ಬಿಗ್ ಬಾಸ್ ಮನೆಯ ಸ್ಪರ್ಧಿ ವಾಸುಕಿ ವೈಭವ್ ಈ ಹಿಂದೆ 'ಮನಸ್ಸಿಂದ ಯಾರೂನು ಕೆಟ್ಟೋರಲ್ಲ' ಎಂಬ ಹಾಡು ಬರೆದು ಜನಪ್ರಿಯರಾಗಿದ್ದರು. ಇದೀಗ 'ತಲೆ ಗಿರ ಗಿರ ಗಿರ' ಎಂಬ ರೊಮ್ಯಾಂಟಿಕ್ ಹಾಡು ಬರೆಯುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
'ತಲೆ ಗಿರ ಗಿರ ಗಿರ... ತಲೆ ಗಿರ ಗಿರ ಗಿರ... ಅಪ್ಸರೆ, ಸರಿ ದಾರಿ ತೋರಿಸು ಸೀದಾ ಹೃದಯಕ್ಕೆ' - vasuki vybhav
ವಾಸುಕಿ ವೈಭವ್ ಈ ಹಿಂದೆ 'ಮನಸ್ಸಿಂದ ಯಾರೂನು ಕೆಟ್ಟೋರಲ್ಲ' ಎಂಬ ಹಾಡು ಬರೆದು ಜನಪ್ರಿಯರಾಗಿದ್ದರು. ಇದೀಗ ತಲೆ ಗಿರ ಗಿರ ಗಿರ ಎಂಬ ರೊಮ್ಯಾಂಟಿಕ್ ಹಾಡು ಬರೆಯುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ವಾರಾಂತ್ಯ ಸ್ಪರ್ಧಿಗಳನ್ನು ಮಾತನಾಡಿಸಲು ಬಂದ ಕಿಚ್ಚ ಸುದೀಪ್, ವಾಸುಕಿ ಅವರ ಬಳಿ ನೀವು ಹಾಡು ಬರೆದಿರುವ ಬಗ್ಗೆ ನನಗೆ ತಿಳಿದಿದೆ. ಹಾಡಿ ಎಂದಾಗ ವಾಸುಕಿ ರಾಗಬದ್ಧವಾಗಿ ಹಾಡಿದರು. ವಾಸುಕಿ ಹಾಡನ್ನು ಕೇಳಿ ಮೈ ಮರೆತ ಸುದೀಪ್, ತುಂಬಾ ಚೆನ್ನಾಗಿದೆ ಎಂದು ಹೊಗಳಿದರು. ಹಾಡಿನ ಸಾಹಿತ್ಯವನ್ನು ಕಾಡಿಗೆಯಲ್ಲಿ ಬರೆದೆ ಎಂದು ವಾಸುಕಿ ಪದ್ಯ ಹುಟ್ಟಿದ ಬಗೆಯನ್ನು ಹೇಳಿದರು.
ಯಾವಾಗಲಾದರೂ ಜೀವನದಲ್ಲಿ ಅವಕಾಶ ಸಿಕ್ಕಿದರೆ ನಾನು ಖಂಡಿತಾ ನಿಮ್ಮ ಜೊತೆ ಕೆಲಸ ಮಾಡುತ್ತೇನೆ ಎಂದು ಕಿಚ್ಚ ಸುದೀಪ್ ಭರವಸೆ ನೀಡಿದರು. ನಾವೆಲ್ಲಾ ಕಲಾವಿದರು. ಕಲಾವಿದರು ಅಂದ ಮಾತ್ರಕ್ಕೆ ನಮಗೆ ಪಟ್ಟ ಕಟ್ಟಲು ಹೋಗಬೇಡಿ. ನಮಗೆ ಯಾರೋ ಡೈಲಾಗ್ ಬರೆದು ಕೊಡಬೇಕು, ಯಾರೋ ಮೇಕಪ್ ಮಾಡಬೇಕು, ಮ್ಯೂಸಿಕ್ ಕೂಡಾ ಅಷ್ಟೇ, ಇನ್ಯಾರೋ ಬರೀಬೇಕು. ಇಷ್ಟೆಲ್ಲಾ ಆದ ಮೇಲೆ ದೇವರ ಜೊತೆಗೆ ವೀಕ್ಷಕರು ಕೂಡ ಕೈ ಹಿಡಿಯಬೇಕು. ಅಷ್ಟಾದಾಗಲೇ ನಾವು ನಾವಾಗಿರೋದು ಸಾಧ್ಯ. ಮಾತ್ರವಲ್ಲ ನಿಮ್ಮಂತಹವರ ಜೊತೆ ಕೆಲಸ ಮಾಡುವುದು ನಮಗೆ ಗೌರವ ಎಂದು ವಾಸುಕಿಗೆ ಸುದೀಪ್ ಹೇಳಿದರು.