ಕರ್ನಾಟಕ

karnataka

ETV Bharat / sitara

ಗುಳಿಕೆನ್ನೆ ಚೆಲುವನಿಗೆ ಬರ್ತ್​ಡೇ ಸಂಭ್ರಮ...'ವೀರಪುತ್ರ' ಟೀಸರ್ ರಿಲೀಸ್​​ - Vijay surya Birthday

ಮಾಡೆಲಿಂಗ್ ಮೂಲಕ ಕರಿಯರ್ ಆರಂಭಿಸಿದ ನಟ ವಿಜಯ್ ಸೂರ್ಯ ಇಷ್ಟಕಾಮ್ಯ ಸಿನಿಮಾ, ಅಗ್ನಿಸಾಕ್ಷಿ, ಪ್ರೇಮಲೋಕ ಧಾರಾವಾಹಿಗಳ ಮೂಲಕ ಖ್ಯಾತಿ ಗಳಿಸಿದವರು. ಇಂದು ವಿಜಯ್ ಸೂರ್ಯ ಹುಟ್ಟುಹಬ್ಬವಾಗಿದ್ದು ಬರ್ತ್​ಡೇ ವಿಶೇಷವಾಗಿ ವಿಜಯ್ ಅಭಿನಯದ 'ವೀರಪುತ್ರ' ಚಿತ್ರದ ಟೀಸರ್ ಬಿಡುಗಡೆ ಆಗಿದೆ.

Vijay surya birthday
ವಿಜಯ್ ಸೂರ್ಯ

By

Published : Sep 7, 2020, 8:47 AM IST

Updated : Sep 7, 2020, 9:59 AM IST

ಕಿರುತೆರೆ ನಟ, ಗುಳಿಕೆನ್ನೆ ಚೆಲುವ ವಿಜಯ್ ಸೂರ್ಯ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಬಾರಿಯ ಹುಟ್ಟುಹಬ್ಬ ವಿಜಯ್ ಅವರಿಗೆ ಬಹಳ ವಿಶೇಷ. ಏಕೆಂದರೆ ಅವರು 'ವೀರಪುತ್ರ' ಎಂಬ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

'ವೀರಪುತ್ರ' ಟೀಸರ್

ಇದರಲ್ಲಿ ವಿಶೇಷ ಏನು ಅಂತೀರಾ...?ಇದು ವಿಜಯ್ ಸೂರ್ಯ ಅವರಿಗೆ ನಿಜವಾಗಲೂ ವಿಶೇಷವೇ ಏಕೆಂದರೆ ಈ ರೀತಿಯ ಪಾತ್ರಕ್ಕಾಗಿ ಅವರು 10 ವರ್ಷಗಳಿಂದ ಕಾಯುತ್ತಿದ್ದರಂತೆ. ಇದುವರೆಗೂ ನನಗೆ ಇಂತಹ ಪಾತ್ರ ಬಂದಿರಲಿಲ್ಲ. 10 ವರ್ಷಗಳಿಂದ ಕಾದಿದ್ದಕ್ಕೂ ಸಾರ್ಥಕವಾಯ್ತು ಎನ್ನುತ್ತಾರೆ ವಿಜಯ್ ಸೂರ್ಯ. ಈ ಚಿತ್ರದಲ್ಲಿ ಅವರು 3 ಶೇಡ್​​ಗಳಲ್ಲಿ ನಟಿಸುತ್ತಿದ್ದಾರಂತೆ. ಎರಡು ದಿನಗಳ ಹಿಂದೆಯೇ ಹಿರಿಯ ನಿರ್ದೇಶಕ ಎಸ್​​​​.ಕೆ. ಭಗವಾನ್ 'ವೀರಪುತ್ರ' ಟೀಸರ್ ಬಿಡುಗಡೆ ಮಾಡಿದ್ದಾರೆ.

'ವೀರ ಪುತ್ರ' ಒಂದು ನೈಜ ಘಟನೆ ಆಧಾರಿತ ಸಿನಿಮಾ. ಸಿನಿಮಾ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ. ವಿಜಯ್ ಸೂರ್ಯ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಲು ಟೀಸರ್ ಮಾತ್ರವಷ್ಟೇ ಚಿತ್ರೀಕರಣ ಆಗಿದೆ. ನಿರ್ದೇಶಕ ಡಾ ದೇವರಾಜು ಎಲ್ಲಾ ಸಿದ್ಧತೆ ಮಾಡಿಕೊಂಡು ಕೇವಲ ಒಂದೇ ದಿನದಲ್ಲಿ ಟೀಸರ್ ತಯಾರಿಸಿದ್ದಾರಂತೆ. ವಿಜಯ್ ಸೂರ್ಯ ರಗಡ್ ಲುಕ್​​ನಲ್ಲಿ ಬೈಕ್​​​ನಲ್ಲಿ ಲಾಂಗ್ ಹಿಡಿದು ಬರುವುದನ್ನು ಟೀಸರ್​​ನಲ್ಲಿ ಚಿತ್ರೀಕರಿಸಲಾಗಿದೆ.

ವಿಜಯ್ ಸೂರ್ಯ

ಮಾಡೆಲಿಂಗ್ ಮೂಲಕ ವೃತ್ತಿ ಬದುಕು ಆರಂಭಿಸಿ 'ಅಗ್ನಿಸಾಕ್ಷಿ', 'ಪ್ರೇಮಲೋಕ' ಧಾರಾವಾಹಿಗಳ ಮೂಲಕ ಖ್ಯಾತಿ ಗಳಿಸಿದ ವಿಜಯ್ ಸೂರ್ಯ ಕ್ರೇಜಿಲೋಕ, ಇಷ್ಟಕಾಮ್ಯ, ಲಖ್ನೌ ಟು ಮುಂಬೈ ಚಿತ್ರಗಳು ಸೇರಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ವೃತ್ತಿ ಬದುಕಿನ ಬಹುನಿರೀಕ್ಷಿತ ಚಿತ್ರದಲ್ಲಿ ಅಭಿನಯಿಸಲು ಕಾಯುತ್ತಿದ್ದಾರೆ.

Last Updated : Sep 7, 2020, 9:59 AM IST

ABOUT THE AUTHOR

...view details