ಕರ್ನಾಟಕ

karnataka

ETV Bharat / sitara

ಯಾವ ಹೀರೋಗಳು ನನಗೆ ಡೇಟ್ಸ್ ಕೊಡುತ್ತಿಲ್ಲ...'ವೀರಮದಕರಿ' ನಿರ್ಮಾಪಕ ದಿನೇಶ್ ಗಾಂಧಿ ನೇರ ಆರೋಪ..! - undefined

ನನ್ನ ಬಳಿ 8 ಸ್ಕ್ರಿಪ್ಟ್​ಗಳಿವೆ, ಹೀರೋಗಳ ಮನೆ ಬಾಗಿಲಿಗೆ ಅಲೆಯುತ್ತಿದ್ದರೂ ಯಾವ ಹೀರೋ ಕೂಡಾ ನನಗೆ ಡೇಟ್ಸ್ ಕೊಡುತ್ತಿಲ್ಲ. ಈಗ ಹೀರೋಗಳು ಹೇಳಿದ ಹಾಗೆ ಕೇಳಬೇಕು ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು 'ವೀರಮದಕರಿ' ಸಿನಿಮಾ ನಿರ್ಮಾಪಕ ದಿನೇಶ್ ಎಸ್​. ಗಾಂಧಿ ಆರೋಪಿಸಿದ್ದಾರೆ.

ದಿನೇಶ್ ಗಾಂಧಿ

By

Published : Jun 21, 2019, 12:33 PM IST

ಡಾ. ರಾಜ್​​​ಕುಮಾರ್ ಕಾಲದಲ್ಲಿ, ನಿರ್ಮಾಪಕರನ್ನು ಅನ್ನದಾತರು, ಹಾಗೂ ಲಕ್ಷ್ಮಿಪುತ್ರರು ಎಂದು ಕರೆಯುತ್ತಿದ್ದರು. ನಿರ್ಮಾಪಕರ ಮಾತನ್ನು ಎಲ್ಲರೂ ಕೇಳುತ್ತಿದ್ದರು. ಆದರೆ ಈಗ ಎಲ್ಲಾ ಉಲ್ಟಾ ಆಗಿದೆ. ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದೇನೆ ಎಂದು ನಿರ್ಮಾಪಕ ದಿನೇಶ್ ಗಾಂಧಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಿರ್ಮಾಪಕ ದಿನೇಶ್ ಗಾಂಧಿ

ಸುದೀಪ್ ಅಭಿನಯದ 'ವೀರಮದಕರಿ' ಸಿನಿಮಾ ಅವರಿಗೆ ಒಂದು ದೊಡ್ಡ ಬ್ರೇಕ್ ನೀಡಿತ್ತು. ಈ ಸಿನಿಮಾಕ್ಕೆ ಒಳ್ಳೆ ಹೆಸರು ಸಿಕ್ಕರೂ ಲಾಭ ಮಾತ್ರ ಆಗಲಿಲ್ಲ. ಸುದೀಪ್ ಹೇಳಿದಂತೆ ನಡೆದುಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ ದಿನೇಶ್. ನಂತರ ರವಿಚಂದ್ರನ್ ಅವರನ್ನು ಭೇಟಿ ಮಾಡಿದೆ. ಅವರು 4 ವರ್ಷಗಳು ಯಾವುದೇ ಸಿನಿಮಾ ಮಾಡಲಿಲ್ಲ. ಆದರೂ ಅವರನ್ನು ಹಾಕಿಕೊಂಡು ಅವರು ಕೇಳಿದಷ್ಟು ಹಣ ನೀಡಿ 'ಹೂವು' ಹಾಗೂ 'ಮಲ್ಲಿಕಾರ್ಜುನ' ಎಂಬ ಸಿನಿಮಾ ಮಾಡಿದೆ ಇದರಿಂದ ಕೂಡಾ ನಾಲ್ಕು ಕೋಟಿ ರೂಪಾಯಿ ಹಣ ಕಳೆದುಕೊಂಡೆ ಎಂದು ದಿನೇಶ್ ಕ್ರೇಜಿಸ್ಟಾರ್ ಮೇಲೆ ಆರೋಪ ಮಾಡಿದ್ದಾರೆ.

'ವೀರಮದಕರಿ'

ತೆಲುಗಿನ ಸೂಪರ್​ ಹಿಟ್ ಸಿನಿಮಾ 'ಛತ್ರಪತಿ' ಸಿನಿಮಾವನ್ನು ಮಾಡಲು ರೀಮೇಕ್ ರೈಟ್ಸ್ ಪಡೆದು ದರ್ಶನ್ ಅವರನ್ನು ಭೇಟಿ ಮಾಡಿದರೂ ಡೇಟ್ಸ್ ಸಿಗಲಿಲ್ಲ. ನಂತರ ಸಿದ್ದಾರ್ಥ್ ಎಂಬುವವರನ್ನು ಹಾಕಿಕೊಂಡು ಸಿನಿಮಾ ಮಾಡಿ ಕೈ ಸುಟ್ಟುಕೊಂಡೆ. ಏನಾದರೂ ಗೆಲ್ಲಲೇಬೇಕು ಎಂಬ ಹಠದಿಂದ ಹಿಂದಿಯ ಸೂಪರ್ ಹಿಟ್ ಸಿನಿಮಾ 'ದಬಾಂಗ್​' ರೈಟ್ಸ್​​ ಸ್ವತ: ಸಲ್ಮಾನ್ ಖಾನ್ ಬಳಿ ಪಡೆದುಬಂದೆ. ಜೊತೆಗೆ ಪವರ್ ಕಲ್ಯಾಣ್ ನಟಿಸಿದ್ದ 'ಗಬ್ಬರ್​ ಸಿಂಗ್' ರೈಟ್ಸ್ ಕೂಡಾ ಪಡೆದೆ. ಆದರೆ, ಎಲ್ಲಾ ಸ್ಟಾರ್​​ಗಳ ಮನೆಗೆ ಅಲೆದರೂ ಕಾಲ್​​ಶೀಟ್ ಸಿಗಲಿಲ್ಲ. ನಟ ಗಣೇಶ್ 'ಗಬ್ಬರ್​​ ಸಿಂಗ್​​' ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದರು. ಆದರೆ, ಆ ಸಿನಿಮಾ ಶುರುವಾಗಲೇ ಇಲ್ಲ.

'ಛತ್ರಪತಿ'

ಇಂದಿಗೂ ಹೀರೋಗಳನ್ನು ಡೇಟ್ಸ್ ಕೇಳುತ್ತಲೇ ಇದ್ದೇನೆ ಎಂದು ಸ್ಟಾರ್ ನಟರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು 5 ವರ್ಷಗಳಿಂದ ಖಾಲಿ ಕುಳಿತಿದ್ದೇನೆ. ನನಗೂ ಹೆಂಡತಿ, ಮಕ್ಕಳು, ಖರ್ಚು ಇದೆ. ಸದ್ಯಕ್ಕೆ ಒಂದು ದೇವಸ್ಥಾನ ಕಟ್ಟಿಸುತ್ತಿದ್ದೇನೆ. ಆದರೆ, ಯಾವುದೇ ಕಾರಣಕ್ಕೂ ಸಿನಿಮಾ ಇಂಡಸ್ಟ್ರಿಯನ್ನು ಬಿಡುವುದಿಲ್ಲ. ಇಲ್ಲೇ ಇದ್ದು ಒಳ್ಳೆ ಸಿನಿಮಾಗಳನ್ನು ಮಾಡುತ್ತೇನೆ ಎಂದು ದಿನೇಶ್ ಗಾಂಧಿ ಹಠಕ್ಕೆ ಬಿದ್ದಿದ್ದಾರೆ.

'ಹೂ'

For All Latest Updates

TAGGED:

ABOUT THE AUTHOR

...view details