ಲಾಕ್ಡೌನ್ ಸಮಯದಲ್ಲಿ ತಮಿಳಿನ ಹಿರಿಯ ನಟ ವಿಜಯ್ ಕುಮಾರ್ ಪುತ್ರಿ ವನಿತಾ ಬಹಳ ಸುದ್ದಿಯಲ್ಲಿದ್ದರು. ಪೀಟರ್ ಪೌಲ್ ಎಂಬುವರೊಂದಿಗೆ ಮೂರನೇ ಮದುವೆಯಾಗಿ ಸುದ್ದಿಯಲ್ಲಿದ್ದ ವನಿತಾ, ಮದುವೆಯಾಗಿ ಕೆಲವು ದಿನಗಳ ನಂತರ ಪೀಟರ್ ಮನೆ ಬಿಟ್ಟು ಓಡಿಹೋಗಿದ್ದಾರೆ. ಪೀಟರ್ ತಮ್ಮ ಬಗ್ಗೆ ಸುಳ್ಳು ಹೇಳಿ ನನ್ನನ್ನು ನಂಬಿಸಿ ದ್ರೋಹ ಮಾಡಿದರು ಎಂದು ಗೋಳಾಡಿದ್ದರು.
ವನಿತಾ ವಿಜಯ್ ಕುಮಾರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಲ್ಲಿರುವುದು ಸಿನಿಮಾ ವಿಚಾರಕ್ಕೆ. ಬಹಳ ವರ್ಷಗಳ ನಂತರ ವನಿತಾ ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರಂತೆ. ವನಿತಾ, 1995 ರಲ್ಲಿ ವಿಜಯ್ ಜೊತೆ ಚಂದ್ರಲೇಖ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದ ನಂತರ ಕೆಲವೊಂದು ಚಿತ್ರಗಳಲ್ಲಿ ನಟಿಸಿದ್ದ ವನಿತಾ ಮದುವೆಯಾದ ನಂತರ ಸಿನಿಮಾವನ್ನು ಬಿಟ್ಟು ತಮ್ಮ ವೈಯಕ್ತಿಕ ಜೀವನದತ್ತ ಗಮನ ನೀಡಿದರು.