ಕೋಲ್ಕತ್ತಾ: ಹೃದಯಾಘಾತದಿಂದಾಗಿ ಬಂಗಾಳಿ ಚಿತ್ರರಂಗದ ಹಿರಿಯ ನಟ ಮನು ಮುಖರ್ಜಿ (90) ಇಂದು ನಿಧನರಾಗಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
1958ರಲ್ಲಿ ಬಿಡುಗಡೆಯಾದ ಮೃಣಾಲ್ ಸೇನ್ ನಿರ್ದೇಶನದ 'ನೀಲ್ ಆಕಾಶರ್ ನೀಚೆ' ಎಂಬ ಸಿನಿಮಾ ಮೂಲಕ ಮನು ಮುಖರ್ಜಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಬಳಿಕ ಸತ್ಯಜಿತ್ ರೇ ಅವರ 'ಜಾಯ್ ಬಾಬಾ ಫೆಲುನಾಥ್' ಮತ್ತು 'ಗಣಶತ್ರು' ಚಿತ್ರಗಳಲ್ಲಿ ತಮ್ಮ ಪಾತ್ರಕ್ಕೆ ಬಗ್ಗೆ ಮೆಚ್ಚುಗೆ ಪಡೆದರು. 'ಪಟಲ್‌ಘರ್' ಎಂಬ ಮಕ್ಕಳ ಚಿತ್ರದಲ್ಲಿನ ನಟನೆಗಾಗಿಯೂ ವಿಮರ್ಶಕರಿಂದ ಮೆಚ್ಚುಗೆ ಗಳಿಸಿದರು.
ಓದಿ:ಜೀ ರಿಷ್ತೆ ಅವಾರ್ಡ್ಸ್ 2020: ಸುಶಾಂತ್ನನ್ನು ನೆನಪಿಸಿಕೊಂಡ ನಟಿ ಅಂಕಿತಾ ಲೋಖಂಡೆ
ಮನು ಮುಖರ್ಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ನಟ ಮನು ಮುಖರ್ಜಿ ಅವರ ನಿಧನದಿಂದ ನೋವಾಗಿದೆ. ಟೆಲಿ-ಸಮ್ಮನ್ ಅವಾರ್ಡ್ಸ್- 2015 ರಲ್ಲಿ ನಾವು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದೇವೆ. ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ಸಾಂತ್ವನ ತಿಳಿಸುತ್ತೇನೆ " ಎಂದು ಟ್ವೀಟ್ ಮಾಡಿದ್ದಾರೆ.
ಬಂಗಾಳಿ ನಟರು, ನಿರ್ದೇಶಕರು ಮುಖರ್ಜಿ ಅವರೊಂದಿಗಿನ ತಮ್ಮ ಒಡನಾಟವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.