ಕರ್ನಾಟಕ

karnataka

ETV Bharat / sitara

ಹಿರಿಯ ನಟ ದೊಡ್ಡಣ್ಣನಿಗೂ ಶುರುವಾಯ್ತ ಕೊರೊನಾ ಭಯ - Sandalwood actor Doddanna

ಹಿರಿಯ ನಟಿ, ಸಂಸದೆ ಸುಮಲತಾ ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಹಿರಿಯ ನಟ ದೊಡ್ಡಣ್ಣ ಅವರಿಗೂ ಕೊರೊನಾ ಭಯ ಕಾಡತೊಡಗಿದ್ದು ಈಗ ಅವರು ಸ್ವಯಂಪ್ರೇರಿತರಾಗಿ ಹೋಂ ಕ್ವಾರಂಟೈನ್​​​​ನಲ್ಲಿ ಇದ್ದಾರೆ ಎನ್ನಲಾಗಿದೆ.

Veteran actor Doddanna in home quatrain
ಹಿರಿಯ ನಟ ದೊಡ್ಡಣ್ಣ

By

Published : Jul 8, 2020, 11:01 AM IST

ಈ ಕೊರೊನಾ ವೈರಸ್ ಯಾವ ಸಮಯದಲ್ಲಿ ಯಾರನ್ನು ಒಕ್ಕರಿಸಿಕೊಳ್ಳುವುದೋ ಎಂಬ ಆತಂಕ ಆರಂಭವಾಗಿದೆ. ಇದೀಗ ಸ್ಯಾಂಡಲ್​ವುಡ್​ ಹಿರಿಯ ನಟ ದೊಡ್ಡಣ್ಣ ಅವರಿಗೆ ಕೂಡಾ ಕೊರೊನಾ ಆತಂಕ ಕಾಡತೊಡಗಿದೆ.

ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ಅವರು ತಮಗೆ ಕೊರೊನಾ ಸೋಂಕು ತಗುಲಿದೆ ಎಂದು ತಮ್ಮ ಫೇಸ್​​ಬುಕ್​ನಲ್ಲಿ ಹೇಳಿಕೊಂಡಿದ್ದರು. ಅಂದಿನಿಂದ ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಭಯ ಶುರುವಾಗಿದೆ. ಮುನ್ನೆಚ್ಚರಿಕೆಯಾಗಿ ನಿರ್ಮಾಪಕ ರಾಕ್​ಲೈನ್​​​ ವೆಂಕಟೇಶ್ ದಂಪತಿ ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗ ದೊಡ್ಡಣ್ಣ ಅವರಿಗೂ ಕೊರೊನ ಆತಂಕ ಶುರುವಾಗಿದ್ದು, ಸ್ವಯಂ ಪ್ರೇರಿತವಾಗಿ ಹೋಂ ಕ್ವಾರಂಟೈನ್​​ನಲ್ಲಿದ್ದಾರೆ.

ಹಿರಿಯ ನಟ ದೊಡ್ಡಣ್ಣ

ಕಳೆದ ಗುರುವಾರ ದೊಡ್ಡಣ್ಣ ಸುಮಲತಾ ಅವರೊಂದಿಗೆ ವಿಧಾನಸೌಧಕ್ಕೆ ತೆರಳಿದ್ದರು. ಅಲ್ಲದೆ ಕೆಲವೊಂದು ಕಾರ್ಯಕ್ರಮಗಳಲ್ಲೂ ಸುಮಲತಾ ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿ ದೊಡ್ಡಣ್ಣ ಇದ್ದ ಕಾರಣ ಈಗ ಅವರಿಗೆ ಭಯ ಶುರುವಾಗಿದೆ. ಆದ್ದರಿಂದ ದೊಡ್ಡಣ್ಣ ಮುನ್ನೆಚರಿಕೆ ಕ್ರಮವಾಗಿ ಹೋಂ ಕ್ವಾರಂಟೈನ್​​ನಲ್ಲಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಮೊನ್ನೆಯಷ್ಟೇ ಸ್ಯಾಂಡಲ್​ವುಡ್​​​ ನಟ ಶ್ರೀನಗರ ಕಿಟ್ಟಿ ಅವರ ಸಹೋದರ ಹೃದಯಾಘಾತದಿಂದ ನಿಧನರಾಗಿದ್ದು ನಿಧನದ ನಂತರ ಮಾಡಲಾದ ಟೆಸ್ಟ್​​​ನಲ್ಲಿ ಅವರಿಗೆ ಪಾಸಿಟಿವ್ ದೃಢವಾಗಿತ್ತು. ಒಟ್ಟಿನಲ್ಲಿ ಕೊರೊನಾ ಎಲ್ಲಾ ಕಡೆ ಹಬ್ಬುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ABOUT THE AUTHOR

...view details