ದಿನೇಶ್ ಬಾಬು ನಿರ್ದೇಶನದ 'ಚಿಟ್ಟೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಅನಿರುಧ್, ನಂತರ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಆದರೆ ಅವರಿಗೆ ಬ್ರೇಕ್ ನೀಡಿದ್ದು ಮಾತ್ರ ಕಿರುತೆರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿ ಅನಿರುಧ್ ಜತ್ಕರ್ ಅವರನ್ನು ಕಿರುತೆರೆ ಸ್ಟಾರ್ ಆಗಿ ಮಾಡಿದೆ.
ಅನಿರುಧ್ ಬರ್ತಡೇ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ ಹಿರಿಯ ನಟಿ ಭಾರತಿ - Bharati Vishnuvardhan danced in Anirudh Birthday party
ಅನಿರುಧ್ಗೆ 'ಜೊತೆ ಜೊತೆಯಲಿ' ಧಾರಾವಾಹಿ ಹೆಸರು ತಂದುಕೊಟ್ಟ ನಂತರ ಇದು ಸಂಭ್ರಮದಿಂದ ಆಚರಿಸಿದ ಮೊದಲ ಹುಟ್ಟುಹಬ್ಬ. ಈ ಖುಷಿಗೆ ಅನಿರುಧ್ ಕಿರುತೆರೆ ಹಾಗೂ ಬೆಳ್ಳಿತೆರೆಯ ಆತ್ಮೀಯರಿಗೆ ಪಾರ್ಟಿ ಏರ್ಪಡಿಸಿದ್ದರು. ನಟಿ ಹರ್ಷಿಕಾ ಪೂಣಚ್ಚ ಕೂಡಾ ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪಾರ್ಟಿಗೆ ಬಂದಿದ್ದ ಗೆಸ್ಟ್ಗಳೊಂದಿಗೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕೂಡಾ ಹೆಜ್ಜೆ ಹಾಕಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.
![ಅನಿರುಧ್ ಬರ್ತಡೇ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ ಹಿರಿಯ ನಟಿ ಭಾರತಿ Anirudh birthday party](https://etvbharatimages.akamaized.net/etvbharat/prod-images/768-512-6103534-thumbnail-3x2-bharati.jpg)
ನಿನ್ನೆಯಷ್ಟೇ ನಟ ಅನಿರುಧ್ ತಮ್ಮ 45 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅನಿರುಧ್ ಹುಟ್ಟುಹಬ್ಬಕ್ಕೆ ಸ್ಯಾಂಡಲ್ವುಡ್ ಹಾಗೂ ಕಿರುತೆರೆ ಗಣ್ಯರು ಶುಭ ಕೋರಿದ್ದರು. ಅನಿರುಧ್ಗೆ 'ಜೊತೆ ಜೊತೆಯಲಿ' ಧಾರಾವಾಹಿ ಹೆಸರು ತಂದುಕೊಟ್ಟ ನಂತರ ಇದು ಸಂಭ್ರಮದಿಂದ ಆಚರಿಸಿದ ಮೊದಲ ಹುಟ್ಟುಹಬ್ಬ. ಈ ಖುಷಿಗೆ ಅನಿರುಧ್ ಕಿರುತೆರೆ ಹಾಗೂ ಬೆಳ್ಳಿತೆರೆಯ ಆತ್ಮೀಯರಿಗೆ ಪಾರ್ಟಿ ಏರ್ಪಡಿಸಿದ್ದರು. ನಟಿ ಹರ್ಷಿಕಾ ಪೂಣಚ್ಚ ಕೂಡಾ ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪಾರ್ಟಿಗೆ ಬಂದಿದ್ದ ಗೆಸ್ಟ್ಗಳೊಂದಿಗೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕೂಡಾ ಹೆಜ್ಜೆ ಹಾಕಿ ಸಂಭ್ರಮಿಸಿದ್ದು ವಿಶೇಷವಾಗಿತ್ತು. 'ಟೈಗರ್ ಜಿಂದಾ ಹೈ' ಚಿತ್ರದ 'ಸ್ವಗ್ ಸೇ ಕರೇಂಗೆ ಸಬ್ ಕಾ ಸ್ವಾಗತ್' ಹಾಡಿಗೆ ಹರ್ಷಿಕಾ ಪೂಣಚ್ಚ , ಭಾರತಿ ವಿಷ್ಣುವರ್ಧನ್ ಹಾಗೂ ಇನ್ನಿತರರು ಹೆಜ್ಜೆ ಹಾಕಿ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋವನ್ನು ಹರ್ಷಿಕಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.