ಮುಂಬೈ: ನಟಿ ವಾಣಿ ಕಪೂರ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 32ನೇ ವರ್ಷಕ್ಕೆ ಕಾಲಿಡುತ್ತಿರುವ ಬಾಲಿವುಡ್ ನಟಿಗೆ ತನ್ನ ಕುಟುಂಬಸ್ಥರ ಅನುಪಸ್ಥಿತಿ ಕಾಡುತ್ತಿದೆಯಂತೆ. ಹೀಗೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ವಾಣಿ ತಂದೆ ಶಿವ, ತಾಯಿ ಡಿಂಪಿ ಕಪೂರ್ ಮತ್ತು ಸಹೋದರಿ ನೂಪುರ್ ಚೋಪ್ರಾ ಇಲ್ಲದೆ ಜನ್ಮದಿನ ಅಪೂರ್ಣವಾಗಿದೆ ಎಂದು ಹೇಳಿದ್ದಾರೆ.
"ನನ್ನ ಜನ್ಮದಿನದಂದು ನನ್ನ ಹೆತ್ತವರು ಮತ್ತು ನನ್ನ ಸಹೋದರಿ ಇಲ್ಲದೆ ಅಪೂರ್ಣವಾಗಿದೆ. ಅವರು ನನ್ನ ಶಕ್ತಿಯ ಆಧಾರಸ್ತಂಭ. ನನ್ನ ಜೀವನದ ಪ್ರತಿಯೊಂದು ಪ್ರಮುಖ ವಿಷಯಗಳ ಭಾಗ. ಆದ್ದರಿಂದ, ಈ ವರ್ಷ ನಾನು ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಅವರು ಮನೆಯಲ್ಲಿ ಸುರಕ್ಷಿತವಾಗಿ, ಆರೋಗ್ಯವಾಗಿದ್ದಾರೆ ಎಂದು ಸಂತೋಷವಿದೆ. ಮುಂದಿನ ವರ್ಷ ವಿಭಿನ್ನವಾಗಿ ಎಲ್ಲರ ಜೊತೆಯಲ್ಲಿ ಹಬ್ಬ ಆಚರಣೆ ಮಾಡುತ್ತೇವೆ" ಎಂದು ವಾಣಿ ಹೇಳಿದ್ದಾರೆ.
ವಾಣಿ ಈಗಾಗಲೇ ಅಕ್ಷಯ್ ಕುಮಾರ್ ಅಭಿನಯದ ಬೆಲ್ ಬಾಟಮ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಶೂಟಿಂಗ್ಗಾಗಿ ಶೀಘ್ರದಲ್ಲೇ ಸ್ಕಾಟ್‌ಲ್ಯಾಂಡ್‌ಗೆ ಹಾರಲಿದ್ದಾರೆ.
"ಕೋವಿಡ್ -19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ವರ್ಷದ ನನ್ನ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದೇನೆ. ಸ್ನೇಹಿತರೊಂದಿಗೆ ಕೆಲವು ಯೋಜನೆಗಳನ್ನು ರೂಪಿಸಿದ್ದೇನೆ. ಮತ್ತೆ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನನ್ನ ಸಿನಿಮಾಗಳ ಚಿತ್ರೀಕರಣ ಪ್ರಾರಂಭಿಸುತ್ತೇನೆ. ಹಾಗಾಗಿ ನಾನು ಹೆಚ್ಚುವರಿ ಮುನ್ನೆಚ್ಚರಿಕೆ ವಹಿಸುತ್ತಿದ್ದೇನೆ ಮತ್ತು ಮನೆಯಲ್ಲಿಯೇ ಇರುತ್ತೇನೆ "ಎಂದು ಅವರು ತಿಳಿಸಿದ್ದಾರೆ.