ಎರಡು ವರ್ಷಗಳಿಂದ ತೊಡಗಿಕೊಂಡವರು. ಅದು ಈಗ ಚಿತ್ರೀಕರಣ ಮೊದಲ ಹಂತ ಮುಗಿಸಿದೆ.

ಸಧ್ಯದ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಈ ಚಿತ್ರರಂಗದಲ್ಲಿ ಅಂತ ಇವರನ್ನು ಕೇಳಿದರೆ, ಮೊದಲು ದೊಡ್ಡ ಸಂಭಾವನೆ ಪಡೆಯುವ ಕಲಾವಿದರುಗಳು ಮುಂದಾಗಬೇಕು, ಮೊದಲಿಂದಲೂ ಡಾ ರಾಜಕುಮಾರ್ ಸಂಕಷ್ಟಕ್ಕೆ ಬರುತ್ತಿರಲಿಲ್ಲವೇ. ಯಾರಾದರೂ ಆ ಜವಾಬ್ದಾರಿ ಹೊತ್ತು ಸಿನಿಮಾ ಕಾರ್ಮಿಕರಿಗೆ, ಬಡ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಬೇಕಾದ ಅವಶ್ಯಕತೆ ಬಗ್ಗೆ ಗಮನ ಹರಿಸಬೇಕು.

ನಾವು ಚಿತ್ರ ರಂಗದಲ್ಲಿ ಇಂತಹ ಪರಿಸ್ಥಿತಿಯನ್ನು ಅನುಭವಿಸಿದ್ದೇವೆ ಡಾ ರಾಜಕುಮಾರ್ ಅಪಹರಣ ಸಂದರ್ಭದಲ್ಲಿ. ಆದರೆ ಈಗ ಬಹಳ ಬಿಗಡಾಯಿಸಿರುವ ಪರಿಸ್ಥಿತಿ. ಎಲ್ಲರನ್ನು ಒಟ್ಟಾಗಿ ಸೇರಿಸಿ ಸಹಾಯ ಮಾಡುವಂತಿಲ್ಲ. ಅದಕ್ಕೆ ಅವರು ಇರುವ ಜಾಗಕ್ಕೆ ನಾಲ್ಕು ದಿಕ್ಕುಗಳಲ್ಲಿ ಸಂಚರಿಸಿ ಒಂದು ತಿಂಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನಾದರೂ ಮನೆ ಬಾಗಿಲಿಗೆ ನೀಡುವ ಕೆಲಸ ಆಗಬೇಕು ಅನ್ನುತ್ತಾರೆ ಶ್ರೀನಿವಾಸಮೂರ್ತಿ ಅವರು.

ನಾವು ಜನರಿಂದ ಮೇಲೆ ಬಂದಿರೋದು ಅಂತ ಹೇಳುವ ನಾಯಕರು ಅಕ್ಕ ಪಕ್ಕದ ರಾಜ್ಯಗಳಲ್ಲಿ ಸಹಾಯಕ್ಕೆ ನಿಂತಿರುವ ಹಾಗೆ ನಿಲ್ಲಬೇಕು ಎಂಬುದು ಶ್ರೀನಿವಾಸಮೂರ್ತಿ ಅವರ ಆಶಯ.

For All Latest Updates

ABOUT THE AUTHOR

...view details