ಕರ್ನಾಟಕ

karnataka

ETV Bharat / sitara

ಒಟ್ಟಾಗಿ ಕಾಣಿಸಿಕೊಂಡ ವೈಷ್ಣವಿ - ದಿವ್ಯಾ.. ಫೋಟೋ ವೈರಲ್ - Vaishnavi-Divya'

ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಇದೇ ಮೊದಲ ಬಾರಿಗೆ ವೈಷ್ಣವಿ ಮತ್ತು ದಿವ್ಯಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ವೈಷ್ಣವಿ ತಮ್ಮ ಇನ್​ಸ್ಟಾಗ್ರಾಂ ಪೇಜ್’ನಲ್ಲಿ ದಿವ್ಯಾ ಜೊತೆಗಿರುವ ಫೋಟೋ ಶೇರ್ ಮಾಡಿದ್ದಾರೆ. ಇವರಿಬ್ಬರನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ.

ಫೋಟೋ ವೈರಲ್
ಫೋಟೋ ವೈರಲ್

By

Published : Jun 7, 2021, 10:06 PM IST

ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಇದೇ ಮೊದಲ ಬಾರಿಗೆ ವೈಷ್ಣವಿ ಮತ್ತು ದಿವ್ಯಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ವೈಷ್ಣವಿ ತಮ್ಮ ಇನ್​ಸ್ಟಾಗ್ರಾಂ ಪೇಜ್’ನಲ್ಲಿ ದಿವ್ಯಾ ಜೊತೆಗಿರುವ ಫೋಟೋ ಶೇರ್ ಮಾಡಿದ್ದಾರೆ. ಇವರಿಬ್ಬರನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಾಗಿ ಕಾಣಿಸಿಕೊಂಡ ವೈಷ್ಣವಿ-ದಿವ್ಯಾ

ಕೆಲವರು ಹಾರ್ಟ್ ಇಮೋಜಿಗಳನ್ನು ಕಮೆಂಟ್ ಮಾಡಿದರೆ, ಕೆಲವರಂತೂ “ನೀವಿಬ್ಬರೂ ಒಟ್ಟಿಗೆ ಇರುವುದನ್ನು ನೋಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ನಾವು ಇದನ್ನೇ ಕಾಯುತ್ತಿದ್ದೆವು” ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಫೋಟೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಲೈಕ್ಸ್ ಮತ್ತು ಕಮೆಂಟ್’ಗಳ ಸುರಿಮಳೆಯೇ ಹರಿದು ಬರುತ್ತಿದೆ.

ಒಟ್ಟಾಗಿ ಕಾಣಿಸಿಕೊಂಡ ವೈಷ್ಣವಿ-ದಿವ್ಯಾ

ಬಿಗ್​ ಬಾಸ್​ ಜರ್ನಿ

ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಖ್ಯಾತಿಯಾದ ವೈಷ್ಣವಿ, ಆರಂಭದಲ್ಲಿ ಬಿಗ್ ಬಾಸ್ ಮನೆಗೆ ಹೋಗುವ ಪ್ರಸ್ತಾಪವನ್ನು ನಿರಾಕರಿಸಿದ್ದರು. ಆದರೆ, ನಂತರ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡು ಭಾಗವಹಿಸಿದ್ದರಿಂದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು. ಬಳಿಕ ಬಿಗ್ ಬಾಸ್ ಮನೆಯಲ್ಲಿ ಅವರು ನಡೆದುಕೊಂಡ ರೀತಿ ಸ್ಪರ್ಧಿಗಳಿಗೆ ಮಾತ್ರವಲ್ಲ, ವೀಕ್ಷಕರಿಗೂ ಇಷ್ಟವಾಗಿತ್ತು.

ಒಟ್ಟಾಗಿ ಕಾಣಿಸಿಕೊಂಡ ವೈಷ್ಣವಿ-ದಿವ್ಯಾ

ವೈಷ್ಣವಿ ತಮ್ಮ ಸೌಮ್ಯ ಸ್ವಭಾವದಿಂದಲೇ ಜನಪ್ರಿಯತೆ ಗಳಿಸಿದರೆ, ದಿವ್ಯಾ ಟಾಸ್ಕ್’ಗಳಲ್ಲಿ ಚೆನ್ನಾಗಿ ಆಟವಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನ ಗಳಿಸಿದರು. ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಸಹ ಸ್ಪರ್ಧಿಗಳೊಂದಿಗೆ ನಡೆದುಕೊಳ್ಳುವ ರೀತಿ ಎಲ್ಲರನ್ನೂ ಆಕರ್ಷಿಸಿತ್ತು. ಅದೆಲ್ಲಕ್ಕಿಂತ ಹೆಚ್ಚಾಗಿ ಅರವಿಂದ್ ಕೆಪಿ ಅವರೊಂದಿಗಿನ ಸ್ನೇಹ ಹೈಲೆಟ್ಸ್​​ ಆಗಿತ್ತು.

ABOUT THE AUTHOR

...view details