ರಾಬರ್ಟ್ ಸಿನಿಮಾ ಬಳಿಕ ವಿನೋದ್ ಪ್ರಭಾಕರ್ ಅಭಿನಯಿಸುತ್ತಿರುವ ಸಿನಿಮಾ ವರದ. ಸದ್ಯ ಟ್ರೈಲರ್ನಿಂದಲೇ ಚಂದನವನದಲ್ಲಿ ಭರವಸೆ ಹುಟ್ಟಿಸಿದೆ. ಆ್ಯಕ್ಷನ್ ಜೊತೆಗೆ ಲವ್ ಸ್ಟೋರಿ ಕಥೆಯನ್ನ ಒಳಗೊಂಡಿರುವ ವರದ ಚಿತ್ರವನ್ನ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಆಟೋರಾಜ ಸಿನಿಮಾ ನಿರ್ದೇಶನ ಮಾಡಿರೋ ಉದಯ ಪ್ರಕಾಶ್ ಡೈರೆಕ್ಷನ್ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.
ವಿನೋದ್ ಪ್ರಭಾಕರ್ ಅವರ ತಂದೆ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್ ನಟಿಸಿದ್ದಾರೆ. ಅಮಿತ ಈ ಚಿತ್ರದ ನಾಯಕಿ. ಅನಿಲ್ ಸಿದ್ದು, ಎಂ. ಕೆ ಮಠ, ಅಶ್ವಿನಿಗೌಡ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ದಿ, ರಾಧ ರಂಗನಾಥ್, ರಾಜೇಶ್ವರಿ, ದುರ್ಗ, ಮಾನಸ, ಅರವಿಂದ್, ರೋಬೊ ಗಣೇಶ್, ಲೋಕೇಶ್, ನಮನ, ರಾಮಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕೆ. ಕಲ್ಯಾಣ್ ಹಾಗೂ ಚೇತನ್ ಕುಮಾರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ.