ಕರ್ನಾಟಕ

karnataka

ETV Bharat / sitara

'ದೇವಕಿ'ಯಲ್ಲಿ ಛಾಯಾಗ್ರಾಹಕ ವೇಣು ಮ್ಯಾಜಿಕ್ - undefined

ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಹಲವಾರು ಉತ್ತಮ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿರುವ ಹೆಚ್.ಸಿ. ವೇಣು,‘ದೇವಕಿ’ ಸಿನಿಮಾದಲ್ಲಿ ಹೊಸ ಉಪಕರಣದಿಂದ ಮೋಡಿ ಮಾಡಿದ್ದಾರೆ.

ದೇವಕಿ

By

Published : Jul 11, 2019, 9:26 AM IST

ಛಾಯಾಗ್ರಾಹಕ ಹೆಚ್.ಸಿ. ವೇಣು, ಪ್ರಿಯಾಂಕಾ ಉಪೇಂದ್ರ ನಟಿಸಿರುವ ದೇವಕಿ ಚಿತ್ರದದಲ್ಲಿ ಮೊದಲ ಬಾರಿ ಹೊಸ ಎಎಸ್​​​ಸಿಐಐ 5000 ಕ್ಯಾಮರಾ ಬಳಸಿ ಚಿತ್ರದ ಗುಣಮಟ್ಟ ಹೆಚ್ಚಿಸಿದ್ದಾರೆ.

ಕೋಲ್ಕತ್ತಾ ನಗರದಲ್ಲಿಯ ರಾತ್ರಿಯ ಸದ್ದು, ರಸ್ತೆ ಬದಿಯ ಲೈಟ್ ಇನ್ ನೈಟ್, ಹಳೆ ಕೋಲ್ಕತ್ತಾ ಬೀದಿಗಳು, ಮನೆಗಳು ಹೀಗೆ ಎಲ್ಲ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಕ್ಯಾಮರಾ ಮೇಲೆ ನಂಬಿಕೆ ಇದ್ದರೆ ಎಂತಹ ಚಮತ್ಕಾರ ಸಹ ಮಾಡಬಹುದು ಎಂಬುದು ವೇಣು ಅವರ ನಂಬಿಕೆ. ಈ ಹೊಸ ಕ್ಯಾಮರಾ ಕೆಲಸ ಅಚ್ಚುಕಟ್ಟು. ಚಿತ್ರಪೂರ್ತಿ ಈ ಕ್ಯಾಮರಾದಲ್ಲಿ ಶೂಟಿಂಗ್ ಮಾಡಲಾಗಿದೆಯಂತೆ. ಎಲ್ಲಿಯೂ ಕೂಡ ಕೃತಕ ಲೈಟ್ ಬಳಸಿಲ್ಲವಂತೆ.

ಉಪೇಂದ್ರ ಅವರ 'ಎ' ಸಿನಿಮಾ ಮೂಲಕ ಛಾಯಾಗ್ರಹಣ ಪ್ರಾರಂಭಿಸಿದ್ದ ವೇಣು ಅವರು ಅನೇಕ ದೊಡ್ಡ ಸಿನಿಮಾಗಳಿಗೆ ಕ್ಯಾಮರಾ ಹಿಡಿದವರು. ಅವರ ಸ್ಪರ್ಶ ಸಿನಿಮಾದ ಉಯ್ಯಾಲೆ ಸಂದರ್ಭ ಅಂದಿನ ಕಾಲಕ್ಕೆ ವಾರೇ ವಾ ಅಂತ ಹೇಳಲಾಗಿತ್ತು. ಕಡಿಮೆ ಉಪಕರಣದಿಂದ ಅಧಿಕ ಫಲಿತಾಂಶ ನೀಡುತ್ತಾ ಬಂದಿದ್ದಾರೆ. ಈಗ ಅವರ ಬಳಿ ಇದ್ದ ರೆಡ್ ಎಪಿಕ್ ಕ್ಯಾಮರಾ ಬದಲಿಸಿ ಈ ಹೊಸ ಉಪಕರಣ ಖರೀದಿಸಿದ್ದಾರೆ. ಇಲ್ಲಿಯವರಗೆ ಈ ಕ್ಯಾಮರಾವನ್ನು ಯಾರೂ ಉಪಯೋಗಿಸಿಲ್ಲವಂತೆ. ಇದುವರೆಗೆ ಎಎಸ್​​ಐಐ 800 ಬಳಸಲಾಗಿದೆ.

ಮಾತು ಕಡಿಮೆ ಕೆಲಸ ಜಾಸ್ತಿ ಎನ್ನುವ ಗುಂಪಿಗೆ ಸೇರುವ ವೇಣು ಅವರ ಪಟ್ಟಿಯಲ್ಲಿ ಡಾ.ವಿಷ್ಣುವರ್ಧನ, ಉಪೇಂದ್ರ, ಸುದೀಪ್, ಯಶ್, ದರ್ಶನ್, ರಮೇಶ್ ಅರವಿಂದ್, ಗಣೇಶ್, ಚೇತನ್, ವಿಜಯ ರಾಘವೇಂದ್ರ, ರಮ್ಯಾ, ದಿಗಂತ ಸಿನಿಮಾಗಳು ಸಿಗುತ್ತವೆ.

ಪತ್ನಿ ತಾರಾ ಜತೆ ವೇಣು

ವಿರಳವಾಗಿ ಮಾತಿಗೆ ಸಿಗುವ ಈ ತಾರಾ ಪತಿ ವೇಣು, 'ನಾನು ಬಹಳ ಕಾಸ್ಟ್ ಕೇಳುವ ಛಾಯಾಗ್ರಾಹಕ ಅಲ್ಲ ಎನ್ನುತ್ತಾರೆ. ನಟಿ ತಾರಾ ಬಹಳ ಆನಂದ ಪಡುವುದು ಅವರ ಪತಿ ಪ್ರತಿ ಸಿನಿಮಾ ಛಾಯಾಗ್ರಹಣ ಮಾಡಿದ್ದು ಬಿಡುಗಡೆ ಆದಾಗ.

ವೇಣು ಸದ್ಯಕ್ಕೆ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಇವರ ಸಿನಿಮಾಗಳ ಪಟ್ಟಿಯಲ್ಲಿ ಎ, ಪ್ರತ್ಯರ್ಥ, ಹೆಚ್ 2 ಒ, ಪರ್ವ, ಕಲ್ಲರಳಿ ಹೂವಾಗಿ, ಆ ದಿನಗಳು, ಯುಗಾದಿ, ಬಿರುಗಾಳಿ, ಮೊದಲ ಸಲ, ಚಿಂಗಾರಿ, ಕಠಾರಿ ವೀರ ಸುರ ಸುಂದರಾಂಗಿ, ದಿಲ್ ರಂಗಿಲಾ, ಜಗ್ಗು ದಾದಾ, ಮಮ್ಮಿ ಸೇವ್ ಮಿ, ನಾಗರಹಾವು,....ಹೀಗೆ ದೊಡ್ಡ ಸಿನಿಮಾಗಳಿಗೆ ಅವರು ಭೇಷ್ ಅನ್ನಿಸಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details