ಕರ್ನಾಟಕ

karnataka

ETV Bharat / sitara

ಬಾಲ್ಯದಲ್ಲಿ ನಟಿ ಜಯಂತಿ ಶಿವರಾತ್ರಿ ದಿನವೇ ಕಳೆದ್ಹೋಗಿದ್ರಂತೆ...! - veteran actress jayanti vist shiva temple

ಇದೆಲ್ಲ ನಡೆದಿದ್ದು ಶಿವರಾತ್ರಿ ದಿನ. ಆವತ್ತಿನಿಂದ ಈಶ್ವರ - ಪಾರ್ವತಿ ನನಗೆ ಅಪ್ಪ - ಅಮ್ಮನ ತರ. ಆವತ್ತಿನಿಂದ ಈಶ್ವರ ನನ್ನನ್ನ ಕಾಪಾಡಿಕೊಂಡು ಬಂದಿದ್ದಾನೆ' ಎಂದು ಹಿರಿಯ ನಟಿ ನೆನಪು ಮಾಡಿಕೊಂಡಿದ್ದಾರೆ.

veteran actress jayanti vist shiva temple
ಹಿರಿಯ ನಟಿ ಜಯಂತಿ ಶಿವರಾತ್ರಿ ದಿನ ಕಳೆದು ಹೋಗಿದ್ರಂತೆ!

By

Published : Feb 21, 2020, 6:25 PM IST

ಇಂದು ಶಿವರಾತ್ರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇವಾಲಯಕ್ಕೆ ಅಭಿನಯ ಶಾರದೆ ನಟಿ ಜಯಂತಿ ಭೇಟಿ ಕೊಟ್ಟರು. ಶಿವನ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಇದೇ ವೇಳೆ, ತಮ್ಮ ಬಾಲ್ಯದಲ್ಲಿ ಶಿವರಾತ್ರಿ ದಿನವೇ ನಡೆದಿದ್ದ ಪ್ರಸಂಗವೊಂದನ್ನ ಈಟಿವಿ ಭಾರತ್ ಜೊತೆ ಹಂಚಿಕೊಂಡರು.

ಹಿರಿಯ ನಟಿ ಜಯಂತಿ ಶಿವರಾತ್ರಿ ದಿನ ಕಳೆದು ಹೋಗಿದ್ರಂತೆ!

'ನಾನು ಮಗುವಿದ್ದಾಗ ಶಿವರಾತ್ರಿ ಹಬ್ಬದಂದೇ ಕಳೆದ್ಹೋಗಿದ್ದೆ. ಪೊಲೀಸರ ಜೊತೆ ಮನೆಯವರು ಸೇರಿ ಹುಡುಕಿದ್ದರು. ಅದ್ಯಾರೋ ಮಕ್ಕಳಿಲ್ಲದ ಹೆಂಗಸು ನನ್ನನ್ನು ಕರೆದುಕೊಂಡು ಹೋಗಿದ್ದು ತಿಳಿದು ನನ್ನನ್ನು ಮತ್ತೆ ಪೊಲೀಸರು ವಾಪಸ್‌ ಕರೆದುಕೊಂಡು ಬಂದಿದ್ರು. ಇದೆಲ್ಲ ನಡೆದಿದ್ದು ಶಿವರಾತ್ರಿ ದಿನ. ಆವತ್ತಿನಿಂದ ಈಶ್ವರ-ಪಾರ್ವತಿ ನನಗೆ ಅಪ್ಪ-ಅಮ್ಮನ ತರಹ. ಆವತ್ತಿನಿಂದ ಈಶ್ವರ ನನ್ನನ್ನ ಕಾಪಾಡಿಕೊಂಡು ಬಂದಿದ್ದಾನೆ' ಎಂದು ಹಿರಿಯ ನಟಿ ನೆನಪು ಮಾಡಿಕೊಂಡಿದ್ದಾರೆ.

ಅಲ್ಲದೇ ದೇವಾಲಯದ ಅರ್ಚಕರ ಮನೆಯಲ್ಲಿ ಅರಶಿನ - ಕುಂಕುಮ ಪಡೆದ ನಟಿ ಜಯಂತಿ ಮೂಲ ರುದ್ರಾಕ್ಷಿಯನ್ನು ತರಿಸಿಕೊಡುವಂತೆ ಕೇಳಿಕೊಂಡರು.

ABOUT THE AUTHOR

...view details