ನಾಯಕಿಯರಿಗೆ ಪ್ರತಿಭೆ ಬಹಳ ಮುಖ್ಯ ಎತ್ತರ ಅಲ್ಲ, ಎಂದು ಹಿರಿಯ ನಿರ್ದೇಶಕ ಭಾರ್ಗವ ಅಭಿಪ್ರಾಯಪಟ್ಟಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಸೂರಜ್ ನಟನೆಯ 'ನಾನೇ ರಾಜ' ಸಿನಿಮಾ ಸುದ್ದಿಗೋಷ್ಠಿಯಲ್ಲಿ ಭಾರ್ಗವ ಈ ಮಾತುಗಳನ್ನಾಡಿದರು.
ಪ್ರತಿಭೆ ಮುಖ್ಯ, ನಾಯಕಿಯರ ಎತ್ತರವಲ್ಲ: ಹಿರಿಯ ನಿರ್ದೇಶಕ ಭಾರ್ಗವ ಅಭಿಮತ - ನಿರ್ದೇಶಕ ಭಾರ್ಗವ
ಚಿತ್ರದಲ್ಲಿ ನಟಿಸುವ ನಾಯಕಿಯರ ಎತ್ತರ ಗಣನೆಗೆ ಬರುವುದಿಲ್ಲ. ಹಿಂದಿನ ಕಾಲದ ಸಿನಿಮಾಗಳಲ್ಲಿ ರಾಜ್ಕುಮಾರ್-ಭಾರತಿ, ಅಮಿತಾಬ್ ಬಚ್ಚನ್-ಜಯಭಾದುರಿ ಜೋಡಿಯಾಗಿ ನಟಿಸಿದ್ದರು. ಅವರ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಆದ್ದರಿಂದ ಪ್ರತಿಭೆ ಬಹಳ ಮುಖ್ಯ ಎಂದು ಹಿರಿಯ ನಿರ್ದೇಶಕ ಭಾರ್ಗವ ಹೇಳಿದ್ದಾರೆ.
ಗಣೇಶ್ ಸಹೋದರ ಸೂರಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ನಾನೇ ರಾಜ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ನಿನ್ನೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಿರಿಯ ನಿರ್ದೇಶಕ ಭಾರ್ಗವ ಅವರನ್ನು ಆಹ್ವಾನಿಸಲಾಗಿತ್ತು. 'ನಾಯಕ ಹೈಟ್ ಇದ್ದು ಅವರ ಎತ್ತರಕ್ಕೆ ತಕ್ಕ ನಾಯಕಿಯ ಆಯ್ಕೆ ಮಾಡುವಲ್ಲಿ ತಡವಾಯಿತು ಎಂದು ನಿರ್ದೇಶಕ ಶ್ರೀನಿವಾಸ್ ಅವರ ಮಾತಿಗೆ ಪ್ರತಿಕ್ರಿಯಿಸಿದ ನಿರ್ದೇಶಕ ಭಾರ್ಗವ, ಚಿತ್ರರಂಗದಲ್ಲಿ ನಾಯಕಿಯರ ಹೈಟ್ ವಿಷಯವೇ ಅಲ್ಲ, ಪ್ರತಿಭೆ ಇದ್ದರೆ ಎಲ್ಲಾ ಸರಿಹೋಗುತ್ತದೆ. ಹಿಂದಿನ ಸಿನಿಮಾಗಳಲ್ಲಿ ಡಾ. ರಾಜ್ಕುಮಾರ್ ಅವರಿಗೆ ಮಂಜುಳಾ ನಾಯಕಿಯರಾಗಿದ್ದರು. ಅಮಿತಾಬ್ ಬಚ್ಚನ್ಗೆ ಜಯಬಾಧುರಿ ನಾಯಕಿಯಾಗಿದ್ದರು. ಇದೇ ಉದಾಹರಣೆಗೆ ಸಾಕು, ಆದ್ದರಿಂದ ನಾಯಕಿಯ ಹೈಟ್ ಮುಖ್ಯವೇ ಅಲ್ಲ ಎಂದು ತಮ್ಮ ಶಿಷ್ಯ ನಿರ್ದೇಶಕ ಶ್ರೀನಿವಾಸ್ಗೆ ಕಿವಿಮಾತು ಹೇಳಿದರು. ಚಿತ್ರದಲ್ಲಿ ಸೂರಜ್ಗೆ ಸೋನಿಕ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ.