ಕರ್ನಾಟಕ

karnataka

ETV Bharat / sitara

ಆಹಾರ ಉತ್ಪನ್ನಗಳ ರಾಯಭಾರಿಯಾಗಿ ಹಿರಿಯ ನಟ ಅನಂತ್​ ನಾಗ್​​

ಹಿರಿಯ ನಟ ಅನಂತ್ ನಾಗ್ ಇಂದು ತಮ್ಮ 71 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಇಂದು ಸಂಜೆ ನಡೆಯುವ ಸಮಾರಂಭದಲ್ಲಿ 'ಒಗಾರ' ಸಂಸ್ಥೆಯ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ. ಈ ಉತ್ಪನ್ನಗಳಿಗೆ ಅನಂತ್​ ನಾಗ್ ರಾಯಭಾರಿಯಾಗಿಯೂ ಆಯ್ಕೆಯಾಗಿದ್ದಾರೆ.

ಅನಂತ್​ ನಾಗ್​​

By

Published : Sep 4, 2019, 3:23 PM IST

ರುಚಿಯಾದ ತಿಂಡಿತಿನಿಸುಗಳನ್ನು ತಯಾರಿಸುವ 'ಒಗಾರ' ಸಂಸ್ಥೆಗೆ ರಾಯಭಾರಿಯಾಗಿ ಹಿರಿಯ ನಟ ಅನಂತ್ ನಾಗ್​ ಆಯ್ಕೆಯಾಗಿದ್ದಾರೆ. ಈ ಆಹಾರ ಸಂಸ್ಥೆಯ ರಘುನಾಥ್ ಅವರ ಆಹ್ವಾನವನ್ನು ಮನ್ನಿಸಿ ಈ ಉತ್ಪನ್ನದ ರಾಯಭಾರಿಯಾಗಿದ್ದಾರೆ.

ಪತ್ನಿ ಗಾಯತ್ರಿ ಜೊತೆ ಅನಂತ್ ನಾಗ್

ಆಕ್ಸಿಡೆಂಟ್​, ಜಿಗರ್ ತಂಡ, ಹೆಬ್ಬುಲಿ ಚಿತ್ರಗಳ ನಿರ್ಮಾಪಕ ರಘುನಾಥ್ ಈ ಆಹಾರ ಉತ್ಪನ್ನಗಳ ಸಂಸ್ಥೆಯನ್ನು ಆರಂಭಿಸಿದ್ದಾರೆ. ಇಂದು ಅನಂತ್​ ನಾಗ್ ಅವರ ಹುಟ್ಟುಹಬ್ಬವಾಗಿದ್ದು ಇಂದು ಸಂಜೆ ನಡೆಯಲಿರುವ ಸಮಾರಂಭದಲ್ಲಿ 'ಒಗಾರ' ಸಂಸ್ಥೆಯ ಕೆಲವು ಹೊಸ ಉತ್ಪನ್ನಗಳಿಗೆ ಚಾಲನೆ ನೀಡಲಿದ್ದಾರೆ. ಎಸ್​ಆರ್​​​ವಿ ಸಭಾಂಗಣದಲ್ಲಿ ಇಂದು ಸಂಜೆ ನಡೆಯಲಿರುವ ಸಮಾರಂಭದಲ್ಲಿ ಪತ್ನಿ ಅನಂತ್ ನಾಗ್ ಹುಟ್ಟುಹಬ್ಬವನ್ನು ಕೂಡಾ ಸಂಸ್ಥೆ ಆಚರಿಸಲಿದೆ. ಇವರೊಂದಿಗೆ ಪತ್ನಿ ಗಾಯತ್ರಿ ಕೂಡಾ ಇರಲಿದ್ದಾರೆ. ಜೊತೆಗೆ 'ಒಗಾರ' ಮಾಲೀಕ ರಘುನಾಥ್ ಹಾಗೂ ಪತ್ನಿ ವಾಣಿ ಹಾಜರಿರಲಿದ್ದಾರೆ.

ಅನಂತ್​ ನಾಗ್​​

ಈ ಮುನ್ನ ಅನಂತ್ ನಾಗ್ ಎರಡು ಕಂಪನಿಗಳಿಗೆ ರಾಯಭಾರಿ ಆಗಿದ್ದರು. ಆದರೆ ಕೆಲವು ದಿನಗಳ ನಂತರ ಆ ಕೆಲಸದಿಂದ ಹಿಂದೆ ಸರಿದಿದ್ದರು. ಅನಂತ್ ನಾಗ್ ಸದ್ಯಕ್ಕೆ ದ್ವಾರಕೀಶ್ ಅವರ ‘ಆಯುಶ್ಮಾನ್ ಭವ’ ಶಿವರಾಜ್​​ ಕುಮಾರ್ ಜೊತೆ ’ಮೇಡ್ ಇನ್ ಬೆಂಗಳೂರು’, ’ಗಾಳಿಪಟ 2’, ’ರುದ್ರ ಪ್ರಯಾಗ’, ’ಕೆಜಿಎಫ್ ಚಾಪ್ಟರ್ 2’, ’ಇಂಡಿಯಾ ವರ್ಸಸ್ ಇಂಗ್ಲೆಂಡ್​’ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ABOUT THE AUTHOR

...view details