ಕರ್ನಾಟಕ

karnataka

ETV Bharat / sitara

ವದಂತಿಗಳಿಗೆ ಕಿವಿ ಕೊಡ್ಬೇಡಿ, ರಾಯರ ಕೃಪೆಯಿಂದ ಚೆನ್ನಾಗಿದ್ದೇನೆ: ದ್ವಾರಕೀಶ್ ಮನವಿ - undefined

ತಮ್ಮ ಬಗ್ಗೆ ಹಬ್ಬಿದ್ದ ಸುಳ್ಳುಸುದ್ದಿ ಬಗ್ಗೆ ಹಿರಿಯ ನಟ ದ್ವಾರಕೀಶ್ ಪ್ರತಿಕ್ರಿಯಿಸಿದ್ದಾರೆ. ನಾನು ಆರೋಗ್ಯವಾಗಿದ್ದೇನೆ, ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ ಎಂದು ದ್ವಾರಕೀಶ್ ಎಲ್ಲರ ಬಳಿ ಮನವಿ ಮಾಡಿದ್ದಾರೆ.

ದ್ವಾರಕೀಶ್

By

Published : Jul 16, 2019, 1:49 PM IST

ಇಂದು ಬೆಳ್ಳಂಬೆಳಗ್ಗೆ ರಾಜ್ಯದ ಜನರಿಗೆ ಒಂದು ಕೆಟ್ಟಸುದ್ದಿ ಶಾಕ್ ನೀಡಿತ್ತು. 'ಕರ್ನಾಟಕದ ಕುಳ್ಳ' ಎಂದೇ ಹೆಸರಾದ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ ಎಂದು ಕೇಳಿದ ಜನರು ಸ್ವಲ್ಪ ಸಮಯ ಬೇಸರದಲ್ಲಿದ್ದರು. ಆದರೆ ಅದು ಸುಳ್ಳುವದಂತಿ ಎಂದು ತಿಳಿದ ಮೇಲೆ ಎಲ್ಲರೂ ನಿಟ್ಟುಸಿರು ಬಿಟ್ಟರು.

ವದಂತಿಗಳಿಗೆ ಕಿವಿಕೊಡದಿರುವಂತೆ ಮನವಿ ಮಾಡಿದ ದ್ವಾರಕೀಶ್

ಕಳೆದ ರಾತ್ರಿಯಿಂದ ವಾಟ್ಸ್​ಆ್ಯಪ್​​ನಲ್ಲಿ ಈ ರೀತಿ ಸುಳ್ಳು ಮೆಸೇಜ್​​ಗಳು ಹರಿದಾಡುತ್ತಿದ್ದವು. ದ್ವಾರಕೀಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಕೆಲವು ಸುದ್ದಿಗಳು ಬಂದರೆ, ಕೆಲವು ಕಡೆ RIP ದ್ವಾರಕೀಶ್ ಎಂಬ ಮೆಸೇಜ್​​​​​​​​ಗಳು ಬಂದವು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಸ್ವತ: ದ್ವಾರಕೀಶ್ ಅವರೇ ಇತಿಶ್ರೀ ಹಾಡಿದ್ದಾರೆ. ದ್ವಾರಕೀಶ್ ಆರೋಗ್ಯವಾಗಿದ್ದಾರೆ, ಎಂದಿನಂತೆ ಮನೆಯಲ್ಲಿ ಇಂದು ದೇವರ ಪೂಜೆ ಮಾಡಿದ್ದಾರೆ.

ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜಕ್ಕೂ ಸುಳ್ಳು ಎಂಬುದನ್ನು ಅಭಿಮಾನಿಗಳಿಗೆ ತಿಳಿಸಲು ಸ್ವತ: ದ್ವಾರಕೀಶ್ ವಿಡಿಯೋವೊಂದನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದಾರೆ. 'ನಾನು ನಿಮ್ಮ ಕರ್ನಾಟಕದ ಕುಳ್ಳ ದ್ವಾರಕೀಶ್, ಹುಷಾರಾಗಿದ್ದೀನಿ. ನಿನ್ನೆಯಿಂದ ನನ್ನ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಕಿವಿ ಕೊಡಬೇಡಿ. ನಾನು ಆರೋಗ್ಯವಾಗಿದ್ದೀನಿ, ಆರೋಗ್ಯವಾಗಿರ್ತೀನಿ ನಿಮ್ಮೆಲ್ಲರ ಆಶೀರ್ವಾದ, ರಾಯರ ಕೃಪೆಯಿಂದ ನಾನು ಹುಷಾರಾಗಿದ್ದೀನಿ. ಆ ರೀತಿ ಏನೇ ಆದರೂ ಅದು ನಿಮಗೆ ಗೊತ್ತಾಗುತ್ತೆ. ಸುಳ್ಳು ಸುದ್ದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ' ಎಂದು ಸಂದೇಶ ರವಾನಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details