ಕರ್ನಾಟಕ

karnataka

ETV Bharat / sitara

ಪೊಲೀಸ್ ಇಲಾಖೆಯ ಗೌರವ ಎತ್ತಿ ಹಿಡಿಯುತ್ತೆ ಕವಲುದಾರಿ ಸಿನಿಮಾ: ಹಿರಿಯ ನಟ ಅನಂತ್​​ನಾಗ್​​​ - undefined

ಪಿಆರ್​ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ 'ಕವಲುದಾರಿ' ಸಿನಿಮಾ ಇದೇ 12 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಖಂಡಿತ ಪೊಲೀಸ್ ಇಲಾಖೆ ಗೌರವವನ್ನು ಎತ್ತಿ ಹಿಡಿಯುತ್ತದೆ ಎಂದು ಹಿರಿಯ ನಟ ಅನಂತ್​​​ನಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಕವಲುದಾರಿ'

By

Published : Apr 8, 2019, 11:50 PM IST

ಸ್ಯಾಂಡಲ್​ವುಡ್​ನಲ್ಲಿ ಕಥೆ, ಟ್ರೇಲರ್ ಹಾಗೂ ಟೀಸರ್​​​ನಿಂದ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಸಿನಿಮಾ ಎಂದರೆ 'ಕವಲುದಾರಿ'. ಪುನೀತ್ ರಾಜ್​​ಕುಮಾರ್ ಅವರ ಪಿಆರ್​ಕೆ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣವಾಗಿದೆ.

'ಕವಲುದಾರಿ' ಚಿತ್ರತಂಡ

ಸಿನಿಮಾ ಇದೇ ಶುಕ್ರವಾರ ಅಂದರೆ ಏಪ್ರಿಲ್ 12 ರಂದು ಬಿಡುಗಡೆ ಆಗಲಿದ್ದು, ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪುನೀತ್ ರಾಜ್​​ಕುಮಾರ್​​, ಹಿರಿಯ ನಟ ಅನಂತ್​​ನಾಗ್, ರಿಷಿ, ರೋಷಿಣಿ ಪ್ರಕಾಶ್ ಹಾಗೂ ನಿರ್ದೇಶಕ ಹೇಮಂತ್ ರಾವ್ ಈ ಚಿತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದರು. ಅನಂತ್​​​​ನಾಗ್ ಈ ಚಿತ್ರದಲ್ಲಿ ನಿವೃತ್ತಿ ಹೊಂದಿದ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ರಿಷಿ ಟ್ರಾಫಿಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ಕವಲುದಾರಿ'

ಈ ಸಿನಿಮಾ ಪೊಲೀಸ್ ಇಲಾಖೆಯ ಗೌರವವನ್ನು ಹೆಚ್ಚಿಸುತ್ತೆ ಎಂದು ಹಿರಿಯ ನಟ ಅನಂತ್​​ನಾಗ್ ಅಭಿಪ್ರಾಯ ವ್ಯಕ್ತಪಡಿಸಿದರು. ಯುವ ನಟಿ ರೋಷಿಣಿ ಪ್ರಕಾಶ್ ಬಡ ಹುಡುಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಧೀರಜ್ ವಿತರಣಾ ಸಂಸ್ಥೆ ರಾಜ್ಯಾದ್ಯಂತ ಸೇರಿದಂತೆ 200 ಕ್ಕೂ ಹೆಚ್ಚು ಥಿಯೇಟರ್​​ಗಳಲ್ಲಿ ಸಿನಿಮಾ ರಿಲೀಸ್​ ಮಾಡಲು ಮುಂದಾಗಿದೆ. ಹಾಗೇ ವಿದೇಶಗಳಲ್ಲೂ ಕವಲುದಾರಿ ಚಿತ್ರ ತೆರೆ ಕಾಣುತ್ತಿದೆ. ಚರಣ್​​​​​​​​​​​ರಾಜ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಪುನೀತ್ ರಾಜ್​​ಕುಮಾರ್​

For All Latest Updates

TAGGED:

ABOUT THE AUTHOR

...view details