ಕರ್ನಾಟಕ

karnataka

ETV Bharat / sitara

ಕೊರೊನಾ ಮಹಾಮಾರಿಗೆ 'ಸಿಂಗಮ್'​ ಖ್ಯಾತಿಯ ನಟ ಕಿಶೋರ್​ ನಂದ್ಲಾಸ್ಕರ್ ನಿಧನ! - ಮಹಾರಾಷ್ಟ್ರ ಕೊರೊನಾ

ಡೆಡ್ಲಿ ವೈರಸ್​ ಕೊರೊನಾ ಸೋಂಕಿಗೆ ಇದೀಗ ಪ್ರತಿಭಾವಂತ ಹಿರಿಯ ನಟರೊಬ್ಬರು ಬಲಿಯಾಗಿದ್ದು, ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಕಿಶೋರ್​ ನಂದ್ಲಾಸ್ಕರ್​ ಸಾವನ್ನಪ್ಪಿದ್ದಾರೆ.

Kishore Nandlaskar
Kishore Nandlaskar

By

Published : Apr 21, 2021, 4:53 PM IST

ಮುಂಬೈ:ಮಹಾಮಾರಿ ಕೊರೊನಾ ವೈರಸ್​ಗೆ ಇದೀಗ ಮತ್ತೋರ್ವ ನಟ ಬಲಿಯಾಗಿದ್ದು, ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ನಟನೆ ಮಾಡಿದ್ದ ಹಿರಿಯ ನಟ ಕಿಶೋರ್​ ನಂದ್ಲಾಸ್ಕರ್​​ ಕೊನೆಯುಸಿರೆಳೆದಿದ್ದಾರೆ.

ಕೋವಿಡ್​ ವೈರಸ್​ಗೊಳಗಾಗಿ ಕಳೆದ ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 81 ವರ್ಷದ ನಟ ನಿನ್ನೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅವರು ಬಾಲಿವುಡ್ ನಟ ಗೋವಿಂದ್​ ಅವರೊಂದಿಗೆ 'ಜಿಸ್​ ದೇಸ್​ ಮೈ ಗಂಗಾ ರೆಹ್ತಾ ಹೈನಾ', ಸಂಜಯ್​ ದತ್ ಅವರೊಂದಿಗೆ​ 'ವಾಸ್ತವ್'​, ಅಜಯ್​ ದೇವಗನ್​ ಅವರೊಂದಿಗೆ 'ಸಿಂಗಮ್'​ ಹಾಗೂ ರಣವೀರ್​ ಸಿಂಗ್​ ಅವರ 'ಸಿಂಬಾ' ಚಿತ್ರದಲ್ಲಿ ನಟನೆ ಮಾಡಿದ್ದಾರೆ. 1982ರಲ್ಲಿ ಮರಾಠಿ ಚಿತ್ರದಲ್ಲಿ ನಟನೆ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಇವರ ನಿಧನಕ್ಕೆ ಬಾಲಿವುಡ್ ನಟ ಗೋವಿಂದ್​ ಸೇರಿದಂತೆ ಅನೇಕರು ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಮಹಾಮಾರಿ ಆರ್ಭಟ ಜೋರಾಗಿದ್ದು, ನಿತ್ಯ ನೂರಾರು ಜನರು ಸೋಂಕಿಗೊಳಗಾಗಿ ಸಾವನ್ನಪ್ಪುತ್ತಿದ್ದಾರೆ.

ABOUT THE AUTHOR

...view details