ಕರ್ನಾಟಕ

karnataka

ETV Bharat / sitara

ಇಎಟಿಟಿ ಪ್ಲಾಟ್​​​​ಫಾರ್ಮ್​ನಲ್ಲಿ ಬಿಡುಗಡೆಯಾಗಲಿದೆ 'ದಿ ಪೇಂಟರ್​​' - Venkat Bharadwaj direction The painter

ವೆಂಕಟ್ ಭಾರದ್ವಾಜ್ ಕಥೆ ಬರೆದು ನಿರ್ದೇಶಿಸಿ ನಟಿಸಿರುವ 'ದಿ ಪೇಂಟರ್​​' ಸಿನಿಮಾ ಇಎಟಿಟಿಯಲ್ಲಿ ಬಿಡುಗಡೆಯಾಗಲಿದೆ. ಮಧ್ಯಮ ವರ್ಗದ ಕುಟುಂಬ ಕಷ್ಟಕರ ಸನ್ನಿವೇಶಗಳಲ್ಲಿ ಹೇಗೆ ಬದುಕು ಸಾಗಿಸುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.

Venkat Bharadwaj
'ದಿ ಪೇಂಟರ್​​'

By

Published : Jul 23, 2020, 4:43 PM IST

ಇತ್ತೀಚೆಗೆ ಬಹುತೇಕ ಸಿನಿಮಾಗಳು ಒಟಿಟಿ ಪ್ಲಾಟ್​​ಫಾರ್ಮ್​ನಲ್ಲಿ ಬಿಡುಗಡೆಯಾಗುತ್ತಿವೆ. ಈ ಕೊರೊನಾ ಲಾಕ್​​ಡೌನ್​ನಿಂದ ಥಿಯೇಟರ್​​​ಗಳು ಬಂದ್ ಆಗಿರುವುದು ಒಟಿಟಿಗೆ ಬಹಳ ಲಾಭವಾಗಿದೆ ಎನ್ನಬಹುದು. ಇತ್ತೀಚೆಗೆ ಕನ್ನಡದ 'ಲಾ' ಸಿನಿಮಾ ಕೂಡಾ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.

ಒಟಿಟಿ ಪ್ಲಾಟ್​​ಫಾರ್ಮ್ ನಡುವೆ ಇದೀಗ ಇಎಟಿಟಿ ಹೊಸದಾಗಿ ಸೇರ್ಪಡೆಗೊಂಡಿದೆ. ಅಮೃತ ಫಿಲಂ ಸೆಂಟರ್ ಮತ್ತು ಕೆ.ಕೆ ಕಂಬೈನ್ಸ್ ಜಂಟಿಯಾಗಿ ನಿರ್ಮಾಣ ಮಾಡಿರುವ 'ದಿ ಪೇಂಟರ್​​' ಸಿನಿಮಾ ಇಎಟಿಟಿಯಲ್ಲಿ ಬಿಡುಗಡೆ ಆಗಲಿದೆ. ವೆಂಕಟ್​​​​​​ ಭಾರದ್ವಾಜ್​​​​ ನಟಿಸಿ ನಿರ್ದೇಶಿಸಿರುವ 'ದಿ ಪೇಂಟರ್​​' ಚಿತ್ರ ಇಎಟಿಟಿ ಮೂಲಕ ವಿಶ್ವಾದ್ಯಂತ ಏಕ ಕಾಲಕ್ಕೆ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಶ್ರೇಯಸ್ ಎಂಟರ್​​​ಟೈನ್ಮೆಂಟ್​ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಇನ್ನೂ ಥಿಯೇಟರ್​​ಗಳು ತೆರೆಯದ ಕಾರಣ ವೆಂಕಟ್ ಈ ಚಿತ್ರವನ್ನು ಇಎಟಿಟಿ ಮೂಲಕ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇಂದಿನ ಕೊರೊನಾ ಪರಿಸ್ಥಿತಿಯನ್ನು ಕೆಲವರು ಹೇಗೆ ಒಳ್ಳೆಯದಕ್ಕೆ ಮತ್ತೆ ಕೆಲವರು ಹೇಗೆ ಲಾಭ ಮಾಡಿಕೊಳ್ಳಲು ಬಳಸಿಕೊಳ್ಳುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ.

ವೆಂಕಟ್ ಭಾರದ್ವಾಜ್

ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಕಥಾ ವಸ್ತು ಹೊಂದಿರುವ ಸಿನಿಮಾಗೆ 13 ದಿನಗಳ ಶೂಟಿಂಗ್ ಮಾಡಲಾಗಿದೆ. ಚಿತ್ರ 90 ನಿಮಿಷ ಅವಧಿಯಿದ್ದು 5 ಲೊಕೇಶನ್, 5 ಕ್ಯಾಮರಾಮೆನ್, 20 ನಟರು ಹಾಗೂ ತಂತ್ರಜ್ಞರು ಚಿತ್ರದಲ್ಲಿ ಭಾಗಿಯಾಗಿದ್ದಾರೆ. ಈ ಚಿತ್ರವನ್ನು ನೈಜವಾಗಿ ಚಿತ್ರಿಸಲಾಗಿದೆ. ಒಂದು ಮಧ್ಯಮ ವರ್ಗದ ಕುಟುಂಬ ಕಷ್ಟಕರ ಸನ್ನಿವೇಶಗಳಲ್ಲಿ ಹೇಗೆ ಬದುಕು ಸಾಗಿಸುತ್ತದೆ ಎಂಬುದನ್ನು ಚಿತ್ರದಲ್ಲಿ ಬಹಳ ನೈಜವಾಗಿ ತೋರಿಸಲಾಗಿದೆ ಎನ್ನುತ್ತಾರೆ ವೆಂಕಟ್.

ಹಬ್​ ಅ್ಯಂಡ್ ಸ್ಪೋಕ್ ಮಾಡೆಲ್ ವ್ಯವಸ್ಥೆಯಲ್ಲಿ ಚಿತ್ರೀಕರಣ ಮಾಡಿರುವ ಮೊದಲ ಭಾರತೀಯ ಸಿನಿಮಾ ಇದು. ಕನ್ನಡ ಪ್ರೇಕ್ಷಕರು 50 ರೂಪಾಯಿ ಕೊಟ್ಟು ಮನೆಯಲ್ಲೇ ಈ ಸಿನಿಮಾ ನೋಡಬಹುದು. ಪ್ರೇಕ್ಷಕರು ನೀಡುವ ದುಡ್ಡಿನಲ್ಲಿ ಶೇಕಡಾ 20 ರಷ್ಟನ್ನು ಸಂಕಷ್ಟದಲ್ಲಿರುವ ಸಿನಿಕಾರ್ಮಿಕರಿಗೆ ನೀಡುವ ಯೋಜನೆ ಇದೆ. ಶೀಘ್ರದಲ್ಲಿ ಚಿತ್ರದ ಟ್ರೇಲರ್​​​​ ಮತ್ತು ಲಿರಿಕಲ್ ವಿಡಿಯೋ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ಹೇಳಿದೆ.

ಈ ಚಿತ್ರದಲ್ಲಿ ವೆಂಕಟ್ ಭರದ್ವಾಜ್ ಪೇಂಟರ್​​​​ ಆಗಿ ಪಾತ್ರ ಮಾಡಿದ್ದಾರೆ. ರಾಜ್​​​​​​​​ಕಮಲ್ , ಭಾಷಾ , ಶಿನವ್ ಕಬೀರ್ ಸೋಮಯಾಜಿ , ಶಮೀಕ್ , ಉಮಾ , ಮಧುರ , ಅಜಯ್ ಲಾರೆನ್ಸ್ ಶಮಾ , ವೈಷ್ಣವಿ , ವೆಂಕಟ್ ಶಾಸ್ತ್ರಿ, ಮನೋಜ್ , ಕಿರಣ್ , ಮಿಥುನ್ ಮತ್ತು ಸಂಜಯ್ ಚಿತ್ರದಲ್ಲಿ ನಟಿಸಿದ್ದಾರೆ.

ABOUT THE AUTHOR

...view details