ಸದ್ಯಕ್ಕೆ ಬಿಗ್ಬಾಸ್ ಮನೆಯಲ್ಲಿರುವ ಸಂಗೀತ ಸಂಯೋಜಕ ವಾಸುಕಿ ವೈಭವ್ಗೆ ಭಯವೊಂದು ಕಾಡಲು ಆರಂಭವಾಗಿದೆಯಂತೆ. ವಾಸುಕಿ ವೈಭವ್ ಕೇವಲ ಅವರ ಹಾಡಿನಿಂದಷ್ಟೇ ಖ್ಯಾತಿ ಪಡೆದಿಲ್ಲ, ನೋಡುವುದಕ್ಕೂ ಸುಂದರವಾಗಿದ್ದಾರೆ.
ವಾಸುಕಿ ವೈಭವ್ಗೆ ಆ ವಿಚಾರವಾಗಿ ಭಯ ಕಾಡಲು ಶುರುವಾಗಿದೆಯಂತೆ!! - ಗಡ್ಡದ ವಿಚಾರಕ್ಕೆ ವಾಸುಕಿ ವೈಭವ್ಗೆ ಭಯ
ಇತ್ತೀಚೆಗೆ ವಾಸುಕಿ ವೈಭವ್ ಗಡ್ಡ ಬಿಟ್ಟಿರುವುದರಿಂದ ಇನ್ನಷ್ಟು ಸುಂದರವಾಗಿ ಕಾಣಿಸುತ್ತಿದ್ದಾರೆ. ಅವರು ಗಡ್ಡ ಬಿಡಲು ಒಂದು ಕಾರಣವಿದೆಯಂತೆ. ಪ್ರತಿ ಶನಿವಾರ ಮತ್ತು ಭಾನುವಾರ ಬರುವ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಗಡ್ಡದ ಸಿಕ್ರೇಟ್ ಹಂಚಿಕೊಂಡಿದ್ದಾರೆ.
![ವಾಸುಕಿ ವೈಭವ್ಗೆ ಆ ವಿಚಾರವಾಗಿ ಭಯ ಕಾಡಲು ಶುರುವಾಗಿದೆಯಂತೆ!! Vasuki Vaibhav](https://etvbharatimages.akamaized.net/etvbharat/prod-images/768-512-5391081-thumbnail-3x2-vasuki.jpg)
ಇತ್ತೀಚೆಗೆ ವಾಸುಕಿ ವೈಭವ್ ಗಡ್ಡ ಬಿಟ್ಟಿರುವುದರಿಂದ ಇನ್ನಷ್ಟು ಸುಂದರವಾಗಿ ಕಾಣಿಸುತ್ತಿದ್ದಾರೆ. ಅವರು ಗಡ್ಡ ಬಿಡಲು ಒಂದು ಕಾರಣವಿದೆಯಂತೆ. ಆ ವಿಚಾರವನ್ನು ಅವರೇ ಬಾಯಿ ಬಿಟ್ಟಿದ್ದಾರೆ. ಆದರೆ, ಈ ವಿಷಯವನ್ನು ಹೇಳಿದ ನಂತರ ಅವರಿಗೆ ಭಯವೊಂದು ಶುರುವಾಗಿದೆಯಂತೆ. ಪ್ರತಿ ಶನಿವಾರ ಮತ್ತು ಭಾನುವಾರ ಬರುವ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಗಡ್ಡದ ಸಿಕ್ರೇಟ್ ಹಂಚಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಗಡ್ಡದ ವಿಚಾರ ಕೇಳಿದಾಗ, 'ಗಡ್ಡ ತೆಗೆದರೆ ಚಿಕ್ಕ ಹುಡುಗನ ರೀತಿ ಕಾಣ್ತೀನಿ ಅದ್ರಲ್ಲೂ 10ನೇ ತರಗತಿ ಹುಡುಗನ ಥರ ಕಾಣ್ತೀನಿ. ದೊಡ್ಡವನಂತೆ ಕಾಣಬೇಕೆಂದರೆ ಗಡ್ಡ ಇರಬೇಕು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, ಆದಷ್ಟು ಬೇಗ ನಿಮ್ಮ ಗಡ್ಡಕ್ಕೂ ಕತ್ತರಿ ಬೀಳುತ್ತೆ ಎಂದಿದ್ದಾರೆ. ಹಾಗೆಂದ ಕೂಡಲೇ ವಾಸುಕಿ ವೈಭವ್ ದಯವಿಟ್ಟು ಬೇಡ ಎಂದು ಮನವಿ ಮಾಡಿದ ಪ್ರಸಂಗ ಕೂಡಾ ಜರುಗಿತು. ಇದೀಗ ವಾಸುಕಿಗೆ ತಮ್ಮ ಗಡ್ಡಕ್ಕೆ ಕತ್ತರಿ ಬೀಳುವ ಭಯ ಶುರುವಾಗಿದೆಯಂತೆ.