ಕರ್ನಾಟಕ

karnataka

ETV Bharat / sitara

ಇಂದು ವಿಶ್ವ ಛಾಯಾಗ್ರಾಹಕರ ದಿನ... ವೃತ್ತಿ ಜೀವನದ ಅನುಭವ ಬಿಚ್ಚಿಟ್ಟ ವಿಶ್ವನಾಥ್​ ಸುವರ್ಣ - Career experience

ಇಂದು ವಿಶ್ವ ಛಾಯಾಗ್ರಾಹಕರ ದಿನವಾಗಿದ್ದು, ಹಿರಿಯ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ತಮ್ಮ ವೃತ್ತಿ ಜೀವನದ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ವರನಟ ಡಾ. ರಾಜ್​​ಕುಮಾರ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಒಟ್ಟಿಗೆ ನಿಲ್ಲಿಸಿ ಫೋಟೋ ತೆಗೆದಿದ್ದು ಕೂಡಾ ವಿಶ್ವನಾಥ್ ಅವರಂತೆ.

ವಿಶ್ವನಾಥ್ ಸುವರ್ಣ

By

Published : Aug 19, 2019, 2:11 PM IST

ಸುಂದರವಾದ, ಅಪರೂಪದ ಫೋಟೋಗಳನ್ನು ಸೆರೆ ಹಿಡಿಯುವ ಛಾಯಾಗ್ರಾಹಕರಿಗೆ ಇಂದು ವಿಶೇಷ ದಿನ. ವಿಶ್ವ ಛಾಯಾಗ್ರಾಹಕರ ದಿನವಾದ ಇಂದು ವಿಭಿನ್ನ ಕಾರ್ಯಕ್ರಮಗಳ ಮೂಲಕ ಛಾಯಾಗ್ರಾಹಕರು ತಮ್ಮ ದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ವೃತ್ತಿ ಜೀವನದ ಅನುಭವ ಬಿಚ್ಚಿಟ್ಟ ವಿಶ್ವನಾಥ್ ಸುವರ್ಣ

ಛಾಯಾಗ್ರಹಕರು, ಅದರಲ್ಲೂ ಪತ್ರಿಕಾರಂಗದಲ್ಲಿ ಛಾಯಾಗ್ರಹಕರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಕೇಳುವುದೇ ಒಂದು ರೋಮಾಂಚನ. ಪ್ರತಿನಿತ್ಯ ಒಂದಲ್ಲಾ ಒಂದು ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಅದನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ಹೇಗೆ ಸೆರೆ ಹಿಡಿಯುತ್ತಾರೆ, ಆ ಸಂದರ್ಭದಲ್ಲಿ ಅವರಿಗೆ ಆಗುವ ಅನುಭವ ಹೇಗಿರುತ್ತದೆ, ಹೀಗೆ ಹತ್ತು ಹಲವು ವಿಶೇಷತೆಗಳನ್ನು ಛಾಯಾಗ್ರಾಹಕರಿಂದಲೇ ಕೇಳಿ ತಿಳಿದುಕೊಳ್ಳಬೇಕು. ಈ ಬಗ್ಗೆ ಕಳೆದ ಹಲವು ವರ್ಷಗಳಿಂದ ಪತ್ರಿಕಾರಂಗದಲ್ಲಿ ಕಾರ್ಯ ನಿರ್ವಹಿಸಿದ ಹಿರಿಯ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ತಮ್ಮ ಅನುಭವಗಳನ್ನು ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ.

ಡಾ. ರಾಜ್​​​ಕುಮಾರ್, ಡಾ. ವಿಷ್ಣುವರ್ಧನ್ (ವಿಶ್ವನಾಥ್ ಸುವರ್ಣ ಕ್ಲಿಕ್ಕಿಸಿದ ಫೋಟೋ)
ಡಾ. ರಾಜ್​ಕುಮಾರ್​ (ವಿಶ್ವನಾಥ್ ಸುವರ್ಣ ಕ್ಲಿಕ್ಕಿಸಿದ ಫೋಟೋ)

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಕೋಟೆಗಳ ಫೋಟೋಗಳನ್ನು ನಾನು ತೆಗೆದಿದ್ದೇನೆ. ಕೆಲವೊಂದು ವಿಶೇಷ ಕಾರ್ಯಕ್ರಮಗಳನ್ನು ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದೇನೆ. ಕೆಲವೊಮ್ಮೆ ಫೋಟೋ ತೆಗೆಯುವಾಗ ನನ್ನ ಪ್ರಾಣಕ್ಕೆ ಆಪತ್ತು ಉಂಟಾದ ಸಂದರ್ಭ ಕೂಡಾ ಬಂದಿದೆ. ಆದರೂ ನಾನು ಫೋಟೋ ಕ್ಲಿಕ್ಕಿಸುವುದನ್ನು ಮಾತ್ರ ಬಿಟ್ಟಿಲ್ಲ. ಡಾ. ರಾಜ್​​​ಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಅವರನ್ನು ಒಟ್ಟಿಗೆ ನಿಲ್ಲಿಸಿ ಫೋಟೋ ತೆಗೆದಿದ್ದು ಕೂಡಾ ನಾನೇ. ಪರಶುರಾಮ ಸಿನಿಮಾ ಸೆಟ್​​ನಲ್ಲಿ ಡಾ. ರಾಜ್​ಕುಮಾರ್ ಬಳಿ ಮಾಡೆಲಿಂಗ್ ಮಾಡಿಸಿ ನಾನು ಫೋಟೋ ತೆಗೆದಿದ್ದೇನೆ ಎನ್ನುತ್ತಾರೆ ವಿಶ್ವನಾಥ್ ಸುವರ್ಣ.

ಪುನೀತ್ ರಾಜ್​ಕುಮಾರ್ ಜೊತೆ ವಿಶ್ವನಾಥ್ ಸುವರ್ಣ

ABOUT THE AUTHOR

...view details