ಕರ್ನಾಟಕ

karnataka

ETV Bharat / sitara

ಮಗನನ್ನು ಕರ್ನಾಟಕದ ಜನರೇ ಬೆಳೆಸಬೇಕು: ಹಿರಿಯ ನಟ ಡಿಂಗ್ರಿ ನಾಗರಾಜ್​​​ - undefined

ಪುತ್ರ ರಾಜವರ್ಧನ್ ಚಿತ್ರರಂಕ್ಕೆ ಬಂದಿರುವ ಬಗ್ಗೆ ಡಿಂಗ್ರಿ ನಾಗರಾಜ್ ಹರ್ಷ ವ್ಯಕ್ತಪಡಿಸಿದ್ದಾರೆ. ತಮ್ಮ ಮಗನನ್ನು ಕರ್ನಾಟಕದ ಜನರು ಚಿತ್ರರಂಗದಲ್ಲಿ ಬೆಳೆಸಿ ಆಶೀರ್ವದಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್​

By

Published : Mar 20, 2019, 3:57 PM IST

ಹಿರಿಯ ನಟ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ನಟನೆಗೆ ಮನಸೋಲದವರಿಲ್ಲ. ಪರಸಂಗದ ಗೆಂಡೆತಿಮ್ಮ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬಹುತೇಕ ಎಲ್ಲಾ ನಟರೊಂದಿಗೂ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಡಿಂಗ್ರಿ ನಾಗರಾಜ್ ಅವರು ಹೆಚ್ಚು ಕಾಣಿಸ್ತಿಲ್ಲ. ಈ ವಿಚಾರವಾಗಿ ಡಿಂಗ್ರಿ ಅವರನ್ನು ಕೇಳಿದ್ರೆ, ಅವರು ಸ್ವಲ್ಪ ಬೆಸರದಿಂದಲೇ ಉತ್ತರಿಸಿದ್ದಾರೆ. 'ಬೆಂಗಳೂರು ಟು ಮಂಗಳೂರು' ಚಿತ್ರದಲ್ಲಿ ಒಂದು ಪಾತ್ರ ಮಾಡುತ್ತಿರುವ ಡಿಂಗ್ರಿ ಅವರನ್ನು ಮಾತಿಗೆ ಎಳೆದಾಗ ಸದ್ಯ ಕನ್ನಡ ಚಿತ್ರರಂಗ ತುಂಬಾ ಬೆಳೆದಿದೆ. ಹೊಸ ನೀರು ಬಂದು ಹಳೇ ನೀರನ್ನು ತಳ್ಳುವ ಹಾಗೆ ಚಿತ್ರರಂಗಕ್ಕೆ ಹೊಸ ಹೊಸ ಕಲಾವಿದರ ದಂಡು ಬಂದಿದೆ. ಹಾಗಾಗಿ ನಮ್ಮಂತ ಕಲಾವಿದರಿಗೆ ಸದ್ಯ ಅವಕಾಶಗಳು ಕಡಿಮೆಯಾಗಿವೆ. ಆದರೂ ನನಗೆ ನಾಟಕ ಕಂಪನಿಗಳಿವೆ. ಅಲ್ಲಿ ನಾನು ಬಣ್ಣ ಹಚ್ಚಿ ಜನರನ್ನು ರಂಜಿಸುವ ಕೆಲಸ ಮಾಡ್ತಿನಿ ಎಂದು ಖುಷಿಯಿಂದಲೇ ಹೇಳಿದ್ರು.

ಡಿಂಗ್ರಿ ನಾಗರಾಜ್

ಇನ್ನು ತಮ್ಮ ಪುತ್ರ ರಾಜವರ್ಧನ್ ಚಿತ್ರರಂಕ್ಕೆ ಬಂದಿರುವ ಬಗ್ಗೆ ಡಿಂಗ್ರಿ ನಾಗರಾಜ್ ಹರ್ಷ ವ್ಯಕ್ತಪಡಿಸಿದ್ದಾರೆ. ನನ್ನ ಮಗ ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕ. ಅವನು ಚಿಕ್ಕಂದಿನಿಂದ ಅವರ ಅಜ್ಜಿ ಮನೆಯಲ್ಲೇ ಬೆಳೆದ. ಕಾಲೇಜು ಸೇರಿದ ನಂತ್ರ ನಮ್ಮ ಮನೆಗೆ ಬಂದ. ಸ್ನೇಹಿತರು ಅವನಿಗೆ ಬಲವಂತ ಮಾಡಿದ್ದರಿಂದ ಸಿನಿಮಾದಲ್ಲಿ ನಟಿಸಲು ಒಪ್ಪಬೇಕಾಯಿತು ಎಂದರು. ಮಗ ಸಿನಿಮಾದಲ್ಲಿ ‌ನಟಿಸಲು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡೇ ಇಲ್ಲಿಗೆ ಬಂದಿದ್ದಾನೆ. ಕುದುರೆ ಸವಾರಿ, ಮಾರ್ಷಲ್​ ಆರ್ಟ್ಸ್, ಡ್ಯಾನ್ಸ್ ಎಲ್ಲಾ ಕಲಿತಿದ್ದಾನೆ ಎಂದರು.

ಈಗ ಚಿತ್ರದುರ್ಗದ ಕೋಟೆಯ ಚಿಚ್ಚುಗತ್ತಿ ಬರ್ಮಣ್ಣನ‌ ಪಾತ್ರದಲ್ಲಿ ಹರ್ಷವರ್ಧನ್ ಕಾಣಿಸಿಕೊಂಡಿದ್ದಾನೆ. ಇದು ಬಹಳ ಖುಷಿಯ ಸಂಗತಿ. ನನ್ನ ಮಗನಿಗೆ ರಾಜ್​​​​​​​​​​​​​​​​​​ಕುಮಾರ್ ಅವರ ಅರ್ಧ ಹೆಸರು ಹಾಗೂ ವಿಷ್ಣುವರ್ಧನ್ ಅವರ ಅರ್ಧ ಹೆಸರು ಸೇರಿಸಿ ರಾಜವರ್ಧನ್ ಎಂಬ ಹೆಸರಿಟ್ಟಿದ್ದೇನೆ. ಅದರೆ ಅವನ ನಿಜ ಹೆಸರು ರಾಜೇಂದ್ರ. ಸ್ಟಾರ್ ನಟರ ಮಕ್ಕಳನ್ನು ಬೆಳೆಸಲು ಅವರ ಅಪ್ಪಂದಿರು ಇರ್ತಾರೆ. ಆದರೆ ನನ್ನ ಮಗನನ್ನು ಜನರೇ ಬೆಳೆಸಬೇಕು ಎಂದು ಡಿಂಗ್ರಿ ಮನವಿ ಮಾಡಿದರು.

For All Latest Updates

TAGGED:

ABOUT THE AUTHOR

...view details